Asianet Suvarna News Asianet Suvarna News

ಲಂಡನ್‌ನ ಬಸವೇಶ್ವರ ಪುತ್ಥಳಿಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ರಿಂದ ಗೌರವಾರ್ಪಣೆ

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಲಂಡನ್‌ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಲಂಡನ್‌ನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಲಂಬೆತ್‌ ಬಸವೇಶ್ವರ ಸಂಘದ ಮುಖ್ಯಸ್ಥ ಡಾ. ನೀರಜ್‌ ಪಾಟೀಲ್‌ ಕೂಡ ಉಪಸ್ಥಿತರಿದ್ದರು. 

Union minister for state rajeev chandrashekhar pays tribute to basaveshwara statue in london
Author
Bengaluru, First Published Jul 1, 2022, 7:02 PM IST

ನವದೆಹಲಿ: ಕೇಂದ್ರ ಎಲೆಕ್ಟ್ರಾನಿಕ್ಸ್‌, ಐಟಿ ಮತ್ತು ಕೌಶಲಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಲಂಡನ್‌ನಲ್ಲಿ ಬಸವಣ್ಣನವರ ಪುತ್ಥಳಿಗೆ ಗೌರವಾರ್ಪಣೆ ಮಾಡಿದರು. ಬಸವೇಶ್ವರ ಪುತ್ಥಳಿಗೆ ಹಾರ ಹಾಕಿ ಭಕ್ತಿಪೂರ್ವಕವಾಗಿ ಶ್ರದ್ಧಾಂಜಲಿ ಅರ್ಪಿಸಿದರು. ಇಂಗ್ಲೆಂಡಿನ ಬ್ರಿಟೀಷ್‌ ಸಂಸತ್ತಿನ ಎದುರಿನಲ್ಲಿ ಬಸವೇಶ್ವರ ಅವರ ನೆನಪಿಗಾಗಿ ಪುತ್ಥಳಿಯನ್ನು ಇರಿಸಲಾಗಿದೆ.  

ಬಸವಣ್ಣ ಅವರ ತತ್ವ, ಸಿದ್ಧಾಂತ ಮತ್ತು ಮಾರ್ಗದರ್ಶನಗಳನ್ನು ಇಂಗ್ಲೆಂಡಿನಲ್ಲಿ ಪ್ರಚಾರ ಮಾಡುತ್ತಿರುವ ಮತ್ತು ಜನರಿಗೆ ಬಸವಣ್ಣನವರ ಆದರ್ಶಗಳನ್ನು ಪರಿಚಯಿಸಿತ್ತಿರುವ ಲಂಬೆತ್‌ ಬಸವೇಶ್ವರ ಫೌಂಡೇಷನ್‌ನ ಪದಾಧಿಕಾರಿಗಳ ಶ್ರಮವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. 

2022ರ ನವೆಂಬರ್‌ 14 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬಸವೇಶ್ವರರ ಪುತ್ಥಳಿಯನ್ನು ಅನಾವರಣ ಮಾಡಿದ್ದರು. ಇಂಗ್ಲೆಂಡ್‌ ನೆಲದಲ್ಲಿ ಭಾರತದ ಪ್ರಧಾನಿಯೊಬ್ಬರು ಪುತ್ಥಳಿ ಉದ್ಘಾಟಿಸಿದ್ದು ಇದೇ ಮೊದಲು. ಈ ಕಾರಣಕ್ಕಾಗಿಯೂ ಬಸವೇಶ್ವರರ ಪುತ್ಥಳಿ ಅನಾವರಣ ಕಾರ್ಯಕ್ರಮ ಸಾಕಷ್ಟು ಜನರನ್ನು ಸೆಳೆದಿತ್ತು. 

ಸಚಿವ ರಾಜೀವ್‌ ಚಂದ್ರಶೇಖರ್‌ ಅವರನ್ನು ಲಂಬೆತ್‌ ಬಸವೇಶ್ವರ ಸಂಘದ ಮುಖ್ಯಸ್ಥ ಡಾ. ನೀರಜ್‌ ಪಾಟೀಲ್‌ ಅವರು ಸ್ವಾಗತಿಸಿದರು. ನೀರಜ್‌ ಪಾಟೀಲ್‌ ಲಂಬೆತ್‌ನ ಲಂಡನ್‌ ಬರೋದ ಮಾಜಿ ಮೇಯರ್‌ ಕೂಡ ಆಗಿದ್ದವರು. ಮೂಲ ಕರ್ನಾಟಕದವರಾದ ಪಾಟೀಲ್‌, ಬಸವಣ್ಣ ಅವರ ತತ್ವಾದರ್ಶಗಳನ್ನು ಲಂಡನ್‌ ನಾಗರಿಕರಿಗೆ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ಲಂಡನ್‌ ಭೇಟಿಯ ಕುರಿತಾಗಿ ರಾಜೀವ್‌ ಚಂದ್ರಶೇಖರ್‌ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಿಂದ ಟ್ವೀಟ್‌ ಮಾಡಿದ್ದಾರೆ. "ಲಂಡನ್ ನಲ್ಲಿರುವ ಥೇಮ್ಸ್ ನದಿಯ ದಡದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು" ಎಂದು ಬರೆದುಕೊಂಡಿದ್ದಾರೆ. 

 

ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಭೇಟಿ

ಬಸವಣ್ಣನವರ ತತ್ವಾದರ್ಶಗಳು ಇಡೀ ಜಗತ್ತೇ ಅನುಸರಿಸುವ ಅಗತ್ಯವಿದೆ. ಸಮಾನತೆ, ಸರ್ವಧರ್ಮ ಸಹಿಷ್ಣುತೆ, ವರ್ಣಬೇಧ, ಸಮಾನ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಬಸವಣ್ಣ ಅವರು ತಳೆದ ನಿಲುವನ್ನು ಪ್ರಪಂಚದ ಹಲವಾರು ದೇಶಗಳು ಅಳವಡಿಸಿಕೊಂಡಿದೆ. ಸರ್ಕಾರ ಎಂಬ ಕಲ್ಪನೆಯೇ ಇಲ್ಲದ ಕಾಲಘಟ್ಟದಲ್ಲಿ ಅನುಭವ ಮಂಟಪ ಆರಂಭಿಸಿ, ಸಂಸತ್ತಿನ ನಿಜವಾದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟಿದ್ದೇ  ಬಸವಣ್ಣ ಎಂದು ಹೇಳಿದ್ದಾರೆ.

 

Follow Us:
Download App:
  • android
  • ios