ವಾಯುಮಾರ್ಗದಲ್ಲೇ ಪೈಲೈಟ್‌ ಕುಸಿದು ಬಿದ್ದು ಸಾವು, ವಿಮಾನ ತುರ್ತು ಲ್ಯಾಂಡಿಂಗ್‌

ಬುಧವಾರ ಬೆಳಗ್ಗೆ ಅಮೆರಿಕದ ಸಿಯಾಟ್ಟಲ್‌ನಿಂದ ಟರ್ಕಿಯ ಇಸ್ತಾನ್‌ಬುಲ್‌ಗೆ ತೆರಳುತ್ತಿದ್ದ ಟರ್ಕಿಶ್‌ ಏರ್‌ಲೈನ್‌ ವಿಮಾನವು ಜಾನ್‌ ಎಫ್‌ ಕೆನಡಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.

Turkish Airlines Makes Emergency Landing in JFK Airport after Pilot Dies Mid Flight san

ನವದೆಹಲಿ (ಅ.9): ಬುಧವಾರ ಬೆಳಗ್ಗೆ ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಟರ್ಕಿಶ್‌ ಏರ್‌ಲೈನ್ಸ್ ವಿಮಾನವು ತುರ್ತು ಲ್ಯಾಂಡಿಂಗ್ ಆಗಿದೆ. ಸಿಯಾಟಲ್‌ನಿಂದ ಇಸ್ತಾನ್‌ಬುಲ್‌ಗೆ ಪ್ರಯಾಣ ಮಾಡುತ್ತಿದ್ದ ಏರ್‌ಬಸ್ A350-900ನ 59 ವರ್ಷದ ಕ್ಯಾಪ್ಟನ್ ಇಲ್ಸೆಹಿನ್ ಪೆಹ್ಲಿವನ್ ಪ್ರಯಾಣದ ವೇಳೆ ಕುಸಿದು ಬಿದ್ದಿದ್ದರು. ಈ ವೇಳೆ ಇಡೀ ಘಟನೆ ಅನಿರೀಕ್ಷಿತ ಹಾಗೂ ತೀಕ್ಷ್ಣವಾದ ತಿರುವು ಪಡೆದುಕೊಂಡಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಟರ್ಕಿಶ್‌ ಏರ್‌ಲೈನ್ಸ್‌ನ ವಕ್ತಾರ ಯಾಹ್ಯಾ ಉಸ್ತುನ್, ಎಕ್ಸ್‌ನಲ್ಲಿ ಬೇಸರದ ಸುದ್ದಿಯನ್ನು ಹಂಚಿಕೊಂಡಿದ್ದಾರೆ: “ಮತ್ತೊಬ್ಬ ಪೈಲಟ್ ಮತ್ತು ಸಹ-ಪೈಲಟ್ ಸೇರಿದಂತೆ ವಿಮಾನ ಸಿಬ್ಬಂದಿ ಕ್ಯಾಪ್ಟನ್ ಪೆಹ್ಲಿವನ್ ಅವರ ಜೀವವನ್ನು ಉಳಿಸಲು ದೊಡ್ಡ ಮಟ್ಟದ  ಪ್ರಯತ್ನಗಳನ್ನು ಮಾಡಿದರು ಆದರೆ ಅಂತಿಮವಾಗಿ ವಿಫಲರಾದರು. ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ವಿಮಾನ ಲ್ಯಾಂಡ್ ಆಗುವ ಮೊದಲೇ ಅವರು ಸಾವು ಕಂಡರು' ಎಂದು ಪೋಸ್ಟ್‌ ಮಾಡಿದ್ದಾರೆ.

ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗೆ ಆದ್ಯತೆ ನೀಡಿದ ಸಿಬ್ಬಂದಿ ವಿಮಾನವನ್ನು ನ್ಯೂಯಾರ್ಕ್‌ಗೆ ತಿರುಗಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಂತೆ, ಫ್ಲೈಟ್‌ಅವೇರ್‌ನಿಂದ ಬಂದ ವಿಮಾನ ಡೇಟಾವು ಜೆಎಫ್‌ಕೆ ಕಡೆಗೆ ತಿರುಗಿದ್ದನ್ನು ದೃಢಪಡಿಸಿದೆ. ಬುಧವಾರ ಬೆಳಗ್ಗೆ 6 ಗಂಟೆಯ ವೇಳೆಗೆ ವಿಮಾನ ಯಾವುದೇ ಸಮಸ್ಯೆ ಇಲ್ಲದೆ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಯಿತು.

2007 ರಿಂದ ಟರ್ಕಿಶ್‌  ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಪ್ಟನ್ ಪೆಹ್ಲಿವನ್ ಮಾರ್ಚ್‌ನಲ್ಲಿ ನಿಯಮಿತ ವ್ಯಾಯಾಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳ ಲಕ್ಷಣ ಅವರಲ್ಲಿ ಕಂಡುಬಂದಿರಲಿಲ್ಲ ಎಂದು ವರದಿಯಾಗಿದೆ. ಅವರ ಹಠಾತ್ ಸಾವು ಸಹೋದ್ಯೋಗಿಗಳು ಮತ್ತು ಪ್ರಯಾಣಿಕರನ್ನು ಆಘಾತಕ್ಕೀಡು ಮಾಡಿದೆ.

Breaking: ರತನ್‌ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ!

“ಟರ್ಕಿಶ್ ಏರ್‌ಲೈನ್ಸ್ ಕುಟುಂಬವಾಗಿ, ನಾವು ನಮ್ಮ ಕ್ಯಾಪ್ಟನ್‌  ಮೇಲೆ ದೇವರ ಕರುಣೆ ಇರಲಿ ಮತ್ತು ಅವರ ದುಃಖಿತ ಕುಟುಂಬ, ಅವರ ಎಲ್ಲಾ ಸಹೋದ್ಯೋಗಿಗಳು ಮತ್ತು ಪ್ರೀತಿಪಾತ್ರರಿಗೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಉಸ್ತುನ್ ಏರ್‌ಲೈನ್‌ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರಾವಳಿಗೆ ಶುಭ ಸುದ್ದಿ: ಅ.12 ರಿಂದ ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು ಸೇವೆ

Latest Videos
Follow Us:
Download App:
  • android
  • ios