ವ್ಯಕ್ತಿ ಸ್ವಾತಂತ್ರ್ಯದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ ಅರಬ್ ಸಂಯುಕ್ತ ಸಂಸ್ಥಾನ ಇಸ್ಲಾಮಿಕ್ ಕಾನೂನಿನಲ್ಲಿ ಕೆಲವೊಂದು ಬದಲಾವಣೆ ತಂದಿದೆ. ಈ ಮೂಲಕ ಮದುವೆಯಾಗದೆ ಗಂಡು ಹೆಣ್ಣು ಜೊತೆಗೇ ವಾಸಿಸಬಹುದಾಗಿದೆ.

ಮದ್ಯಪಾನಕ್ಕೆ ಹೆಚ್ಚಿನ ವಿರೋಧವಿದ್ದ ಅರಬ್ ರಾಷ್ಟ್ರದಲ್ಲಿ ಇನ್ನು ಈ ಸಂಬಂಧಿ ಕಾನೂನು ಸ್ವಲ್ಪಮಟ್ಟಿಗೆ ಸಡಿಲವಾಗಲಿದೆ. ಹಾಗೆಯೇ ಮರ್ಯಾದಾ ಹತ್ಯೆಯಯನ್ನೂ ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗಿದೆ.

ನಾನು ಗೆದ್ದಿದ್ದೇನೆ: ಸೋಲೊಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್!

ವೈಯಕ್ತಿಕ ಸ್ವಾತಂತ್ರ್ಯಗಳನ್ನು ವಿಸ್ತರಿಇಸ ಇಸ್ಲಾಮಿಕ್ ಕಾನೂನಿನ ಕಠಿಣವಾದ ನಿಯಮಗಳನ್ನು ಆಧರಿಸಿದ ಕಾನೂನು ವ್ಯವಸ್ಥೆಯ ಹೊರತಾಗಿ ಪಾಶ್ಚಿಮಾತ್ಯ ಪ್ರವಾಸಿಗರು, ವ್ಯವಹಾರ, ಉದ್ಯೋಗಗಳಿಗಾಗಿ ಬರುವ ಜನರಿಗಾಗಿ ದೇಶ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದೆ.

ಮನೆಗಳಲ್ಲಿಯೂ ಈ ರೀತಿಯ ಬದಲಾವಣೆಗಳಾಗುತ್ತಿದ್ದು, ಸಮಾಜಕ್ಕೆ ಅನ್ವಯಿಸುವಂತೆ ಈ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯುಎಇ ಮತ್ತು ಇಸ್ರೇಲ್ ನಡುವಿನ ಸಂಬಂಧವೂ ಸುಧಾರಿಸುವ ಸಾಧ್ಯತೆ ಇದ್ದು, ಇಸ್ರೇಲಿಯನ್ ಹೂಡಿಕೆದಾರರು ಯುಎಇಯಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ.

ಈ ಆಫೀಸ್‌ನಲ್ಲಿ ನಾನು ಮೊದಲ ಮಹಿಳೆಯಾಗಿರಬಹುದು, ಕೊನೆಯವಳಲ್ಲ: ಕಮಲಾ ಗೆಲುವಿನ ಮಾತುಗಳು

ಇನ್ನು ಯುಎಇನಲ್ಲಿ 21 ಮತ್ತು ಮೇಲ್ಪಟ್ಟ ವಯಸ್ಸಿನವರು ಮದ್ಯ ಸೇವಿಸಬಹುದು, ಮತ್ತು ಮಾರಾಟ ಮಾಡಬಹುದು. ಇದಕ್ಕಿದ್ದ ದಂಡವನ್ನು ರದ್ದು ಮಾಡಲಾಗಿದೆ. ಹಿಂದೆ, ಜನ ತಮ್ಮ ಮನೆಗಳಲ್ಲಿ ಮದ್ಯವನ್ನು ಖರೀದಿಸಿಡಲು, ಸಾಗಿಸಲು ಅಥವಾ ಸಂಗ್ರಹಿಸಲು ಲೈಸೆನ್ಸ್ ಅಗತ್ಯವಿತ್ತು. ಹೊಸ ನಿಯಮದ ಪ್ರಕಾರ ಪರವಾನಗಿ ಪಡೆಯುವುದನ್ನು ಕ್ಯಾನ್ಸಲ್ ಮಾಡಲಾಗಿದೆ. ಮುಸ್ಲಿಮರಿಗೆ ಮದ್ಯ ಮುಕ್ತವಾಗಿ ಕುಡಿಯಲು ಅವಕಾಶ ನೀಡಲಾಗಿದೆ.

ಹೊಸ ಬದಲಾವಣೆ ಅವಿವಾಹಿತ ಜೋಡಿ ಜೊತೆಗೇ ಇರುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು ಯುಎಇಯಲ್ಲಿ ಬಹಳ ಹಿಂದಿನಿಂದಲೂ ಅಪರಾಧವೆಂದೇ ಪರಿಗಣಿಸಲ್ಪಟ್ಟಿತ್ತು.

ಅಮೆರಿಕ ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆ ಕಮಲಾ ಹ್ಯಾರಿಸ್‌!

ಮರ್ಯಾದಾ ಹತ್ಯೆಗಳ ವಿರುದ್ಧ ಕಠಿಣ ಕಾನೂನು ಬಂದಿವೆ. ಇದು ವ್ಯಾಪಕವಾಗಿ ಟೀಕಿಸಲ್ಪಟ್ಟ ಬುಡಕಟ್ಟು ಪದ್ಧತಿಯಾಗಿದ್ದು, ಇದರಲ್ಲಿ ಪುರುಷ ಸಂಬಂಧಿಯೊಬ್ಬರು ಕುಟುಂಬವನ್ನು ಅವಮಾನಿಸುವ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದರೆ ಆತನಿಗೆ ಕಾನೂನು ಶಿಕ್ಷೆ ನೀಡುತ್ತಿರಲಿಲ್ಲ. ಆದರೆ ಇದರಲ್ಲೂ ಬದಲಾವಣೆ ಬಂದಿದೆ.

ವರ್ಲ್ಡ್ ಎಕ್ಸ್‌ಪೋವನ್ನು ಆಯೋಜಿಸಲು ಯುಎಇ ತಯಾರಾಗುತ್ತಿದ್ದಂತೆ ಸುಧಾರಣೆಗಳು ಆಗಿವೆ. ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಾಣಿಜ್ಯ ಚಟುವಟಿಕೆಯ ಮತ್ತು ಸುಮಾರು 25 ಮಿಲಿಯನ್ ಪ್ರವಾಸಿಗರನ್ನು ದೇಶಕ್ಕೆ ಆಕರ್ಷಿಸಲು ಈ ಈವೆಂಟ್ ಯೋಜಿಸಲಾಗಿದೆ.