ಅಮೆರಿಕ ಔದ್ಯೋಗಿಕ ವೀಸಾದಲ್ಲಿ ಹೊಸ ಬದಲಾವಣೆ: ಟೆಕ್ಕಿಗಳಿಗೆ ಉದ್ಯೋಗ ಅಭದ್ರತೆ..!
ಇನ್ನೆರಡು ದಿನದಲ್ಲಿ ಔದ್ಯೋಗಿಕ ವೀಸಾಗಳ ಮೇಲೆ ಹೊಸ ನಿಬಂಧನೆಗಳನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಿಳಿಸಿದ್ದಾರೆ. ಇದರಿಂದ ಪ್ರಮುಖವಾಗಿ ವಿದೇಶದಲ್ಲಿ ದುಡಿವ ಟೆಕ್ಕಿಗಳು ತೊಂದರೆ ಅನುಭವಿಸಲಿದ್ದಾರೆ.
ವಾಷಿಂಗ್ಟನ್(ಜೂ.21): ಇನ್ನೆರಡು ದಿನದಲ್ಲಿ ಔದ್ಯೋಗಿಕ ವೀಸಾಗಳ ಮೇಲೆ ಹೊಸ ನಿಬಂಧನೆಗಳನ್ನು ಹೇಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಿಳಿಸಿದ್ದಾರೆ.
ಕೊರೋನಾ ವೈರಸ್‌ನಿಂದಾಗಿ ಅಮೆರಿಕದ ಜನರು ಉದ್ಯೋಗಕ್ಕಾಗಿ ಕಷ್ಟಪಡುವುದನ್ನು ತಪ್ಪಿಸಿ, ಜಾಬ್ ಮಾರ್ಕೆಟ್‌ನಲ್ಲಿ ಉದ್ಯೋಗ ಭದ್ರತೆ ಬರುವಂತೆ ಮಾಡಲು ಉದ್ದೇಶಿಸಲಾಗಿದೆ. ವಿದೇಶಿ ಉದ್ಯೋಗಿಗಳ ಆಗಮನಕ್ಕೆ ತಡೆ ನೀಡುವುದರ ಮೂಲಕ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್ ಸಜ್ಜು
ವಿಸಾ ಬಗ್ಗೆ ಇನ್ನೆರಡು ದಿನದಲ್ಲಿ ನಾವು ಮಹತ್ವದ ವಿಚಾರ ತಿಳಿಸಲಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಹೊಸ ನಿಬಂಧನೆಗಳಿಂದ ಯಾವ್ಯಾವ ವೀಸಾ ಹೊರತಾಗಲಿದೆ ಎಂಬ ಪ್ರಶ್ನೆಗೆ ಕೆಲವೇ ಕೆಲವು ವಿಸಾ ಹೊರತು ಪಡಿಸಿ ಉಳಿದೆಲ್ಲ ವೀಸಾಗಳಿಗೆ ಕಠಿಣ ನಿಯಮ ಇರಲಿದೆ ಎಂದಿದ್ದಾರೆ.
ಬಹಳ ದೀರ್ಘ ಸಮಯದಿಂದ ಇಲ್ಲಿ ಬಂದು ಉದ್ಯಮದಲ್ಲಿ ತೊಡಗಿರುವವರನ್ನು ಹೊರತುಪಡಿಸಿ ವೀಸಾ ನಿಬಂಧನೆ ಒಂದಷ್ಟು ಸಮಯದ ತನಕ ಇನ್ನಷ್ಟು ಕಠಿಣ ಮಾಡಲಾಗುತ್ತದೆ ಎಂದಿದ್ದಾರೆ.
ಮಾಡಿದ್ದುಣ್ಣೋ ಮಾರಾಯ, ತಬ್ಲಿಘಿಗಳಿಗೆ 10 ವರ್ಷ ಭಾರತ ಎಂಟ್ರಿ ಇಲ್ಲ!
ವಿದೇಶಿಗರ ಆಗಮನವನ್ನು ಕಡಿಮೆ ಮಾಡಲು ಬಹಳ ಕಾಲದಿಂದಲೂ ಪ್ರಯತ್ನಿಸುತ್ತಿದ್ದ ಟ್ರಂಪ್ ಕೊರೋನಾ ಕಾಲವನ್ನು ಬಳಸಿಕೊಳ್ಳುತ್ತಿದ್ದಾರೆ. ವಿದೇಶಿಗರ ವಿಸಾ ನಿಬಂಧನೆ ಕಠಿಣಗೊಳಿಸಿ ಚುನಾವಣೆ ಗೆಲ್ಲುವುದಕ್ಕಾಗಿ ಯೋಚಿಸುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳು ಈ ಸಂಬಂಧ, ವಿದೇಶದಿಂದ ಬರುವ ಉದ್ಯೋಗಿಗಳನ್ನು ತಡೆದಲ್ಲಿ ಇದು ಆರ್ಥಿಕತೆಯನ್ನು ಬಾಧಿಸಲಿದೆ ಎಂದು ಟ್ರಂಪ್‌ಗೆ ಒತ್ತಾಯಿಸಿದ್ದಾರೆ.