Asianet Suvarna News Asianet Suvarna News

ಟ್ರಂಕ್‌ನಲ್ಲಿಟ್ಟಿದ್ದ ಜೀವಮಾನದ ಪೂರ್ತಿ ಸಂಪಾದನೆ ಸ್ವಾಹಾ ಮಾಡಿದ ಗೆದ್ದಲು

ಜೀವಮಾನ ಫುರ್ತಿ ದುಡಿದು ದುಡಿದು ಕೂಡಿಟ್ಟ ಹಣ ಗೆದ್ದಲು ತಿಂದ್ರೆ ಏನಾಗಬಹುದು..? ತನ್ನ ಜೀವನವಿಡೀ ದುಡಿದು ಟ್ರಂಕ್‌ನಲ್ಲಿ ಹಣ ತುಂಬಿಟ್ಟಾತನ ಸ್ಥಿತಿ ಇದು

Andhra trader hides his lifes savings in trunk termites finish off Rs 5 lakh dpl
Author
Bangalore, First Published Feb 18, 2021, 9:48 AM IST

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಉದ್ಯಮಿಯೊಬ್ಬ ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕ್ನಲ್ಲಿಡುವ ಬದಲು ಟ್ರಂಕ್ನಲ್ಲಿಟ್ಟಿದ್ದರು. ಆದರೆ ಅವರು ಅಂದಕೊಂಡಷ್ಟು ಸೇಫ್ ಆಗಿರಲಿಲ್ಲ ಆ ಟ್ರಂಕ್.

ಗೆದ್ದಲು ಹುಳು ತಿಂದು ತೆ ಕಂತೆಯಾಗಿದ್ದ ನೋಟು ಈಗ ಬರೀ ಪೇಪರ್ ಪೀಸ್ ಆಗಿದೆ. 500 ಮತ್ತು 200ರ ನೋಟುಗಳಲ್ಲಿ ದೊಡ್ಡ ದೊಡ್ಡ ರಂಧ್ರಗಳನ್ನು ಮಾಡಿದೆ.

ಕೊರೋನಾ ಲಸಿಕೆ: 50 ವರ್ಷ ಮೇಲ್ಪಟ್ಟವರಿಗಾಗಿ Co-WIN 2.0 ಆ್ಯಪ್

ಬಿಜಿಲಿ ಜಮಲಯ್ಯ ಎಂಬ ಉದ್ಯಮಿ ಮ್ಯಾಲಾವರಂ ನಿವಾಸಿ, ಇದು ಇವರಿಗೆ ಜೀವಮಾನದ ಅತ್ಯಂತ ದೊಡ್ಡ ಶಾಕ್. ಜಮಲಯ್ಯ ಅವರು ಹಂದಿಗಳ ವ್ಯಾಪಾರ ಮಾಡುತ್ತಾರೆ ಮತ್ತು ತಮ್ಮ ವ್ಯವಹಾರಗಳಿಗೆ ಹಣವನ್ನು ಬಳಸುತ್ತಾರೆ. ಅವರು ಬ್ಯಾಂಕ್ ಅನ್ನು ಬಳಸುವ ಬದಲು ಹಣವನ್ನು ತಮ್ಮ ಟ್ರಂಕ್‌ನಲ್ಲಿ ಜೋಡಿಸುತ್ತಿದ್ದರು. ಮನೆ ನಿರ್ಮಿಸಲು ಸಾಕಷ್ಟು ಹಣವನ್ನು ಸಂಗ್ರಹಿಸುವ ಕನಸು ಕಂಡ ಅವರು ಟ್ರಂಕ್‌ನಲ್ಲಿ ಸುಮಾರು 5 ಲಕ್ಷ ರೂ. ಇಟ್ಟಿದ್ದರು.

ಹಣ ಕಳೆದುಕೊಂಡು ಕಂಗಾಲಾದ ವ್ಯಕ್ತಿ ತುಂಡಾದ ಹಣವನ್ನು ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳಿಗೆ ಹಂಚುತ್ತಿದ್ದರು. ನೆರೆಹೊರೆಯ ಮಕ್ಕಳು ಇಷ್ಟು ದೊಡ್ಡ ಮೊತ್ತದ ನಗದು ಹಣದೊಂದಿಗೆ ತಿರುಗಾಡುತ್ತಿರುವುದನ್ನು ನೋಡಿದಾಗ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತನಿಖೆಯ ನಂತರ ಪೊಲೀಸರು ಹಣದ ಮೂಲವನ್ನು ಕಂಡುಕೊಂಡರು.

Follow Us:
Download App:
  • android
  • ios