Russia Ukraine War: ಸರ್ವದಿಕ್ಕುಗಳಿಂದಲೂ ದಾಳಿ ಮಾಡಿ, ರಷ್ಯಾ ಹೊಸ ಆದೇಶ!
ಮಾತುಕತೆಗೆ ಉಕ್ರೇನ್ ದೇಶದ ನಿರಾಕರಣೆ
ರಷ್ಯಾದ ರಕ್ಷಣಾ ಇಲಾಖೆಯ ಆದೇಶ
ಉಕ್ರೇನ್ ಮೇಲೆ ಸರ್ವದಿಕ್ಕುಗಳಿಂದಲೂ ದಾಳಿ ಮಾಡಿ
ಮಾಸ್ಕೋ (ಫೆ.26): ಬೆಲಾರಸ್ (Belarus) ದೇಶದಲ್ಲಿ ದ್ವಿಪಕ್ಷೀಯ ಮಾತುಕತೆಗೆ ನಿರಾಕರಿಸಿದ ಉಕ್ರೇನ್ (Ukraine) ಮೇಲೆ ಸರ್ವದಿಕ್ಕುಗಳಿಂದಲೂ (all directions) ದಾಳಿ ನಡೆಸಿ ಎಂದು ರಷ್ಯಾದ ರಕ್ಷಣಾ ಇಲಾಖೆ (defence ministry ), ತನ್ನ ಸೇನೆಗೆ ಅದೇಶ ರವಾನಿಸಿದೆ. ಅದರೊಂದಿಗೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು, ಮಿಲಿಟರಿ ಕಾರ್ಯಾಚರಣೆಗಿಂತ ಹೆಚ್ಚಾಗಿ ಸಂಪೂರ್ಣ ಯುದ್ಧ ರೀತಿಯಲ್ಲಿ ಮಾರ್ಪಾಡಾಗುವುದು ಖಚಿತಗೊಂಡಿದೆ.
ರಷ್ಯಾದ ಮಾತುಗಳನ್ನು ಒಪ್ಪಲು ಉಕ್ರೇನ್ ನಿರಾಕರಿಸಿದೆ. ಹಾಗಾಗಿ ತನ್ನ ಆಕ್ರಮಣವನ್ನು "ಎಲ್ಲಾ ದಿಕ್ಕುಗಳಿಂದ" ವಿಸ್ತರಿಸಲು ರಷ್ಯಾದ ಸೈನ್ಯಕ್ಕೆ ಆದೇಶ ನೀಡಲಾಗಿದೆ ಎಂದು ಮಾಸ್ಕೋದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. "ಉಕ್ರೇನಿಯನ್ ಕಡೆಯವರು ಸಂಧಾನ ಪ್ರಕ್ರಿಯೆಯನ್ನು ತಿರಸ್ಕರಿಸಿದ ನಂತರ, ಕಾರ್ಯಾಚರಣೆಯ ಯೋಜನೆಗಳಿಗೆ ಅನುಗುಣವಾಗಿ ಎಲ್ಲಾ ದಿಕ್ಕುಗಳಿಂದ ದಾಳಿಯನ್ನು ಇನ್ನಷ್ಟು ಹೆಚ್ಚು ಮಾಡಲು ಸೇನೆಯ ಎಲ್ಲಾ ಘಟಕಗಳಿಗೆ ಶನಿವಾರ ಆದೇಶಗಳನ್ನು ನೀಡಲಾಗಿದೆ" ಎಂದು ರಷ್ಯಾದ ಸೇನಾ ವಕ್ತಾರ ಇಗೊರ್ ಕೊನಾಶೆಂಕೋವ್ (Russian army spokesman Igor Konashenkov) ಹೇಳಿದ್ದಾರೆ.
ಕದನ ವಿರಾಮದ ಮಾತುಕತೆಗೆ ಆಹ್ವಾನಿಸಿದ್ದ ರಷ್ಯಾದ ಸಲಹೆಗಳನ್ನು ಉಕ್ರೇನ್ ಶನಿವಾರ ತಿರಸ್ಕರಿಸುವ ಸಾಹಸ ಮಾಡಿದೆ. ಇದರ ಬೆನ್ನಲ್ಲಿಯೇ ರಷ್ಯಾ ದೇಶವು ಮಿಲಿಟರಿ ಸಂಘರ್ಷವನ್ನು ವಿಸ್ತರಿಸುತ್ತಿದೆ. ಕದನ ವಿರಾಮ ಪ್ರಕ್ರಿಯೆಗೆ ಸ್ವೀಕಾರರ್ಹವಲ್ಲದ ಷರತ್ತುಗಳನ್ನು ಸ್ವೀಕರಿಸಲು ದೇಶ ಬದ್ಧವಾಗಿಲ್ಲ ಎಂದು ಉಕ್ರೇನ್ ತಿಳಿಸಿದೆ.
ರಷ್ಯಾದ ಪಡೆಗಳು ಸತತ ಮೂರನೇ ದಿನದ ದಾಳಿಯಲ್ಲಿ ಶನಿವಾರ ಫಿರಂಗಿ ಮತ್ತು ಕ್ರೂಸ್ ಕ್ಷಿಪಣಿಗಳೊಂದಿಗೆ ಉಕ್ರೇನಿಯನ್ ನಗರಗಳ ಮೇಲೆ ದಾಳಿ ಮಾಡಿದವು. ಆದರೆ ರಾಜಧಾನಿ ಕೈವ್ ಇನ್ನೂ ಉಕ್ರೇನ್ ಬಳಿಯಲ್ಲಿಯೇ ಇದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಪಡೆಗಳು ಸತತ ಮೂರನೇ ದಿನದ ದಾಳಿಯಲ್ಲಿ ಶನಿವಾರ ಫಿರಂಗಿ ಮತ್ತು ಕ್ರೂಸ್ ಕ್ಷಿಪಣಿಗಳೊಂದಿಗೆ ಉಕ್ರೇನಿಯನ್ ನಗರಗಳ ಮೇಲೆ ದಾಳಿ ಮಾಡಿದವು. ಆದರೆ ರಾಜಧಾನಿ ಕೈವ್ ಇನ್ನೂ ಉಕ್ರೇನ್ ಬಳಿಯಲ್ಲಿಯೇ ಇದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಸಿಟಿ ಸೆಂಟರ್‌ನ ವಾಯುವ್ಯ ಪ್ರದೇಶದಲ್ಲಿ ಫಿರಂಗಿ ಮತ್ತು ಗ್ರಾಡ್ ಕ್ಷಿಪಣಿಗಳನ್ನು ಹಾರಿಸಲಾಗುತ್ತಿದೆ ಎಂದು ಉಕ್ರೇನ್ ನ ಸೈನಿಕರು ಹೇಳುತ್ತಿದ್ದು, ನಿರಂತರವಾಗಿ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
Russia Ukraine Crisis: ರಷ್ಯಾ ಸೇನೆಯನ್ನು ತಡೆಯುವ ಸಲುವಾಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ!
ಇನ್ನೊಂದೆಡೆ ಮಾಸ್ಕೋದಿಂದ ವೀಟೋ ಮಾಡಿದ ರಷ್ಯಾದ ಆಕ್ರಮಣವನ್ನು ಖಂಡಿಸುವ ಮತದಾನದಿಂದ ಭಾರತ ದೂರ ಉಳಿದ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ವಿಶ್ವಸಂಸ್ಥೆಯಲ್ಲಿ "ರಾಜಕೀಯ ಬೆಂಬಲ" ಕೋರಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದಕ್ಕೂ ಮೊದಲು, 44 ವರ್ಷದ ಝೆಲೆನ್ಸ್ಕಿ, ಸೆಲ್ಫಿ ವಿಡಿಯೋ ಪೋಸ್ಟ್ ಮಾಡುವ ಮೂಲಕ, ರಷ್ಯಾ ಸೇನಾಪಡೆಯ ಕೈವ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಅವರ ಪ್ರಯತ್ನ ಹಳಿತಪ್ಪಿದೆ ಎಂದು ಹೇಳಿದರು. ಅದಲ್ಲದೆ, ಕೈವ್ ನಿಂದ ನಾನು ಪಲಾಯನವಾಗಿದ್ದೇನೆ ಎಂದು ರಷ್ಯಾ ಹೇಳಿದೆ. ಅದು ಸುಳ್ಳು ಎಂದು ಸಾಬೀತು ಮಾಡುವ ಸಲುವಾಗಿ ವಿಡಿಯೋ ಮಾಡಿದ್ದಾಗಿ ತಿಳಿಸಿದರು. "ನಾನು ಕೈವ್ ನಲ್ಲಿಯೇ ಇದ್ದೇನೆ. ಉಕ್ರೇನ್ ಶರಣಾಗತಿಯಾಗುವುದಿಲ್ಲ. ನಮ್ಮ ರಾಜ್ಯವನ್ನು ರಕ್ಷಣೆ ಮಾಡಲು ನಾವು ಬದ್ಧ, ಏಕೆಂದರೆ ಸದಸ್ಯ ಶಸ್ತ್ರಗಳೇ ನಮ್ಮ ಸತ್ಯ' ಎಂದು ಹೇಳುವ ಮೂಲಕ ಪಲಾಯನವಾಗುವ ಮಾತನ್ನು ತಳ್ಳಿಹಾಕಿದರು.ಸಂಘರ್ಷದಲ್ಲಿ ಮೂವರು ಮಕ್ಕಳು ಸೇರಿದಂತೆ 198 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,115 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಹೇಳಿದ್ದಾರೆ. ಕೈವ್‌ನ ಮೇಯರ್ ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆಯವರೆಗೆ ಸಂಪೂರ್ಣ ಕರ್ಫ್ಯೂಗೆ ಆದೇಶ ನೀಡದ್ದಾರೆ.
Russia Ukraine Crisis: ವಿಮಾನದ ಟಿಕೆಟ್ ಬೇಡ, ಶಸ್ತ್ರಗಳನ್ನು ಕೊಡಿ ಸಾಕು, ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷನ ತಾಕೀತು!
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶುಕ್ರವಾರ ಅಮೆರಿಕದ ಶಸ್ತ್ರಾಸ್ತ್ರ ಉಗ್ರಾಣದಿಂದ ಹೆಚ್ಚುವರಿ $350 ಮಿಲಿಯನ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಬಿಡುಗಡೆ ಮಾಡುವಂತೆ ಅಮೆರಿಕದ ರಕ್ಷಣಾ ಇಲಾಖೆಗೆ ಸೂಚನೆ ನೀಡಿದರು.