ಉಕ್ರೇನ್ ಸಂಪೂರ್ಣ ಕೈವಶ ಮಾಡಲು ರಷ್ಯಾ ಸತತ ದಾಳಿ ಪ್ರತಿ ದಾಳಿ ನಡೆಸುತ್ತಿದೆ ಉಕ್ರೇನ್, ರಷ್ಯಾ ಯುದ್ಧವಿಮಾನ ಪತನ ಉಕ್ರೇನ್ ರಕ್ಷಣಾ ಇಲಾಖೆ ಸ್ಪಷ್ಟನೆ, ಬದಲಾಗುತ್ತಿದೆ ಯುದ್ಧದ ಗತಿ
ಉಕ್ರೇನ್(ಮಾ.06); ಉಕ್ರೇನ್ ವಿರುದ್ಧ ಯುದ್ಧ ಸಾರಿದ ರಷ್ಯಾಗೆ(Russia Ukraine war) ದಿನದಿಂದ ದಿನಕ್ಕೆ ಹಿನ್ನಡೆಯಾಗುತ್ತಿದೆ.ಕಳೆದ 10 ದಿನಗಳಿಂದ ಉಕ್ರೇನ್‌ನ ಒಂದೊಂದೇ ನಗರಗಳನ್ನು ಧ್ವಂಸ ಮಾಡುತ್ತಿದ್ದ ರಷ್ಯಾಗೆ ಇದೀಗ ಉಕ್ರೇನ್ ತಿರುಗೇಟು ನೀಡುತ್ತಿದೆ. ರಷ್ಯಾ ಟ್ಯಾಂಕರ್, ಯುದ್ಧ ವಿಮಾನಗಳನ್ನು ಹೊಡೆದುರುಳಿಸುತ್ತಿದೆ. ಇತ್ತೀಚೆಗೆ ಉಕ್ರೇನ್‌ನ ಅತೀ ದೊಡ್ಡ ವಿಮಾನದ ಮೇಲೆ ಕ್ಷಿಪಣಿ ದಾಳಿ ಮಾಡಿ ಧ್ವಂಸ ಮಾಡಿದ್ದ ರಷ್ಯಾಗೆ ಉಕ್ರೇನ್ ತಿರುಗೇಟು ನೀಡಿದೆ. ರಷ್ಯಾದ ಯುದ್ಧವಿಮಾನವನ್ನು(Russian attack aircraft) ಉಕ್ರೇನ್ ಹೊಡೆದುರುಳಿಸಿದೆ. ಈ ಕುರಿತು ಉಕ್ರೇನ್ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಉತ್ತರ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾಗೆ ಕಠಿಣ ಸವಾಲು ಎದುರಾಗಿದೆ. ಚೆರ್ನೀವ್ ಪ್ರಾಂತ್ಯದ ಹೊರವಲಯದಲ್ಲಿ ದಾಳಿಗೆ ಮುಂದಾಗಿದ್ದ ರಷ್ಯಾ ಯುದ್ಧ ವಿಮಾನವನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ. ರಷ್ಯಾ ವಿಮಾನ ಪತವಾಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ಪತನವಾಗುತ್ತಿರುವ ವೇಳೆ ಸ್ಥಳೀಯರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ.
Russia-Ukraine War; ಖಾರ್ಕಿವ್ ಮೇಲಿನ ವೈಮಾನಿಕ ದಾಳಿಯಲ್ಲಿ 6 ಜನರು ಬಲಿ
ಮಾರ್ಚ್ 5 ರಂದು ನಡೆದ ಕಾಳಗದಲ್ಲಿ ರಷ್ಯಾದ 5 ಯುದ್ಧ ವಿಮಾನ, 4 ಹೆಲಿಕಾಪ್ಟರ್‌ನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ವಾಯು ಸೇನೆ ಹೇಳಿದೆ. ಇದುವರೆಗೆ ರಷ್ಯಾ 44 ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ವಾಯುಸೇನೆ ಹೇಳಿದೆ. ಉಕ್ರೇನ್‌ನ ಅತೀ ದೊಡ್ಡ ಸರಕು ವಿಮಾನದ ಮೇಲೆ ಕ್ಷಿಪಣಿ ದಾಳಿ ಪುಡಿ ಮಾಡಿದ್ದ ರಷ್ಯಾದ ವಿರುದ್ಧ ಉಕ್ರೇನ್ ಸೇಡು ತೀರಿಸಿಕೊಳ್ಳುತ್ತಿದೆ. ರಷ್ಯಾದ ಯುದ್ಧವಿಮಾನ, ಹೆಲಿಕಾಪ್ಟರ್ ಟಾರ್ಗೆಟ್ ಮಾಡಿ ಹೊಡೆದುರಳಿಸಲಾಗುತ್ತಿದೆ.
ರಷ್ಯಾ ದಾಳಿಗೆ ಜಗತ್ತಿನ ಅತಿದೊಡ್ಡ ಸರಕು ವಿಮಾನ ನಾಶ
ರಷ್ಯಾ ಪಡೆಗಳ ದಾಳಿಯಿಂದಾಗಿ ಉಕ್ರೇನಿನ ಗೋಸ್ಟೋಮೆಲ್ ವಿಮಾನ ನಿಲ್ದಾಣದಲ್ಲಿದ್ದ ಜಗತ್ತಿನ ಅತಿದೊಡ್ಡ ವಿಮಾನ ಆ್ಯಂಟೋನೋವ್ ಎಎನ್-225 ಸಂಪೂರ್ಣ ನಾಶವಾಗಿದೆ.ಫೆ.29ರಂದೇ ರಷ್ಯಾ ನಡೆಸಿದ ದಾಳಿಯಲ್ಲಿ ಇದು ಸಂಪೂರ್ಣ ನಾಶವಾಗಿದೆ. ಆದರೆ ಸಂಪೂರ್ಣ ನಾಶವಾಗಿದೆ ಎಂದು ಉಕ್ರೇನ್ ಹೇಳಿರಲಿಲ್ಲ. ಬದಲಾಗಿ ಅದನ್ನು ಮರುನಿರ್ಮಾಣ ಮಾಡಲಾಗುವುದು ಎಂದಿತ್ತು. ಆದಾಗ್ಯೂ, ಇದರ ಮರುನಿರ್ಮಾಣ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ.ಈ ವಿಮಾನವನ್ನು ‘ಮ್ರಿಯಾ’ ಎಂದು ಕರೆಯಲಾಗುತ್ತಿದ್ದು, ಉಕ್ರೇನಿ ಭಾಷೆಯಲ್ಲಿ ಇದರ ಅರ್ಥ ‘ಕನಸು’ ಎಂಬುದಾಗಿದೆ.
11ನೇ ದಿನಕ್ಕೆ ಕಾಲಿಟ್ಟ ಯುದ್ಧ: ಉತ್ತರ, ದಕ್ಷಿಣ ಭಾಗದಿಂದ ರಷ್ಯಾ ಅಟ್ಯಾಕ್
ವಿಶೇಷತೆ:
ಎಎನ್-225 ಮ್ರಿಯಾ ಜಗತ್ತಿನ ಅತಿದೊಡ್ಡ ಸಾರಿಗೆ ವಿಮಾನವಾಗಿತ್ತು. ಮರುಬಳಕೆ ಮಾಡಬಹುದಾದ ಏರೋಸ್ಪೇಸ್ ಸಾರಿಗೆ ವ್ಯವಸ್ಥೆಯಲ್ಲಿ ಬಾಹ್ಯಾಕಾಶ ಉಡಾವಣಾ ತಾಣವಾಗಿ ಬಳಸುವ ಉದ್ದೇಶದಿಂದ ಈ ವಿಮಾನವನ್ನು ಅಭಿವೃದ್ಧಿ ಪಡಿಸಲಾಗಿತ್ತು.
ನಾಳೆ ಉನ್ ರಷ್ಯಾ ನಡುವೆ 3ನೇ ಸುತ್ತಿನ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವು ನಿಟ್ಟಿನಲ್ಲಿ 3ನೇ ಹಂತರ ಸಂಧಾನ ಮಾತುಕತೆ ಸೋಮವಾರ ನಡೆಯಲಿದೆ. ಉಕ್ರೇನ್ ಪರ ಸಂಧಾನಕಾರನಾಗಿ ಕಾರ್ಯನಿರ್ವಹಿಸುತ್ತಿರುವ ಡೇವಿಡ್ ಅರ್ಖಾಮಿಯಾ ಅವರು ಶನಿವಾರ ರಾತ್ರಿ ಈ ವಿಷಯ ಪ್ರಕಟಿಸಿದ್ದಾರೆ. ಈ ಮಾತುಕತೆಯಲ್ಲೂ ಕದನವಿರಾಮ ಘೋಷಣೆ, ಯುದ್ಧ ನಿಲ್ಲಿಸುವಂತಹ ಒಪ್ಪಂದಕ್ಕೆ ಸಹಿ ಹಾಕಲು ಉಕ್ರೇನ್ ಬೇಡಿಕೆ ಒಡ್ಡಬಹುದು. ರಷ್ಯಾ ಸಹ ಈ ಮಾತುಕತೆಯಲ್ಲಿ ಉಕ್ರೇನ್ ಮೇಲೆ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ.
2ನೇ ಹಂತದ ಮಾತುಕತೆಯ ವೇಳೆ ನಾಗರಿಕರ ಸ್ಥಳಾಂತರದ ವೇಳೆ ಕದನ ವಿರಾಮ ಘೋಷಿಸಲು ಉಭಯ ರಾಷ್ಟ್ರಗಳು ನಿರ್ಧಾರ ತೆಗೆದುಕೊಂಡಿದ್ದವು. ಆದರೆ ಮರಿಯುಪೋಲ್‌ನಲ್ಲಿ ನಾಗರಿಕರ ಸ್ಥಳಾಂತರದ ವೇಳೆ ರಷ್ಯಾ ಶೆಲ್ ದಾಳಿ ನಡೆಸಿದ್ದರಿಂದ ಕದನ ವಿರಾಮ ಘೋಷಣೆ ಮುರಿದುಬಿದ್ದಿತ್ತು. ಎರಡನೇ ಮಾತುಕತೆಯ ವೇಳೆ ಉಕ್ರೇನ್ 3 ಷರತ್ತುಗಳನ್ನು ವಿಧಿಸಿತ್ತು. ಆದರೆ ರಷ್ಯಾ ಅವುಗಳಿಗೆ ಒಪ್ಪಿಗೆ ನೀಡಿರಲಿಲ್ಲ
