ವಾಷಿಂಗ್ಟನ್(ನ.08): ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಅವರು ಮೊದಲ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ,  ಅಮೆರಿಕನ್ನರು ಪ್ರಜಾಪ್ರಭುತ್ವದ ಸಮಗ್ರತೆಯನ್ನು ರಕ್ಷಿಸಿದ್ದಾರೆ ಎಂದಿದ್ದಾರೆ.

ವಿಲ್ಮಿಂಗ್ಟನ್‌ನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಒಂದು ರಾಜ್ಯವಲ್ಲಇದೊಂದು ಕ್ರಿಯೆ ಎಂದು ಜಾನ್ ಲೂಯಿಸ್ ಹೇಳಿದ್ದರು. ಅಮೆರಿಕದ ಪ್ರಜಾಪ್ರಭುತ್ವಕ್ಕೆ ಖಾತರಿಯಿಲ್ಲ. ಇದಕ್ಕಾಗಿ ಹೋರಾಡುವ ನಮ್ಮ ಇಚ್ಛೆಯಷ್ಟೇ ಅದು ಪ್ರಬಲವಾಗಿದೆ - ಮತ್ತು ನೀವದನ್ನು ಮಾಡಿ ತೋರಿಸಿದ್ದೀರಿ ಎಂದಿದ್ದಾರೆ.

"

ಸೋಲು ಖಚಿತವಾಗ್ತಿದ್ದಂತೆ ಗಾಲ್ಫ್‌ ಸ್ಟಿಕ್ ಹಿಡಿದು ಗ್ರೌಂಡ್‌ನತ್ತ ಟ್ರಂಪ್

ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ಪ್ರಜಾಪ್ರಭುತ್ವದಲ್ಲಿ ಭಾಗಿಯಾಗುಂತೆ ಮಾಡಿದ ಪ್ರಯತ್ನಕ್ಕೆ ಹ್ಯಾರಿಸ್ ತಮ್ಮ ಪ್ರಚಾರ ಸಿಬ್ಬಂದಿ ಮತ್ತು ಸ್ವಯಂಸೇವಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಭಾಷಣದಲ್ಲಿ ಮೊದಲಿಗೇ ಭಾರತದ ಹೆಸರು ಹೇಳಿದ ಕಮಲಾ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

ನನ್ನ ಅಮ್ಮ 19ನೇ ವಯಸ್ಸಿಗೆ ಇಲ್ಲಿಗೆ ಬಂದಾಗ ಬಹುಶಃ ಆಕೆ ಕ್ಷಣದ ಬಗ್ಗೆ ಯೋಚಿಸಿಯೂ ಇರಲಾರಳು. ಆದರೆ ಆಕೆ ಅಮೆರಿಕದ ಮೇಲೆ ಭರವಸೆ ಇಟ್ಟಳು ಎಂದಿದ್ದಾರೆ. ನಾನು ಇಲ್ಲಿ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿರಬಹುದು, ಆದರೆ ಕೊನೆಯವಳಲ್ಲ. ಏಕೆಂದರೆ ಇದನ್ನು ನೋಡುವ ಪ್ರತಿಯೊಬ್ಬ ಪುಟ್ಟ ಹುಡುಗಿಯೂ ಇದು ಸಾಧ್ಯತೆಗಳ ದೇಶ ಎಂಬುದನ್ನು ಅರಿತುಕೊಳ್ಳುತ್ತಾರೆ ಎಂದಿದ್ದಾರೆ.