ಅಂಕಾರ(ಫೆ.18): ತುಂಬು ಗರ್ಭಿಣಿಯಾಗಿದ್ದ ಪತ್ನಿಯನ್ನು ರೊಮ್ಯಾಂಟಿಕ್ ಔಟಿಂಗ್ಗೆ ಕರೆದೊಯ್ದ ಪತಿ ಆಕೆಯನ್ನು ಬಂಡೆಯಿಂದ ತಳ್ಳಿ ಹಾಕಿರುವ ಘಟನೆ ನಡೆದಿದೆ. ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯನ್ನೇ ತಳ್ಳಿ ಕೊಲೆ ಮಾಡಿದ್ದಾನೆ.

40 ವರ್ಷದ ಹಕನ್ ಅಯ್ಸಲ್ನನ್ನು ಪತ್ನಿ 32 ವರ್ಷದ ಸೆಮ್ರ ಆಯ್ಸಲ್ನನ್ನು ಹಾಗೂ ಮಗುವನ್ನು ಕೊಂದಿರುವ ಆರೋಪದಲ್ಲಿ ಬಂಧಿಸಲಾಗಿದೆ. ಟರ್ಕಿಯ ಮುಗ್ಲದ ಬಟರ್ಫ್ಲೈ ವ್ಯಾಲಿಯಲ್ಲಿ ಪತ್ನಿಯನ್ನು ಹಾಲಿಡೇಗೆ ಕರೆದೊಯ್ದು ಕೊಲೆ ಮಾಡಲಾಗಿದೆ.

ಹಿಂದು ಅಪ್ರಾಪ್ತೆಯನ್ನು ಅಪಹರಿಸಿದ ಪಾಕ್ ಪೊಲೀಸ್: ಮತಾಂತರಕ್ಕೆ ಕಿರುಕುಳ

7 ತಿಂಗಳು ಗರ್ಭಿಣಿಯಾಗಿದ್ದ ಪತ್ನಿಯನ್ನು ಬಂಡೆಯ ಮೇಲಿಂದ ತಳ್ಳಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 2018 ಜೂನ್ನಲ್ಲಿ ಬಂಡೆಯಿಂದ ತಳ್ಳಲಾಗಿತ್ತು.

ಬಂಡೆಯ ತುದಿಯಲ್ಲಿ ನಿಂತು ಈ ಜೋಡಿ ಸೆಲ್ಫೀ ತೆಗೆಯುತ್ತಿದ್ದರು. ಇದು ಆಕಸ್ಮಿಕ ಎಂದು ಆತ ಹೇಳಿದ್ದರೂ, ಸ್ವಲ್ಪ ಮುನ್ನ ತೆಗೆದ ಇನ್ಶೂರೆನ್ಸ್ ಹಣ ಪಡೆಯಲು ಪತ್ನಿಯ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಮೊದಲು ಪತ್ನಿಯ ಹೆಸರಲ್ಲಿ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಡೆದು, ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆ. ಆಕೆ ಮೃತಪಟ್ಟರೆ ಇನ್ಶೂರೆನ್ಸ್ ಹಣ ಸುಮಾರು 41,71,289.32 ಸಿಗುವುದರಿಂದ ತಾನೊಬ್ಬನೇ ಫಲಾನುಭವಿಯಾಗಿದ್ದು ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಕ್‌ನಲ್ಲಿಟ್ಟಿದ್ದ ಜೀವಮಾನದ ಪೂರ್ತಿ ಸಂಪಾದನೆ ಸ್ವಾಹಾ ಮಾಡಿದ ಗೆದ್ದಲು

ಬರೋಬ್ಬರಿ ಮೂರು ಗಂಟೆ ಹೊತ್ತು ಈ ಜೋಡಿ ಬಂಡೆಯ ಮೇಲೆ ಕುಳಿತಿತ್ತು. ಜನ ಖಾಲಿಯಾದಾಗ ಸಮಯ ಕಾದು ಪತ್ನಿಯನ್ನು ಬಂಡೆಯಿಂದ ತಳ್ಳಿದ್ದ.

ಫಾರೆನ್ಸಿಕ್ ಮೆಡಿಸಿನ್ ಇನ್ಸ್ಟಿಟ್ಯೂಟ್ಗೆ ಹೋಗಿದ್ದಾಗ ಎಲ್ಲರೂ ಬೇಸರದಲ್ಲಿದ್ದರೆ  ಹಕನ್ ಮಾತ್ರ ಕಾಮನ್ ಆಗಿದ್ದ ಎಂದು ಕೊಲೆಯಾದವಳ ಸಹೋದರ ಹೇಳಿದ್ದಾರೆ. ಅಯ್ಸಲ್ಗೆ ವಿವಾಹಕ್ಕೂ ಮುನ್ನ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇತ್ತು. ಹಾಗಾಗಿ ಆಕೆಯ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸಲಾಗಿತ್ತು.