Facebook Bans Russia Media: ಫೇಸ್‌ಬುಕ್‌ನಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಬ್ಯಾನ್!
*ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯವಾಗಿ ತೀವ್ರ ವಿರೋಧ
*ಫೇಸ್‌ಬುಕ್‌ನಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಜಾಹೀರಾತು, ಹಣಗಳಿಸುವ ಕಂಟೆಂಟ್ ಬ್ಯಾನ್
*ಇದೇ ನಿರ್ಧಾರವನ್ನು ಮತ್ತೊಂದು ಸೋಷಿಯಲ್ ಮೀಡಿಯಾ ಕಂಪನಿ ಟ್ವಿಟರ್ ಕೂಡ ಘೋಷಿಸಿದೆ
ಉಕ್ರೇನ್ (Ukraine) ಮೇಲೆ ರಷ್ಯಾ (Russia) ಕೈಗೊಂಡಿರುವ ಸೇನಾ ಕಾರ್ಯಾಚರಣೆ (military operations) ಯ ವಿರುದ್ಧ ಅಂತಾರಾಷ್ಟ್ರೀಯವಾಗಿ ತೀವ್ರ ಖಂಡನೆ ವ್ಯಕ್ತವಾಗಿದೆ. ಇದರ ಮಧ್ಯೆಯೇ, ಸೋಷಿಯಲ್ ಮೀಡಿಯಾ (Social Media) ದೈತ್ಯ ಫೇಸ್‌ಬುಕ್ (Facebook) ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಏನೆದಂರೆ, ಫೇಸ್‌ಬುಕ್ ವ್ಯಾಪಾರ ಕಾರ್ಯನಿರ್ವಾಹಕರ ಪ್ರಕಾರ, ಫೇಸ್‌ಬುಕ್ ತನ್ನ ಸೈಟ್‌ನಲ್ಲಿ ರಷ್ಯಾದ ಎಲ್ಲ ಮಾಧ್ಯಮಗಳನ್ನು ಜಾಹೀರಾತು ಮಾಡುವುದನ್ನು ನಿಷೇಧಿಸಿದೆ. ಫೇಸ್‌ಬುಕ್‌ನ ಭದ್ರತಾ ನೀತಿಯ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ (Nathaniel Gleicher) ಅವರ ಪ್ರಕಾರ, ರಷ್ಯಾದ ರಾಷ್ಟ್ರ ಮಾಧ್ಯಮ (State Media)ವು ಅದರ ವೇದಿಕೆಯಲ್ಲಿ ಜಾಹೀರಾತುಗಳನ್ನು ಅಥವಾ ವಿಷಯವನ್ನು ಹಣಗಳಿಸುವುದನ್ನು ಈಗ ನಿಷೇಧಿಸಲಾಗಿದೆ ಮತ್ತು ಹೊಸ ಮಿತಿಗಳು ಜಾಗತಿಕವಾಗಿ ಅನ್ವಯಿಸುತ್ತವೆ. ಫೇಸ್‌ಬುಕ್ ರಷ್ಯಾದ ಸ್ಟೇಟ್ ಮೀಡಿಯಾವನ್ನು ಗುರುತಿಸುವುದನ್ನು ಮುಂದುವರಿಸುತ್ತದೆ ಎಂದು ಗ್ಲೀಚರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Motorola Edge 30 Pro ಭಾರತದಲ್ಲಿ ಲಾಂಚ್, ಏನೆಲ್ಲ ವಿಶೇಷತೆ? ಸೆಲ್ಫಿ ಕ್ಯಾಮೆರಾ ಹೇಗಿದೆ?
ನಾವು ಈಗ ರಷ್ಯಾದ ಸ್ಟೇಟ್ ಮೀಡಿಯಾವು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಜಗತ್ತಿನಾದ್ಯಂತ ಎಲ್ಲಿಯಾದರೂ ಜಾಹೀರಾತುಗಳನ್ನು ಪ್ರದರ್ಶಿಸಲು ಅಥವಾ ಹಣಗಳಿಸಲು ನಿಷೇಧಿಸಿದ್ದೇವೆ ಮತ್ತು ಅದು ಕಾನೂನುಬಾಹಿರ ಎನಿಸಿಕೊಳ್ಳುತ್ತದೆ. ನಾವು ಇತರ ರಷ್ಯಾದ ರಾಜ್ಯ ಮಾಧ್ಯಮಗಳನ್ನು ವರ್ಗೀಕರಿಸುವುದನ್ನು ಮುಂದುವರಿಸುತ್ತಿದ್ದೇವೆ. ಈ ಮಾರ್ಪಾಡುಗಳು ಈಗಾಗಲೇ ಕಾರ್ಯಗತಗೊಳ್ಳಲು ಪ್ರಾರಂಭಿಸಿವೆ ಮತ್ತು ವಾರಾಂತ್ಯದಲ್ಲಿ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ಉಕ್ರೇನ್ (Ukraine) ನಲ್ಲಿನ ಪರಿಸ್ಥಿತಿಯನ್ನು ಫೇಸ್‌ಬುಕ್ ಇನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದರು.
ರಷ್ಯಾ (Russia) ಮತ್ತು ಉಕ್ರೇನ್ (Ukraine) ನಲ್ಲಿ ಎಲ್ಲಾ ಜಾಹೀರಾತುಗಳನ್ನು ಸ್ಥಗಿತಗೊಳಿಸುವುದಾಗಿ ಟ್ವಿಟರ್ (Twitter) ಘೋಷಿಸಿದ ಕೆಲವೇ ಗಂಟೆಗಳ ನಂತರ ರಷ್ಯಾದ ಸ್ಟೇಟ್ ಮೀಡಿಯಾವನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತು ಅಥವಾ ಹಣಗಳಿಕೆಯಿಂದ ಹೊರಗಿಡುವ ಸಂಬಂಧ ಫೇಸ್‌ಬುಕ್ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಸೋಷಿಯಲ್ ಮೀಡಿಯಾ ಕಾಲದ ಎರಡು ದೈತ್ಯ ಕಂಪನಿಗಳು ತೆಗೆದುಕೊಂಡಿರುವ ಈ ನಿರ್ಧಾರವು ಖಂಡಿತವಾಗಿಯೂ ರಷ್ಯಾದ ಒಂದಿಷ್ಟು ಪರಿಣಾಮ ಬೀರಬಹುದು. ಇಂಥ ಪ್ರತಿಕೂಲ ಸಂದರ್ಭಗಳು ಎದುರಾದಾಗಲೆಲ್ಲ ಸೋಷಿಯಲ್ ಮೀಡಿಯಾಗಳು ತಮ್ಮದೇ ಆದ ನಿಲುವನ್ನು ಪ್ರಕಟಿಸುತ್ತಾ ಬಂದಿವೆ.
ಉಕ್ರೇನ್ ಮತ್ತು ರಷ್ಯಾದಲ್ಲಿ ನಾವು ತಾತ್ಕಾಲಿಕವಾಗಿ ಜಾಹೀರಾತುಗಳನ್ನು ಸ್ಧಗಿತಗೊಳಿಸಿದ್ದೇವೆ ಮತ್ತು ಅಗತ್ಯ ಸಾರ್ವಜನಿಕ ಸುರಕ್ಷತಾ ಮಾಹಿತಿಯನ್ನು ಉನ್ನತೀಕರಿಸಲಾಗಿದೆ ಮತ್ತು ಜಾಹೀರಾತುಗಳು ಅದರಿಂದ ಹೊರತಾಗಿರುವುದು ಎಂದು ಟ್ವಿಟರ್ (Twitter) ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೋಷಿಯಲ್ ಮೀಡಿಯಾ ಜಗತ್ತಿನ ಎರಡು ದೈತ್ಯ ಕಂಪನಿಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನ ಈ ಘೋಷಣೆಗಳು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಮೂರನೇ ದಿನದೊಂದಿಗೆ ಹೊಂದಿಕೆಯಾಗುತ್ತವೆ ಎಂದು ಹೇಳಬಹುದು. ಗುರುವಾರ ಮುಂಜಾನೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್‌ನಲ್ಲಿ ವಿಶೇಷ ಸೇನಾ ಕಾರ್ಯಾಚರಣೆಯನ್ನು ಆರಂಭಿಸುತ್ತಿರುವುದಾಗಿ ಪ್ರಕಟಿಸಿ, ಉಕ್ರೇನ್ ಮೇಲೆ ಮೂರು ನಿಟ್ಟಿನಿಂದ ದಾಳಿಯನ್ನು ಆರಂಭಿಸಿದರು. ಇದಕ್ಕೆಜಗತ್ತು ತೀವ್ರವಾಗಿ ವಿರೋಧಿಸಿದರೂ ರಷ್ಯಾ ಕೇರ್ ಮಾಡದೇ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೂರನೇ ದಿನಕ್ಕೆ ಉಕ್ರೇನ್ ರಾಜಧಾನಿ ಕಿವ್ ಮೇಲೆ ಪೂರ್ಣವಾಗಿ ನಿಯಂತ್ರಣವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಉಕ್ರೇನ್‌ನ ವಿದೇಶಾಂಗ ಸಚಿವರು ಗುರುವಾರ ಮುಂಜಾನೆ ಪುಟಿನ್ ಉಕ್ರೇನ್‌ನ ಮೇಲೆ "ಪೂರ್ಣ-ಪ್ರಮಾಣದ ಆಕ್ರಮಣ" ಪ್ರಾರಂಭಿಸಿದ್ದಾರೆ ಎಂದು ಖಚಿದಪಡಿಸಿದ್ದಾರೆ.
ಏತನ್ಮಧ್ಯೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ರಷ್ಯಾದ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವಲ್ಲಿ ಅಮೆರಿಕ ವಿಫಲವಾಗಿದೆ. ಭದ್ರತಾ ಸಮಿತಿಯಲ್ಲಿ ರಷ್ಯಾ ತನ್ನ ವಿಟೋ ಅಧಿಕಾರ ಚಲಾಯಿಸಿದೆ. ಜತೆಗೆ, ಜಗತ್ತಿನ ಇತರೆ ಪ್ರಮುಖ ರಾಷ್ಟ್ರಗಳಾಗಿರುವ ಚೀನಾ ಹಾಗೂ ಭಾರತಗಳೆರಡೂ ಈ ಚಟುವಟಿಕೆಗಳಿಂದ ದೂರ ಉಳಿದಿದ್ದು, ಅಮೆರಿಕದ ನಿರ್ಣಯಕ್ಕೆಸೋಲಾಗಿದೆ.
ಏಶ್ಯಾ ಪೆಸಿಫಿಕ್ ಸಂಸ್ಥೆಗಳಿಗೆ ಸೈಬರ್ ಭದ್ರತೆ, ಐಬಿಎಂನಿಂದ ನೂತನ ಸೈಬರ್ ಸೆಕ್ಯುರಿಟಿ ಹಬ್