ನೇಪಾಳದಲ್ಲಿ ವಿದ್ಯಾರ್ಥಿ ಪ್ರತಿಭಟನೆಯಿಂದ ಸರ್ಕಾರ ಉರುಳಿ ಬಿದ್ದು, ಹೊಸ ಸರ್ಕಾರ ರಚನೆಯಾಗಿತ್ತು. ಬಲೆನ್ ಶಾ ಪ್ರಧಾನಿಯಾದ ಹಿಂದೆ ಇದೇ ಜೆನ್‌ಝಿ ವಿದ್ಯಾರ್ಥಿಗಳ ಪ್ರಯತ್ನವಿತ್ತು. ಇದೀಗ ಇದೇ ವಿದ್ಯಾರ್ಥಿ ಸಮೂಹ ಬಲೆನ್ ಶಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಾಠ್ಮಂಡು (ಜೂ.03) ಭಾರರತದಲ್ಲಿ ಜೆನ್‌ಝಿ ಪ್ರತಿಭಟನೆಯಾಗಬೇಕು ಅನ್ನೋದು ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ ಸೇರಿದಂತ ಹಲವು ನಾಯಕರ ಆಶಯ. ಇದಕ್ಕೆ ತಕ್ಕಂತೆ ಕಾಕ್ರೋಚ್ ಜನಾತ ಪಾರ್ಟಿ ಹುಟ್ಟಿಕೊಂಡಿದೆ. ಇದೀಗ ಪ್ರತಿಭಟನೆಗೆ ವೇದಿಕೆ ಸಿದ್ದಗೊಳಿಸುತ್ತಿದೆ. ಇವರೆಲ್ಲರು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮಾದರಿಯಾಗಿಟ್ಟುಕೊಂಡು ಹೋರಾಟಕ್ಕೆ ತಯಾರಿ ಮಾಡುತ್ತಿದ್ದಾರೆ. ಆದರೆ ನೇಪಾಳದಲ್ಲಿ ಬಲೆನ್ ಶಾ ಪ್ರಧಾನಿಯಾಗಲು ನೆರವಾದ ಇದೇ ಜೆನ್‌ಝಿ ವಿದ್ಯಾರ್ಥಿಗಳು ಇದೀಗ ಕೆಲವೇ ತಿಂಗಳಲ್ಲಿ ಬಲೆನ್ ಶಾ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಕ್ಷಮೆ ಅಲ್ಲ, ರಾಜೀನಾಮೆ ನೀಡಲೇಬೇಕು
ನೇಪಾಳ ಪ್ರಧಾನಿ ಬಲೆನ್ ಶಾ ಕ್ಷಮೆ ಕೇಳಿದರೆ ಸಾಲದು, ರಾಜೀನಾಮೆ ನೀಡಲೇಬೇಕು ಎಂದು ಜೆನ್‌ಝಿ ವಿದ್ಯಾರ್ಥಿ ಸಂಘಟನೆಗಳು ಭಾರಿ ಪ್ರತಿಭಟನೆಯಲ್ಲಿ ತೊಡಗಿದೆ. ಬಲೆನ್ ಶಾ ಪ್ರಧಾನಿಯಾಗಿ ತೆಗೆದುಕೊಂಡು ಕೆಲ ನಿರ್ಧಾರಗಳು ಘೋಷಣೆಗಳು ವಿದ್ಯಾರ್ಥಿ ಸಮೂಹದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ವಿದ್ಯಾರ್ಥಿಗಳು ಮೌನವಾಗಿದ್ದರು. ಆಧರೆ ಇತ್ತೀಚೆಗೆ ನೇಪಾಳ ಸಂಸತ್ತಿನಲ್ಲಿ ಬಲೆನ್ ಶಾ ಭಾರತ ಹಾಗೂ ನೇಪಾಳ ಗಡಿ ಗುರಿತು ಮಾಡಿದ ಭಾಷಣದಿಂದ ಆಕ್ರೋಶ ಸ್ಫೋಟಗೊಂಡಿದೆ.
ಭಾರತ ನೇಪಾಳ ಗಡಿ ಸಮಸ್ಯೆ ಬಗೆ ಹರಿಸಲು ಬ್ರಿಟನ್‌ಗೆ ಆಹ್ವಾನ
ಭಾರತ ಹಾಗೂ ನೇಪಾಳ ಗಡಿ ಪೈಕಿ ಕಾಲಾಪಾನಿ, ಲಿಪುಲೇಖ್ ಹಾಗೂ ಲಿಂಪಿಯಾಧುರ ವಿವಾದಿತ ಸ್ಥಳಗಳಾಗಿದೆ. ಗಡಿ ವಿಚಾರದಲ್ಲಿ ಉಭಯ ದೇಶಗಳ ನಡುವೆ ಮಾತುಕತೆಗಳು ನಡೆಯುತ್ತಲೇ ಇದೆ. ವಿವಾದಗಳು ಇವೆ. ಇದರ ನಡುವೆ ಬಲೆನ್ ಶಾ, ಭಾರತ ಮಾತ್ರ ನಮ್ಮ ಪ್ರದೇಶ ಅತಿಕ್ರಮಣ ಮಾಡಿಲ್ಲ, ನೇಪಾಳ ಕೂಡ ಭಾರತದ ಕೆಲ ಪ್ರದೇಶಗಳನ್ನು ಅತಿಕ್ರಮಣ ಮಾಡಿದೆ ಎಂದಿದ್ದುರು. ಭಾರತ ಹಾಗೂ ನೇಪಾಳ ಗಡಿ ಸಮಸ್ಯೆಗಳನ್ನು ಹಿಂದಿನ ಸರ್ಕಾರದಂತೆ ವಿವಾದಿತ ಕೇಂದ್ರ ಮಾಡದೇ ಶಾಂತಿಯುತವಾಗಿ ಬಗೆಹರಿಸಲು ನೇಪಾಳದ ಜನ ಬಯಸಿದ್ದರು. ಆದರೆ ಬಲೆನ್ ಶಾ, ಭಾಷಣದಲ್ಲಿ ಬ್ರಿಟನ್ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದರು. ಇದು ಕೂಡ ವಿದ್ಯಾರ್ಥಿ ಸಮೂಹದ ಆಕ್ರೋಶ ಮತ್ತಷ್ಟು ಹೆಚ್ಟಿಸಿತ್ತು.
ನೇಪಾಳ ಸಾರ್ವಭೌಮತ್ವ, ನೇಪಾಳದ ದೇಶಪ್ರೇಮದ ವಿಚಾರಗಳ ಕುರಿತು ಬಲೆನ್ ಶಾ ಆಡಿದ ಮಾತುಗಳು ವಿದ್ಯಾರ್ಥಿ ಸಮೂಹವನ್ನು ಕೆರಳಿಸಿದೆ. ಬಲೆನ್ ಶಾ ಭಾಷಣ ವಿರುದ್ಧ ವಿಪಕ್ಷಗಳು ಆಕ್ರೋಶ ಹೊರಹಾಕಿದೆ. ತಕ್ಷಣವೇ ಮಾತುಗಳನ್ನು ಹಿಂಪಡೆದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ಆದರೆ ವಿದ್ಯಾರ್ಥಿ ಸಮೂಹ ಕ್ಷಮೆ ಕೇಳಿದರೆ ಸಾಲದು, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.


