Ukraine Under Attack ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್, ಮುದ್ದಿನ ಸಾಕು ಪ್ರಾಣಿಗಳ ಜೊತೆ ದೇಶ ತೊರೆಯುತ್ತಿದ್ದಾರೆ ಜನ!

  • ತಮ್ಮ ಪ್ರಾಣ ರಕ್ಷಣೆ ಜೊತೆಗೆ ಸಾಕು ಪ್ರಾಣಿಗಳ ರಕ್ಷಣೆ
  • ಪೊಲೆಂಡ್ ರೋಮೆನಿಯಾ ಸೇರಿದಂತೆ ನೆರೆ ದೇಶಕ್ಕೆ ಜನ
  • ಮೆಟ್ರೋ, ರೈಲು ನಿಲ್ದಾಣದಲ್ಲಿ ಸಾಕು ಪ್ರಾಣಿಗಳ ಜೊತೆ ಉಕ್ರೇನ್ ಜನ
Ukraine people fleeing country with their pets to seek shelter from Russian airstrikes ckm

ಉಕ್ರೇನ್(ಫೆ.26): ರಷ್ಯಾ ದಾಳಿಗೆ(Russia Attack) ತುತ್ತಾಗಿರುವ ಉಕ್ರೇನ್(Ukraine) ಹಾಗೂ ಅಲ್ಲಿನ ಜನರ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಒಂದೆಡೆಯಿಂದ ರಷ್ಯಾದ ದಾಳಿಗೆ ಎಲ್ಲಿ ಬೂದಿಯಾಗುತ್ತೇವೆ ಅನ್ನೋ ಆತಂಕ ಜನರಲ್ಲಿ ಮನೆ ಮಾಡಿದೆ. ಪ್ರಾಣ ಉಳಿಸಿಕೊಳ್ಳಲು ಉಕ್ರೇನ್ ಜನ ಪೊಲೆಂಡ್, ರೋಮೆನಿಯಾ, ಸ್ಲೋವಾಕಿಯಾ ಸೇರಿದಂತೆ ನೆರ ದೇಶಗಳಿದೆ ತೆರಳುತ್ತಿದ್ದಾರೆ. ಹೀಗೆ ತೆರಳುತ್ತಿರುವ ಉಕ್ರೇನ್ ಮಂದಿ ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನು(Pets) ಹಿಡಿದು ಗಡಿ ಪ್ರವೇಶಿಸುತ್ತಿದ್ದಾರೆ. 

ರಷ್ಯಾ ದಾಳಿಗೆ 200ಕ್ಕೂ ಹೆಚ್ಚು ಉಕ್ರೇನ್(Russia Ukraine War) ನಾಗರೀಕರು ಸಾವನ್ನಪ್ಪಿದ್ದಾರೆ. ಕಣ್ಣ ಮುಚ್ಚಿ ತೆರೆಯುವುದರೊಳಗೆ ರಷ್ಯಾ ಶೆಲ್, ಬಾಂಬ್ ದಾಳಿಗಳು ನಡೆಯುತ್ತಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಉಕ್ರೇನ್ ಮಂದಿ ಜೀವ ಭಯದಲ್ಲಿದ್ದಾರೆ. ಹೀಗಾಗಿ ಕುಟುಂಬ ಸಮೇತ ಸುರಕ್ಷಿತ ತಾಣಗಳಿಗೆ ತೆರಳುತ್ತಿದ್ದಾರೆ. ಮೆಟ್ರೋ, ರೈಲು ಸೇರಿದಂತೆ ರಸ್ತೆ ಮಾರ್ಗದ ಮೂಲಕ ನೆರೆಯ ದೇಶಗಳತ್ತ ಸಾಗುತ್ತಿದ್ದಾರೆ. ಹೀಗೆ ತಮ್ಮ ಪ್ರಾಣ ರಕ್ಷಣೆಗಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಆದರೆ ತಮ್ಮ ಪ್ರಾಣ ರಕ್ಷಣೆ ಮಾತ್ರವಲ್ಲ, ಮುದ್ದಿನ ಸಾಕು ಪ್ರಾಣಿಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಮೂಕ ಪ್ರಾಣಿಗಳ ಮೇಲಿನ ವಿಶೇಷ ಪ್ರೀತಿಯನ್ನು ಮತ್ತೊಮ್ಮೆ ಉಕ್ರೇನ್ ಮಂದಿ ಸಾಬೀತು ಮಾಡಿದ್ದಾರೆ.

Russia Ukraine war ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ, ಮತ್ತೆ ಭಾರತದ ನೆರವು ಕೇಳಿದ ಝೆಲೆನ್ಸ್ಕಿ!

ಉಕ್ರೇನ್ ನೆರೆಯ ದೇಶಗಳಾದ ಪೊಲೆಂಡ್, ಮೊಲ್ಡೋವಾ ಸೇರಿದಂತೆ ಇತರ ರಾಷ್ಟ್ರಗಳತ್ತ ಜನರು ತೆರಳುತ್ತಿದ್ದಾರೆ. ಇವರ ಜೊತೆ ಮುದ್ದಿನ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಸೇರಿದಂತೆ ಇತರ ಪ್ರಾಣಿಗಳನ್ನು ಹಿಡಿದು ಸಾಗುತ್ತಿದ್ದಾರೆ. ಮಕ್ಕಳು ಸೇರಿದಂತೆ ಕುಟುಂಬದ ಜೊತೆ ಇತರ ರಾಷ್ಟ್ರಗಳಿಗೆ ತೆರಳುತ್ತಿರುವ ಜನ, ಸಾಕು ಪ್ರಾಣಿಗಳ ರಕ್ಷಣೆಯನ್ನು ಮಾಡುತ್ತಿದ್ದಾರೆ.

Ukraine people fleeing country with their pets to seek shelter from Russian airstrikes ckm

ಉಕ್ರೇನ್ ತೊರೆಯುತ್ತಿರುವ ಮಂದಿಯಲ್ಲಿ ಬಹುತೇಕರ ಕೈಯಲ್ಲಿ ಸಾಕು ಪ್ರಾಣಿಗಳನ್ನು ಹಿಡಿದು ಮುಂದೆ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಲವರು ತಮ್ಮ ಸಾಕು ಪ್ರಾಣಿಗಳನ್ನು ಬಿಗಿದಪ್ಪಿ ಕಣ್ಣೀರು ಹಾಕುತ್ತಲೇ ಮುಂದೆ ಸಾಗುತ್ತಿದ್ದಾರೆ.

ಯಾವುದೇ ಸಮಯದಲ್ಲಿ ಎಲ್ಲಿಂದ ಬೇಕಾದರೂ ರಷ್ಯಾ ದಾಳಿ ನಡೆಸಬಹುದು ಎಂಬ ಆತಂಕದಲ್ಲಿರುವ ಉಕ್ರೇನಿಯರು ಮತ್ತು ದೇಶದ ನಾನಾ ಭಾಗಗಳಲ್ಲಿ ಇರುವ ಸಾವಿರಾರು ವಿದೇಶಿಯರು ತಮ್ಮ ಸಾಕು ಪ್ರಾಣಿಗಳೊಂದಿಗೆ ಬಂಕರ್‌ಗಳ ಮೊರೆ ಹೋಗಿದ್ದಾರೆ. ತಮ್ಮೊಂದಿಗೆ ಸಾಕು ಪ್ರಾಣಿಗಳನ್ನೂ ತಂದಿಟ್ಟುಕೊಂಡಿದ್ದಾರೆ.

Russia Ukraine War: ಸರ್ವದಿಕ್ಕುಗಳಿಂದಲೂ ದಾಳಿ ಮಾಡಿ, ರಷ್ಯಾ ಹೊಸ ಆದೇಶ!

ಸಾಮಾನ್ಯ ಮನೆಗಳಿಗಿಂತ ಭಿನ್ನವಾಗಿರುವ, ಪುಟ್ಟಮತ್ತು ವಿಶಾಲವಾಗಿ ಇರುವ ಇಂಥ ಬಂಕರ್‌ಗಳಲ್ಲಿ ಮಲಗುವ, ಶೌಚಾಲಯದ ಸಾಮಾನ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳಾದ ಆಹಾರ, ಔಷಧಿ ಮೊದಲಾದವುಗಳಿಗಾಗಿ ಮಾತ್ರವೇ ಜನರು ಇಂಥ ಬಂಕರ್‌ಗಳಿಂದ ಹೊರಬರುತ್ತಿದ್ದು ಉಳಿದ ಸಮಯವೆಲ್ಲಾ ಇದರಲ್ಲೇ ಕಳೆಯುತ್ತಿದ್ದಾರೆ. ಸಾವಿರಾರು ಜನರಿಗೆ ಕಳೆದ 2-3 ದಿನಗಳಿಂದ ಈ ನೆಲ ಮಾಳಿಗೆಗಳೇ ಆಶ್ರಣದಾಣವಾಗಿ ಹೊರಹೊಮ್ಮಿವೆ.

ತಕ್ಷಣಕ್ಕೆ ಯುದ್ಧ ಮುಗಿದರೆ ಇಲ್ಲಿ ರಕ್ಷಣೆ ಪಡೆದವರಿಗೆ ಅಹಾರ ಸಮಸ್ಯೆಯಾಗದು. ಒಂದು ವೇಳೆ ಪರಿಸ್ಥಿತಿ ಇನ್ನಷ್ಟುದಿನ ಮುಂದುವರೆದರೆ ಆಗ ನಾನಾ ರೀತಿಯ ಸಮಸ್ಯೆ ಎದುರಾಗುವ ಭೀತಿಯೂ ಇದೆ.

ಉಕ್ರೇನ್ ಜನರ ವಲಸೆ
ರಷ್ಯಾ ದಾಳಿಯಿಂದ ತತ್ತರಗೊಂಡಿರುವ ಉಕ್ರೇನ್‌ನ ಸುಮಾರು 1 ಲಕ್ಷ ಪ್ರಜೆಗಳು ಪ್ರಾಣ ಉಳಿದರೆ ಸಾಕು ಎಂಬಂತೆ ತಮ್ಮ ಮನೆ-ಮಠ, ಆಸ್ತಿಪಾಸ್ತಿಗಳನ್ನು ಬಿಟ್ಟು ನೆರೆಯ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉಕ್ರೇನ್‌ ಪೂರ್ವ ಭಾಗದಲ್ಲಿ ರಷ್ಯಾ ಯುದ್ಧ ಸಾರಿದ್ದು, ಈ ಭಾಗದಲ್ಲಿರುವ ಬಂಡುಕೋರರಿಗೆ ರಷ್ಯಾ ಮುಕ್ತ ಆಹ್ವಾನವೇ ನೀಡಿದೆ. ಇದರ ಹೊರತಾಗಿ, ಪಶ್ಚಿಮ ಮತ್ತು ದಕ್ಷಿಣದ ಗಡಿ ಭಾಗಗಳಿಂದ ಸಾವಿರಾರು ಜನ ಆತಂಕದಿಂದ ಹಂಗೇರಿ, ಪಶ್ಚಿಮ ಯುರೋಪ್‌ ಸೇರಿದಂತೆ ಇನ್ನಿತರ ದೇಶಗಳಿಗೆ ಪಲಾಯನ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಯುದ್ಧದ ಪರಿಣಾಮ ಉಕ್ರೇನ್‌ ಪ್ರಜೆಗಳ ಪರಿಸ್ಥಿತಿ ಭೀಕರವಾಗಿದ್ದು, ಸುರಕ್ಷಿತ ತಾಣಗಳಿಗೆ ಅವರು ತಲುಪುವಂತೆ ನೆರವಾಗಲು ನೆರೆ-ಹೊರೆಯ ದೇಶಗಳು ಗಡಿಗಳನ್ನು ಮುಕ್ತವಾಗಿಡಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಹೇಳಿದೆ. ಸಾವಿರಾರು ಜನರು ತಮ್ಮ ಕಾರುಗಳಲ್ಲಿ ಹಂಗೇರಿಯತ್ತ ಹೊರಟಿದ್ದು, ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ 2 ಕಿ.ಮೀ.ಗಿಂತಲೂ ಹೆಚ್ಚು ಉದ್ದ ಕಾರುಗಳ ದಟ್ಟಣೆ ಸಂಭವಿಸಿತ್ತು. ಹೀಗಾಗಿ ಗಡಿ ದಾಟಲು ಜನರು ಸುಮಾರು 6 ಗಂಟೆಗಳ ಕಾಲ ಕಾಯುವ ಅನಿವಾರ್ಯತೆ ಎದುರಾಗಿತ್ತು.

Latest Videos
Follow Us:
Download App:
  • android
  • ios