Asianet Suvarna News Asianet Suvarna News

Russia Ukraine war ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ, ಮತ್ತೆ ಭಾರತದ ನೆರವು ಕೇಳಿದ ಝೆಲೆನ್ಸ್ಕಿ!

  • ರಷ್ಯಾ ದಾಳಿಯಿಂದ ಕಂಗೆಟ್ಟ ಉಕ್ರೇನ್ ಜೊತೆ ಪ್ರಧಾನಿ ಮೋತು ಮಾತುಕತೆ
  • ಅಧ್ಯಕ್ಷ ವೋಲೋದಿಮಿರ್ ಝೆಲೆನ್ಸ್ಕಿ ಜೊತೆ ನರೇಂದ್ರ ಮೋದಿ ಮಾತುಕತೆ
  • ಶಾಂತಿ ಸ್ಥಾಪನೆಗೆ ಭಾರತದ ಮಧ್ಯಸ್ಥಿಕೆ ಬಯಸಿದ ಉಕ್ರೇನ್
Russia Ukraine war PM Modi speaks with ukraine President Volodymyr Zelenskyy express anguish about loss of life ckm
Author
Bengaluru, First Published Feb 26, 2022, 7:48 PM IST

ನವದೆಹಲಿ(ಫೆ.26): ಉಕ್ರೇನ್ ಮೇಲಿನ ದಾಳಿ ಮುಂದುವರಿಸಿರುವ ರಷ್ಯಾ(Russia Ukraine war) ಬಹುತೇಕ ಭಾಗಗಳನ್ನು ಕೈವಶ ಮಾಡಿಕೊಂಡಿದೆ. ರಷ್ಯಾ ದಾಳಿಗೆ(Russia Attack) 200ಕ್ಕೂ ಹೆಚ್ಚು ಉಕ್ರೇನ್ ನಾಗರೀಕರು ಸಾವನ್ನಪ್ಪಿದ್ದಾರೆ. ಇತ್ತ 1,000ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(PM Narendra Modi), ನೇರವಾಗಿ ಉಕ್ರೇನ್ ಅಧ್ಯಕ್ಷ ವೊಲೋದಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಾಂತಿ ಸ್ಥಾಪನೆಗೆ ಭಾರತದ ನೆರವು ಬೇಕು ಎಂದು ವೊಲೋದಿಮಿರ್ ಪುನರುಚ್ಚರಿಸಿದ್ದಾರೆ.

ಉಕ್ರೇನ್ ಪರಿಸ್ಥಿತಿ ಕುರಿತು ಝೆಲೆನ್ಸ್ಕಿ(Volodymyr Zelenskyy) ವಿವರಿಸಿದ್ದಾರೆ. ಪ್ರಾಣ ಹಾನಿ, ಆಸ್ತಿ ಪಾಸ್ತಿ ನಷ್ಟ, ಯುದ್ಧದ ಭೀಕರತೆಯನ್ನು ಮೋದಿಗೆ ವಿವರವಾಗಿ ತಿಳಿಸಿದ್ದಾರೆ. ಈ ವೇಳೆ ಉಕ್ರೇನ್ ಪರಿಸ್ಥಿತಿ ತೀವ್ರ ಸಂಕಟ ತಂದಿದೆ ಎಂದು ಮೋದಿ ಹೇಳಿದ್ದಾರೆ. ಮಾತುಕತೆಯಲ್ಲಿ ಝೆಲೆನ್ಸ್ಕಿ ಮತ್ತೆ ಭಾರತದ ನೆರವು ಕೇಳಿದ್ದಾರೆ. ಈಗಾಗಲೇ ರಷ್ಯಾ ಜೊತೆ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವಂತೆ ಮೋದಿಗೆ ಮನವಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಝೆಲೆನ್ಸ್ಕಿ ಶಾಂತಿ ಸ್ಥಾಪನೆಗೆ ಭಾರತದ ನೆರವು ಕೇಳಿದ್ದಾರೆ.

Russia Ukraine Crisis ವಿದಾಯ ಹೇಳುವಾಗ ಪುತ್ರಿ ಅಪ್ಪಿ ಹಿಡಿದು ಕಣ್ಣೀರು ಹಾಕಿದ ಯೋಧ, ಉಕ್ರೇನ್ ವಿಡಿಯೋ ವೈರಲ್

ಉಕ್ರೇನ್ ಅಧ್ಯಕ್ಷರ ಜೊತೆಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ, ಉಕ್ರೇನ್‌ನಲ್ಲಿರು ಭಾರತೀಯ ನಾಗರೀಕರು ಹಾಗೂ ವಿದ್ಯಾರ್ಥಿಗಳ ರಕ್ಷಣೆ ಹಾಗೂ ಸುರಕ್ಷತೆ ಬಗೆ ಕಾಳಜಿ ತೋರಿದ್ದಾರೆ. ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸಲು ಉಕ್ರೇನ್ ಅಧಿಕಾರಿಗಳ ನೆರವನ್ನು ಮೋದಿ ಕೇಳಿದ್ದಾರೆ. 

ಭಾರತದ ನೆರವು ಯಾಚನೆ!
ತನ್ನ ದೇಶದ ಮೇಲೆ ಮೂರೂ ದಿಕ್ಕುಗಳಿಂದ ಬಲಾಢ್ಯ ರಷ್ಯಾ ಯುದ್ಧ ಆರಂಭಿಸುತ್ತಿದ್ದಂತೆ, ವ್ಲಾದಿಮಿರ್‌ ಪುಟಿನ್‌ ಅವರ ಜತೆ ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಉಕ್ರೇನ್‌ ಸರ್ಕಾರವು ಭಾರತದ ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ಧ್ರುವದಲ್ಲಿ ನಿಂತಿತ್ತು ಎಂಬ ಸಂಗತಿ ಬಯಲಾಗಿದೆ.

1998ರಲ್ಲಿ ಅಂದಿನ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್‌ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಅದನ್ನು ಖಂಡತುಂಡವಾಗಿ ವಿರೋಧಿಸಿದ್ದ ಉಕ್ರೇನ್‌, ವಿಶ್ವಸಂಸ್ಥೆಯಲ್ಲೂ ಅದನ್ನು ಖಂಡಿಸಿತ್ತು. 25 ದೇಶಗಳ ಜತೆಗೂಡಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ನಿರ್ಬಂಧ ಜಾರಿಯಾಗುವಂತೆ ನೋಡಿಕೊಂಡಿತ್ತು.

Russia Ukraine Crisis: 198 ಜನರ ಸಾವು, 1,115 ಮಂದಿಗೆ ಗಾಯ!

ಪಾಕಿಸ್ತಾನವು ಭಾರತದ ಪರಂಪರಾಗತ ಶತ್ರು ದೇಶ ಎಂದು ಗೊತ್ತಿದ್ದರೂ, ಆ ದೇಶಕ್ಕೆ ನೂರಾರು ಟಿ-84 ಯುದ್ಧ ಟ್ಯಾಂಕ್‌ಗಳನ್ನು ಮಾರಾಟ ಮಾಡಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಯತ್ನಿಸುತ್ತಿದ್ದರೆ, ಅದರ ವಿರುದ್ಧ ಮತ ಹಾಕಿತ್ತು. ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ವಿಶ್ವಸಂಸ್ಥೆಯಲ್ಲೂ ಆಗ್ರಹಿಸಿತ್ತು. ಆದರೆ ಇದೇ ದೇಶ ಈಗ ಭಾರತದ ನೆರವು ಕೋರುತ್ತಿರುವುದು ಸೋಜಿಗ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಸಚಿವ ಜೈಶಂಕರ್‌ಗೆ ಉಕ್ರೇನ್‌ ವಿದೇಶಾಂಗ ಸಚಿವರ ಕರೆ
ಭಾರತದ ವಿದೇಶಾಂಗ ಸಚಿವ ಎಸ್‌. ಜೈ ಶಂಕರ್‌ ಅವರಿಗೆ ಉಕ್ರೇನಿನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಶುಕ್ರವಾರ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಜೈಶಂಕರ್‌ ಅವರು ಉಕ್ರೇನಿನಲ್ಲಿರುವ ಭಾರತೀಯರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಭಾರತವು ರಾಜತಾಂತ್ರಿಕತೆ ಹಾಗೂ ಮಾತುಕತೆಯನ್ನು ಬೆಂಬಲಿಸುತ್ತದೆ ಎಂದು ಯುದ್ಧದ ವಿಚಾರದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘ಉಕ್ರೇನಿನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಭಾರತೀಯ ಪ್ರಜೆಗಳ ಸಂಕಷ್ಟವನ್ನು ಉಕ್ರೇನ್‌ ಸಚಿವರ ಮೂಲಕ ತಿಳಿದುಕೊಂಡಿದ್ದೇನೆ. ಅವರ ಸುರಕ್ಷಿತ ವಾಪಸಾತಿಗಾಗಿ ಸಚಿವರು ಸಹಾಯ ಮಾಡುತ್ತಿರುವುದು ಪ್ರಶಂಸನೀಯ’ ಎಂದು ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios