ಚೀನಾ ಧ್ವಜ ಹಾಕಿ ರಷ್ಯಾ ಮೇಲೆ ದಾಳಿ ಮಾಡಬೇಕು, ಮಜಾ ನೋಡೋಣ: ಟ್ರಂಪ್

* ರಷ್ಯಾ-ಚೀನಾ ಕಾದಾಟ ಆರಂಭಿಸಿದಾಗ ಮಜಾ ನೋಡೋಣ

* ಚೀನಾ ಧ್ವಜ ಹಾಕಿ ರಷ್ಯಾ ಮೇಲೆ ದಾಳಿ ಮಾಡಬೇಕು: ಟ್ರಂಪ್‌

* ಆಗ ಚೀನಾ ದಾಳಿ ನಡೆಸಿದೆ ಎಂದು ರಷ್ಯಾ ತಿಳಿಯುತ್ತದೆ

Trump says US should put Chinese flag on jets and bomb Russia pod

ವಾಷಿಂಗ್ಟನ್‌(ಮಾ.08): ಇತ್ತೀಚೆಗೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನು ಟೀಕಿಸಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಚೀನಾ ಧ್ವಜಗಳನ್ನು ಹಾಕಿಕೊಂಡು ಎಫ್‌-22 ಯುದ್ಧವಿಮಾನಗಳ ಮೂಲಕ ರಷ್ಯಾ ಮೇಲೆ ಬಾಂಬ್‌ ದಾಳಿ ನಡೆಸಬೇಕು’ ಎಂದು ಟ್ರಂಪ್‌ ಹೇಳಿದ್ದಾರೆ.

‘ಎಫ್‌-22 ಯುದ್ಧವಿಮಾನಗಳ ಮೂಲಕ ಚೀನಾ ಧ್ವಜ ಬಳಸಿ ದಾಳಿ ಮಾಡಿದರೆ, ಚೀನಾ ಈ ದಾಳಿ ನಡೆಸಿದೆ ಎಂದು ರಷ್ಯಾ ಭಾವಿಸುತ್ತದೆ. ರಷ್ಯಾ-ಚೀನಾ ನಡುವೆ ಕದನ ಆರಂಭವಾಗುತ್ತದೆ. ನಾವು ಆಗ ಹಿಂದೆ ಕುಳಿತು ಮಜಾ ನೋಡೋಣ’ ಎಂದು ಟ್ರಂಪ್‌, ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಆಗ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟುವ ದೃಶ್ಯ ವಿಡಿಯೋದಲ್ಲಿ ಕಂಡುಬರುತ್ತದೆ.

Facebook Bans Russia Media: ಫೇಸ್‌ಬುಕ್‌ನಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಬ್ಯಾನ್!

ಇದೇ ವೇಳೆ, ನ್ಯಾಟೋ ಒಕ್ಕೂಟವನ್ನು ‘ಕಾಗದದ ಹುಲಿ’ ಎಂದು ಟ್ರಂಪ್‌ ಟೀಕಿಸಿದ್ದಾರೆ. ‘ಮಾನವತೆಯ ಮೇಲೆ ಈ ರೀತಿಯ ದಾಳಿ ನಡೆಸಲು ಅವಕಾಶ ನೀಡಬಾರದು’ ಎಂದು ರಷ್ಯಾ ನಡೆಯನ್ನು ಖಂಡಿಸಿದ್ದಾರೆ.

‘ರಷ್ಯಾಗೆ ಯುದ್ಧ ಮಾಡಲು ಬಿಡದ 21ನೇ ಶತಮಾನದ ಏಕೈಕ ಅಧ್ಯಕ್ಷ ಎಂಬ ಕೀರ್ತಿ ನನ್ನದು. ಬುಷ್‌ ಅವಧಿಯಲ್ಲಿ ಜಾರ್ಜಿಯಾ ಮೇಲೆ ದಾಳಿ ಮಾಡಿತು. ಒಬಾಮಾ ಅವಧಿಯಲ್ಲಿ ಕ್ರಿಮಿಯಾ ಮೇಲೆ ದಾಳಿ ನಡೆಸಿತು. ಈಗ ಬೈಡೆನ್‌ ಅವಧಿಯಲ್ಲಿ ಉಕ್ರೇನ್‌’ ಎಂದು ಟ್ರಂಪ್‌ ಟೀಕಿಸಿದ್ದಾರೆ.

Facebook Reels 150 ದೇಶಗಳಿಗೆ ವಿಸ್ತರಣೆ: ಕ್ರಿಯೇಟರ್ಸ್‌ ಹಣಗಳಿಕೆಗೆ ಮೆಟಾ ಹೊಸ ಅವಕಾಶ!

ಇತ್ತೀಚೆಗೆ ಟ್ರಂಪ್‌ ಅವರು, ‘ನಾನು ಇಂದು ಅಮೆರಿಕ ಅಧ್ಯಕ್ಷ ಹುದ್ದೆಯಲ್ಲೇ ಇರುತ್ತಿದ್ದರೆ ಯುದ್ಧ ನಡೆಯಲು ಬಿಡುತ್ತಿರಲಿಲ್ಲ. ಬೈಡೆನ್‌ ಸುಮ್ಮನೇ ಇದ್ದುದರ ಫಲ ಇದು’ ಎಂದು ವಾಗ್ದಾಳಿ ನಡೆಸಿದ್ದರು.

Facebook Reels 150 ದೇಶಗಳಿಗೆ ವಿಸ್ತರಣೆ: ಕ್ರಿಯೇಟರ್ಸ್‌ ಹಣಗಳಿಕೆಗೆ ಮೆಟಾ ಹೊಸ ಅವಕಾಶ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ತೆರೆಮರೆಗೆ ಸರಿದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರತ್ಯಕ್ಷರಾಗಿದ್ದು, ಉಕ್ರೇನ್‌ ಯುದ್ಧವನ್ನು ಮುಂದಿಟ್ಟುಕೊಂಡು ಹಾಲಿ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಹಿಗ್ಗಾಮುಗ್ಗಾ ವಾಕ್‌ ಪ್ರಹಾರ ನಡೆಸಿದ್ದಾರೆ. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಅಕ್ರಮ ನಡೆಯದೆ ಹೋಗಿದ್ದರೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಭಯಾನಕ ದುರ್ಘಟನೆ ಎಂದಿಗೂ ಘಟಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಫ್ಲೋರಿಡಾದ ಒರ್ಲಾಂಡೋದಲ್ಲಿ ಶನಿವಾರ ನಡೆದ ರಿಪಬ್ಲಿಕನ್‌ ಪಕ್ಷದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ್ದಕ್ಕೆ ಜೋ ಬೈಡೆನ್‌ ನಾಯಕತ್ವ ದುರ್ಬಲವಾಗಿರುವುದೇ ಕಾರಣ ಎಂದರು.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಬುದ್ಧಿವಂತ. ಅದು ಸಮಸ್ಯೆ ಅಲ್ಲ. ಆದರೆ ಸಮಸ್ಯೆ ಇರುವುದು ನಮ್ಮ ನಾಯಕರು ಪೆದ್ದರಾಗಿರುವುದರಿಂದ. ರಷ್ಯಾವನ್ನು ಕಡೆ ಪಕ್ಷ ಮಾನಸಿಕವಾಗಿಯಾದರೂ ತುಂಡು ತುಂಡು ಮಾಡುವ ಬದಲಿಗೆ ನ್ಯಾಟೋ ಪಡೆಗಳು ಬುದ್ಧಿವಂತನ ಎದುರಿಗಿರುವ ವ್ಯಕ್ತಿಯತ್ತ ನೋಡಿ ನಿರ್ಬಂಧಗಳನ್ನು ಹೇರುತ್ತಿವೆ ಎಂದು ಲೇವಡಿ ಮಾಡಿದರು. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಧೈರ್ಯಶಾಲಿ ವ್ಯಕ್ತಿ ಎಂದು ಬಣ್ಣಿಸಿದರು. 

ಇದನ್ನೂ ಓದಿ: Russia Ukraine Crisis: ಗನ್‌ ಕೈಗೆತ್ತಿಕೊಂಡ ಮಿಸ್‌ ಉಕ್ರೇನ್‌ ಅನಸ್ತಾಸೀಯಾ ಲೆನ್ನಾ!

ರಷ್ಯಾ ಮೇಲೆ ಮತ್ತಷ್ಟುಆರ್ಥಿಕ ನಿರ್ಬಂಧಕ್ಕೆ ಸಿದ್ಧತೆ: ಉಕ್ರೇನ್‌ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾದ ಹಣಕಾಸು ವ್ಯವಸ್ಥೆಗೆ ದೊಡ್ಡ ಮಟ್ಟಿನ ಹೊಡೆತ ನೀಡಲು, ಜಾಗತಿಕ ಸಮುದಾಯ ಸಮ್ಮತಿ ಸೂಚಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಷ್ಯಾದ ಕೇಂದ್ರೀಯ ಬ್ಯಾಂಕ್‌ ಮತ್ತು ಈಗಾಗಲೇ ನಿರ್ಬಂಧಕ್ಕೆ ಒಳಗಾಗಿರುವ ಹಲವು ಬ್ಯಾಂಕ್‌ಗಳು ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರಲಿದೆ. ಅಲ್ಲದೆ ಈ ಬೆಳವಣಿಗೆ ರಷ್ಯಾದ ಆಮದು ಮತ್ತು ರಫ್ತು ವಲಯಕ್ಕೂ ಭಾರೀ ಪೆಟ್ಟು ನೀಡಲಿದೆ ಎನ್ನಲಾಗಿದೆ.

ಸ್ವಿಫ್ಟ್‌ ಶಾಕ್‌: ಭಾರತ ಸೇರಿದಂತೆ ವಿಶ್ವದ 200 ದೇಶಗಳ 11000ಕ್ಕೂ ಹೆಚ್ಚು ಬ್ಯಾಂಕ್‌ಗಳು ಸ್ವಿಫ್ಟ್‌ (ಸೊಸೈಟಿ ಫಾರ್‌ ವಲ್ಡ್‌ರ್‍ವೈಡ್‌ ಇಂಟರ್‌ಬ್ಯಾಂಕ್‌ ಪೈನಾನ್ಷಿಯಲ್‌ ಟೆಲಿಕಮ್ಯುನಿಕೇಷನ್‌) ಎಂಬ ಹಣಕಾಸು ವ್ಯವಸ್ಥೆಯನ್ನು ಬಳಸುತ್ತಿವೆ. ಈ ವ್ಯವಸ್ಥೆಯು ಎಲ್ಲಾ ಬ್ಯಾಂಕ್‌ಗಳಿಗೆ ದೇಶದಿಂದ ದೇಶಕ್ಕೆ ಹಣ ವರ್ಗಾವಣೆ ಕುರಿತು ತ್ವರಿತ ಸಂದೇಶ ನೀಡುವ ಮೂಲಕ, ಹಣ ವರ್ಗಾವಣೆ ಪ್ರಕ್ರಿಯೆ ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ.

Latest Videos
Follow Us:
Download App:
  • android
  • ios