ಅವಳಿ ಸಹೋದರರಿಂದ ಗರ್ಭಿಣಿ, ತಂದೆ ಯಾರೆಂದು ತಿಳಿಯಲಾಗದ ಮಹಿಳೆಗೆ ಕೈಹಿಡಿಯಲಿಲ್ಲ ವಿಜ್ಞಾನ, ಡಿಎನ್ಎ ಟೆಸ್ಟ್ ಮಾತ್ರವಲ್ಲ ಕಾನೂನಿಗೂ ಸವಾಲಾಗಿ ಪರಿಗಣಿಸಿದೆ. ಅಷ್ಟಕ್ಕೂ ತಂದೆ ಯಾರು? ಮಹಿಳೆ ಹೇಳೋದೇನು? 

ಲಂಡನ್ (ಮಾ.31) ಅವಳಿ ಸಹೋದರರ ಜೊತೆ ಸಂಬಂಧ ಬೆಳೆಸಿದ ಮಹಿಳೆಗೆ ಕಂಗಾಲಾಗಿದ್ದಾಳೆ. ಇಬ್ಬರ ಜೊತೆಗೂ ಬೆಡ್ ರೂಂ ಹಂಚಿಕೊಂಡಿದ್ದಾಳೆ. ಪರಿಣಾಮ ಗರ್ಭಿಣಿಯಾಗಿದ್ದಾರೆ. ಇದರಲ್ಲಿ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ಯಾರು ಅನ್ನೋದೇ ಗೊತ್ತಾಗುತ್ತಿಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಆದರೆ ಡಿಎನ್‌ಎ ಸೇರಿದಂತೆ ಯಾವುದೇ ಪರೀಕ್ಷೆಗೂ ಈ ಸವಾಲು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಕಾನೂನಿಗೂ ಸಂಕಷ್ಟ ಎದುರಾಗಿದೆ. ಮಹಿಳಾಗೂ ಮಗುವಿನ ಅಪ್ಪ ಯಾರೆಂದು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲದ ಪರಿಸ್ಥಿತಿ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಿಟನ್‌ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಲಂಡನ್ ನಿವಾಸಿಯಾಗಿರುವ ಮಹಿಳೆ ನಾಲ್ಕು ದಿನ ಅಂತರದಲ್ಲಿ ಇಬ್ಬರ ಜೊತೆ ಸಂಬಂಧ ಬೆಳೆಸಿದ್ದಾರೆ. ಇಬ್ಬರು ಅವಳಿಗಳು. ನಾಲ್ಕು ದಿನ ಇಬ್ಬರ ಜೊತೆ ಬೆಡ್ ಹಂಚಿಕೊಂಡಿದ್ದಾಳೆ. ಅವಳಿ ಸಹೋದರರು ಖುಷಿಯಾಗಿದ್ದರು. ಇತ್ತ ಮಹಿಳೆ ಡಬಲ್ ಖುಷಿಯಾಗಿದ್ದಳು. ಕೆಲ ತಿಂಗಳಲ್ಲಿ ಈಕೆ ಗರ್ಭಿಣಿಯಾಗಿದ್ದಾಳೆ. ಆದರೆ ಮಗುವಿನ ತಂದೆ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಕಾರಣ ಇಬ್ಬರ ಜೊತೆ ಹಾಸಿಗೆ ಹಂಚಿಕೊಂಡಿದ್ದಾಳೆ. ಇದರಲ್ಲಿ ಯಾರಿಂದ ಗರ್ಭಿಣಿಯಾಗಿದ್ದಾಳೆ ಅನ್ನೋದೇ ಗೊತ್ತಾಗುತ್ತಿಲ್ಲ.

ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಗೊಂದಲಗಳ ನಡುವೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ.ಇದರ ಬೆನ್ನಲ್ಲೇ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಕಾರಣ ಅವಳಿ ಸಹೋದರರ ಪೈಕಿ ಒಬ್ಬ ಇದು ತನ್ನ ಮಗು ಎಂದಿದ್ದಾನೆ. ಮಗುವಿನ ತಂದೆ ಎಂದು ಅವಳಿ ಸಹೋದರರ ಪೈಕಿ ಒಬ್ಬನ ಹೆಸರು ದಾಖಲಿಸಲಾಗಿದೆ. ಹೀಗಾಗಿ ಮತ್ತೊಬ್ಬ ಸಹೋದರ ಈ ಮಗುವಿನ ತಂದೆ ನಾನೂ ಆಗಿರುವ ಸಾಧ್ಯತೆ ಇದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾನೆ.

ಡಿಎನ್ಎ ಟೆಸ್ಟ್ ವಿಫಲ

ಸಾಮಾನ್ಯವಾಗಿ ತಂದೆ ಯಾರು ಎಂಬ ಗೊಂದಲ ಬಂದಾಗ ಡಿಎನ್ಎ ಟೆಸ್ಟ್ ಮಾಡಲಾಗುತ್ತದೆ. ಆದರೆ ಇಲ್ಲಿ ಅವಳಿ ಸಹೋದರರಾಗಿರುವ ಕಾರಣ ಇವರ ಡಿಎನ್ಎ ರಚನೆ ಒಂದೇ ರೀತಿ ಇರುತ್ತೆ. ಹೀಗಾಗಿ ಡಿಎನ್ಎ ಮೂಲಕ ತಂದೆ ಯಾರು ಅನ್ನೋದು ಪತ್ತೆ ಹಚ್ಚುವುದು ಅಸಾಧ್ಯವಾಗಿದೆ. ಸದ್ಯ ಇರುವ ತಂತ್ರಜ್ಞಾನ ಪರೀಕ್ಷೆಗಳ ಮೂಲಕ ತಂದೆ ಯಾರು ಎಂದು ಹೇಳುವುದು ಅಸಾಧ್ಯವಾಗಿದೆ.

ಕೋರ್ಟ್ ಹೇಳಿದ್ದೇನು

ಲಂಡನ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಜಸ್ಚೀಸ್ ಆ್ಯಂಡ್ರೂ ಮೆಕ್‌ಫರ್ಲೆನ್ ಮಾಡಿದ್ದಾರೆ. ತೀರ್ಪಿನ ವೇಳೆ ಕೆಲ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅವಳಿ ಸಹೋದರರ ಪೈಕಿ ಒಬ್ಬರು ತಂದೆ, ಆದರೆ ಯಾರು ಎಂದು ನಿಖರವಾಗಿ ಹೇಳುವುದು ಅಸಾಧ್ಯವಾಗಿದೆ. ಸದ್ಯ ಈ ಪ್ರಕರಣದಲ್ಲಿ ತಂದೆ ಯಾರು ಎಂದು ಗುರುತಿಸುವ ವಿಜ್ಞಾನವಿಲ್ಲ. ಭವಿಷ್ಯದಲ್ಲಿ ಇದು ಸಾಧ್ಯವಾಗಬಹುದು. ಆದರೆ ಗೊಂದಲ ಮುಂದುವರಿಯಲಿದೆ ಎಂದಿದ್ದಾರೆ.