ಹಳೇ ಸಿಮ್ ಕಾರ್ಡ್ ಬಿಸಾಡಿದ್ದೀರಾ? ನಿಷ್ಕ್ರೀಯಗೊಂಡ ಸಿಮ್ ಕಾರ್ಡ್‌ಗಳಿಂದ ಗುಜುರಿ ವ್ಯಾಪಾರಿ ಬರೋಬ್ಬರಿ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹೊರತೆಗಿದಿದ್ದಾರೆ. ಇದೀಗ ಎಲ್ಲರೂ ಸಿಮ್ ಕಾರ್ಡ್ ಬ್ಯೂಸಿನೆಸ್‌ಗೆ ಇಳಿದಿದ್ದಾರೆ. 

ಗೌಂಡಾಂಗ್ (ಫೆ.06) ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದ ಸಿಮ್ ಕಾರ್ಡ್ ಇದೀಗ ಅತೀ ಸುಲಭಾಗಿ, ಅತೀ ಕಡಿಮೆ ಅಥವಾ ಉಚಿತವಾಗಿ ಖರೀದಿಸಲು ಸಾಧ್ಯವಿದೆ. ಸದ್ಯ ಬಹುತೇಕರು ಎರಡು ಸಿಮ್ ಬಳಕೆ ಮಾಡುತ್ತಾರೆ. ಇದೇ ವೇಳೆ ಹಲವರು ಪೋರ್ಟ್, ಸಿಮ್ ನಂಬರ್ ಬದಲಾವಣೆ, ನಿಷ್ಕ್ರೀಯಗೊಂಡ, ಡ್ಯಾಮೇಜ್ ಸಿಮ್‌ಗಳನ್ನು ಬದಲಾಯಿಸುತ್ತಾರೆ. ಹೀಗೆ ಹೊಸ ಸಿಮ್ ಬಂದಾಗ ಹಳೇ ಸಿಮ್ ಮರುಪಯೋಗವಾಗದಂತೆ ಪುಡಿ ಮಾಡಿ ಬಿಸಾಡುತ್ತಾರೆ. ಇನ್ನು ಮೊಬೈಲ್ ಶಾಪ್, ಸರ್ವೀಸ್ ಸೆಂಟ್, ಸಿಮ್ ಔಟ್‌ಲೆಟ್‌ಗಳಲ್ಲಿ ಈ ರೀತಿ ಹಳೇ ಸಿಮ್‌ಗಳ ರಾಶಿಯೇ ಇರುತ್ತದೆ. ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಇಲ್ಲೊಬ್ಬ ಗುಜುರಿ ವ್ಯಾಪಾರಿ, ಕಬ್ಬಿಣ, ಸ್ಟೀಲ್ ಸೇರಿದಂತೆ ಹಲವು ಲೋಹಗಳ ಸಂಗ್ರಹ ಮಾಡುತ್ತಾ, ಈ ರೀತಿಯ ಸಿಮ್‌ಗಳನ್ನು ಸಂಗ್ರಹಿಸಿದ್ದಾನೆ. ಇದೀಗ ಇದೇ ಸಿಮ್‌ಗಳಿಂದ ಚಿನ್ನ ಹೊರತೆಗೆದ ಗುಜುರಿ ವ್ಯಾಪಾರಿ ಬರೋಬ್ಬರಿ 27 ಲಕ್ಷ ರೂಪಾಯಿ ಆದಾಯಗಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಗುಜುರಿ ವ್ಯಾಪಾರಿಗೆ ಕ್ಲಿಕ್ ಆದ ಸಿಮ್ ಟೆಕ್ನಿಕ್

ಚೀನಾದ ಗೌಂಡೌಂಗ್ ಪ್ರಾಂತ್ಯದ ಗುಜುರಿ ವ್ಯಾಪಾರಿ ಖಿಯಾವೋ ಇದೀಗ ಭಾರಿ ಸದ್ದು ಮಾಡುತ್ತಿದ್ದಾನೆ. ಕಳೆದ ಕೆಲ ವರ್ಷಗಳಿಂದ ಖಿಯಾವೋ ಗುಜುರಿ ವ್ಯಾಪಾರದ ಜೊತೆಗೆ ಹಳೇ ಸಿಮ್ ಸಂಗ್ರಹ ಮಾಡುತ್ತಿದ್ದ. ಹಲವರು ಈ ಸಿಮ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಆದರೆ ಈ ಸಿಮ್ ಹಿಂದಿನ ಮೌಲ್ಯ ಖಿಯಾವೋಗೆ ತಿಳಿದಿತ್ತು. ಸಿಮ್ ಸಂಗ್ರಹ ಮಾಡುತ್ತಲೇ ಪ್ರತಿ ದಿನ ತಾನು ಸಂಗ್ರಹಿಸಿದ ಸಿಮ್‌ಗಳನ್ನು ನಿಗದಿತ ಟೆಂಪರೇಚರ್‌ನಲ್ಲಿ ಬಿಸಿ ಮಾಡುತ್ತಿದ್ದ. ಪ್ಲಾಸ್ಟಿಕ್ ಕರಗಿದ ಬಳಿಕ ಈ ಸಿಮ್‌ನಲ್ಲಿರುವ ಚಿನ್ನವನ್ನು ಹೊರತೆಗೆಯುತ್ತಿದ್ದ. ಒಂದು ಸಿಮ್‌ನಲ್ಲಿ 0.0001 ಗ್ರಾಂ ಚಿನ್ನವಿದೆ. ಹೀಗಾಗಿ ಸಾವಿರ ಸಿಮ್ ಇದ್ದರೂ 1 ಗ್ರಾಂ ಚಿನ್ನವಾಗುವುದಿಲ್ಲ. ಇಲ್ಲಿ ಅತ್ಯಂತ ತಾಳ್ಮೆ ಬೇಕು, ಜೊತೆಗೆ ನಿರಂತರ ಪರಿಶ್ರಮ ಅಗತ್ಯ.

ಸಿಮ್ ಚಿಪ್‌ನಲ್ಲಿರುವ ಚಿನ್ನವನ್ನು ಹೊರತೆಗೆಯುತ್ತಾ ಮತ್ತೆ ಅದನ್ನು ಕರಗಿಸುತ್ತಾ ಕೆಲಸ ಆರಂಭಿಸಿದ್ದಾನೆ. ಹೀಗೆ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಸಿಮ್ ಕಾರ್ಡ್‌ಗಳನ್ನು ಈ ರೀತಿ ಕರಗಿಸಿದ್ದಾನೆ. ಈ ಮೂಲಕ 191 ಗ್ರಾಂ ಚಿನ್ನವನ್ನು ಸಂಪಾದಿಸಿದ್ದಾರೆ. ಇದೀಗ ಇದರ ಮೌಲ್ಯ ಸರಿಸುಮಾರು 27 ಲಕ್ಷ ರೂಪಾಯಿ.

ಮಾಹಿತಿ ತಿಳಿಯುತ್ತಿದ್ದಂತೆ ಹಲವರಿಂದ ಸಿಮ್ ಸಂಗ್ರಹ

ಚೀನಾದ ಮಾರ್ನಿಂಗ್ ಪೋಸ್ಟ್ ಈ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಚೀನಾದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮೊದಲೇ ಚಿನ್ನದ ಬೆಲೆ ಗಗನಕ್ಕೇರಿದೆ. ಹೀಗಾಗಿ ಇದೀಗ ಸಿಮ್ ಸಂಗ್ರಹಿಸಿ ಚಿನ್ನ ತೆಗೆಯಲು ಹಲವರು ಮುಂದಾಗಿದ್ದಾರೆ. ಆದರೆ ಬಹುತೇಕರು ಸಿಮ್ ಕಾರ್ಡ್‌ನಿಂದ ನಿಗಿದಿತ ಪ್ರಮಾಣದಲ್ಲಿ ಬಿಸಿ ಮಾಡಿ ಚಿನ್ನ ಹೊರತೆಗೆಯಲು ವಿಫಲರಾಗಿದ್ದಾರೆ. ಇಷ್ಟೇ ಅಲ್ಲ ಇಂದು ವರ್ಷಗಳ ಸತತ ಪ್ರಯತ್ನಕ್ಕೆ ಸಿಕ್ಕ ಫಲ. ಹೀಗಾಗಿ ಅಲ್ಪಾವದಿಯಲ್ಲಿ ಹಣ ಮಾಡಲು ಈ ದಾರಿ ಸಾಧ್ಯವಿಲ್ಲ ಎಂದು ಹಲವರು ಸ್ಥಗಿತಗೊಳಿಸಿದ್ದಾರೆ. ಇಷ್ಟೇ ಅಲ್ಲ ಇದೀಗ ಹಳೇ ಹಾಗೂ ನಿಷ್ಕ್ರೀಯ ಸಿಮ್ ಕಾರ್ಡ್‌ಗಳಿಗೂ ಬೆಲೆ ಹೇಳುತ್ತಿದ್ದಾರೆ. ಸಂಗ್ರಹಕ್ಕೂ ಲಭ್ಯವಾಗುತ್ತಿಲ್ಲ.