ಅಮೃತಸರ್(ಫೆ.17): ಪಾಕಿಸ್ತಾನದ ಪೊಲೀಸ್ ಹಿಂದೂ ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾಗೋ ಮುನ್ನ ಮತಾಂತರವಾಗಲು ಕಿರುಕುಳ ನೀಡಿರುವ ಘಟನೆ ನಡೆದಿದೆ.

ಸಿಂಧ್ನ ನೌಶಹ್ರೋ ಫಿರೋಝ್ ಜಿಲ್ಲೆಯ ಹಲಾನಿ ದರ್ಬಾರ್ನ ರಮೇಶ್ ಹಲಾನಿ ಎಂಬವರ ಪುತ್ರಿ ನೀನಾ ಕುಮಾರಿ ಎಂಬಾಕೆಯನ್ನು ಅಪಹರಿಸಲಾಗಿದೆ. ಗುಲಾಮ್ ಮರೂಫ್ ಖಾದ್ರಿ ಎಂಬ ಪೊಲೀಸ್ ನೀನಾಳನ್ನು ಅಪಹರಿಸಿದ್ದಾನೆ.

ದಲಿತರು ಕ್ರೈಸ್ತ, ಇಸ್ಲಾಮ್‌ಗೆ ಮತಾಂತರ ಆದರೆ ಮೀಸಲಿಲ್ಲ!

ಅಲ್ಪಸಂಖ್ಯಾತರ ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಗುಲಾಮ್ ಅಪ್ರಾಪ್ತೆಯನ್ನು ಅಪಹರಿಸಿದ್ದಾನೆ. ನೀನಾ 5 ದಿನದಿಂದ ಕಾಣೆಯಾಗಿದ್ದಳು. ಆಕೆ ಶಾಲೆಯಿಂದ ಬರದಿದ್ದಾಗ ಆಕೆಯನ್ನು ಹುಡುಕಿದ ಮನೆಯವರಿಗೆ ಆಕೆಯನ್ನು ಅಪಹರಿಸಿರುವ ವಿಚಾರ ತಿಳಿದಿದೆ ಎಂದು ಅಲ್ಲಿನ ಹೆಸರು ಹೇಳಲು ಇಚ್ಛಿಸದ ಹಿಂದು ಮುಖಂಡರೊಬ್ಬರು ತಿಳಿಸಿದ್ದಾರೆ.

ಪೊಲೀಸ್ ನೀನಾಳನ್ನು ಸ್ಥಳೀಯ ದರ್ಗಾದಲ್ಲಿ ಮಾತಂತರ ಮಾಡಿದ್ದಾನೆ. ಫೆಬ್ರವರಿ 1ರಂದು ಆಕೆಯ ಹೆಸರನ್ನು ಮರಿಯಾ ಎಂದು ಬದಲಾಯಿಸಿದ್ದಾನೆ. ಆಕೆಯ ಮನೆಯಿಂದ 400 ಕಿಮೀ ದೂರದ ಕರಾಚಿಯಲ್ಲಿ ವಿವಾಹವಾಗಿದ್ದ. ಮಂಗಳವಾರ ಆಕೆಯ ವಿವಾಹ ಎಲ್ಲರಿಗೂ ಗೊತ್ತಾಗಿದೆ ಎಂದು ಆಲ್ ಪಾಕಿಸ್ತಾನ್ ಹಿಂದೂ ಪಂಚಾಯತ್ ತಿಳಿಸಿದೆ.

ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!

ಸೋಷಿಯಲ್ ಮೀಡಿಯಾಗೆ ವಿವಾಹ ನೋಂದಣಿ ದಾಖಲೆ ಅಪ್ಲೋಡ್ ಮಾಡಲಾಗಿದ್ದು, ಇದರಲ್ಲಿ ವರನ ಜನ್ಮ ದಿನಾಂಕ ಮಾತ್ರ ನಮೂದಿಸಲಾಗಿದ್ದು, ನೀನಾಳ ವಯಸ್ಸು 19 ಎಂದು ಬರೆಯಲಾಗಿದೆ. ಆಕೆಯ ಕುಟುಂಬ ಆಕೆ ಅಪ್ರಾಪ್ತೆ ಎಂದಿದ್ದಾರೆ.

ನಾನು ನಮ್ಮ ಭದ್ರತೆಗೆ ನಿಯೋಜಿಸಿದವರನ್ನೂ ನಂಬುವಂತಿಲ್ಲ. ಹಿಂದೂ ಅಪ್ರಾಪ್ತ ಬಾಲಕಿಯರ ಅಪಹರಣಗಳು ಮತ್ತು ಬಲವಂತದ ಮತಾಂತರಗಳಲ್ಲಿ ಇದು ಮತ್ತೊಂದು ಪ್ರಕರಣವಾಗಿದೆ. ಪಾಕಿಸ್ತಾನದ ಹಿಂದೂಗಳು ಮತ್ತು ಇಸ್ಲಾಮಿಕ್ ಧರ್ಮಗುರುಗಳ ನಡುವೆ ಖಾಸಗಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಘಟನೆ ಸಂಭವಿಸಿದೆ.

ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!

ಈ ಒಪ್ಪಂದಕ್ಕೆ ಸಹಿ ಹಾಕಿದ ಧರ್ಮಗುರುಗಳು ಸಮಾರೊದ ಪಿರ್ ಮೊಹಮ್ಮದ್ ಅಯೂಬ್ ಜಾನ್ ಸರ್ಹಂಡಿ, ಭಾರ್ಚುಂಡಿ ಶರೀಫ್ ದರ್ಗಾದ ಮಿಯಾನ್ ಅಬ್ದುಲ್ ಹಕ್ ‘ಮಿಯಾನ್ ಮಿತ್ತು’ ಮತ್ತು ಕರಾಚಿಯ ಜಾಮಿಯಾ ಬಿನೋರಿಯಾದ ಮೌಲಾನಾ ನೌಮನ್ ನಯೀಮ್, ಹಿಂದೂ ಮತ್ತು ಸಿಖ್ ಹುಡುಗಿಯರನ್ನು ಬಲವಂತವಾಗಿ ಮತಾಂತರಗೊಳಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಪಾಕಿಸ್ತಾನ ಹಿಂದೂ ಕೌನ್ಸಿಲ್ ಪೋಷಕ-ಮುಖ್ಯಸ್ಥ ರಮೇಶ್ ಕುಮಾರ್ ವಂಕ್ವಾನಿ ಅವರು ತಮ್ಮ ಪರವಾಗಿ ದಾಖಲೆಗೆ ಸಹಿ ಹಾಕಿದರು. ಮತಾಂತರಗೊಳ್ಳುವ ಮೊದಲು ಅಲ್ಪಸಂಖ್ಯಾತ ಹುಡುಗಿಯರು ಮತ್ತು ಅವರ ಪೋಷಕರ ಒಪ್ಪಿಗೆ ತೆಗೆದುಕೊಳ್ಳಬೇಕು ಎನ್ನುತ್ತದೆ ಒಪ್ಪಂದ.