ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಪಡೆದಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಆರೋಪ ಎದುರಿಸುತ್ತಿರುವ (ತೋಶಾಖಾನಾ) ಇಮ್ರಾನ್‌ ಖಾನ್‌ ದಂಪತಿಗೆ, ಪಾಕ್‌ ನ್ಯಾಯಾಲಯವೊಂದು ತಲಾ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಪಡೆದಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಆರೋಪ ಎದುರಿಸುತ್ತಿರುವ (ತೋಶಾಖಾನಾ) ಇಮ್ರಾನ್‌ ಖಾನ್‌ ದಂಪತಿಗೆ, ಪಾಕ್‌ ನ್ಯಾಯಾಲಯವೊಂದು ತಲಾ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಂಗಳವಾರವಷ್ಟೇ ಇಮ್ರಾನ್‌ಗೆ ರಹಸ್ಯ ದಾಖಲೆ ಬಹಿರಂಗ ಪ್ರಕರಣದಲ್ಲಿ 10 ವರ್ಷ ಜೈಲಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಮತ್ತೊಂದು ಶಾಕ್‌ ಎದುರಾಗಿದೆ.

ಬುಧವಾರ ತೋಶಾಖಾನಾ ಪ್ರಕರಣದ ತೀರ್ಪು ಪ್ರಕಟಿಸಿದ ಉತ್ತರದಾಯಿತ್ವ ನ್ಯಾಯಾಲಯ, ಇಮ್ರಾನ್‌ಖಾನ್‌ ಹಾಗೂ ಪತ್ನಿ ಬುಷ್ರಾ ಬೀಬಿಗೆ ತಲಾ 78.7 ಕೋಟಿ ರು. ದಂಡ ವಿಧಿಸಿದೆ ಮತ್ತು ಇನ್ನು10 ವರ್ಷ ಕಾಲ ಯಾವುದೇ ಅಧಿಕಾರ ಅನುಭವಿಸದಂತೆ ಆದೇಶಿಸಿದೆ, ಇದರಿಂದಾಗಿ ಇಮ್ರಾನ್‌ ಫೆ.8ರ ಚುನಾವಣೆಗೆ ಸ್ಪರ್ಧಿಸಿ ಮತ್ತೆ ಪ್ರಧಾನಿ ಆಗುವ ಕನಸಿಗೆ ಹಿನ್ನಡೆ ಆಗಿದೆ,

ಏನಿದು ಪ್ರಕರಣ?:

ತೋಶಾಖಾನಾ ಎಂದರೆ ಸರ್ಕಾರಿ ಬೊಕ್ಕಸ (ಖಜಾನೆ) ಎಂಬುದಾಗಿದ್ದು, ಇಮ್ರಾನ್‌ ಖಾನ್‌ ಪ್ರಧಾನಿಯಾಗಿದ್ದ ವೇಳೆ ವಿವಿಧೆಡೆಯಿಂದ ಪಡೆದುಕೊಂಡ ಉಡುಗೊರೆಗಳನ್ನು ಸರ್ಕಾರಕ್ಕೆ ಬಹಿರಂಗಪಡಿಸಿರಲಿಲ್ಲ ಮತ್ತು ಕೆಲವು ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಿಕೊಂಡ ಆರೋಪ ಕೇಳಿ ಬಂದಿತ್ತು.

ಉಡುಗೊರೆ ಪ್ರಕರಣದಲ್ಲಿ ಇಮ್ರಾನ್ ಖಾನ್ ಜೈಲಿಂದ ರಿಲೀಸ್‌, ತಕ್ಷಣವೇ ಮತ್ತೊಂದು ಕೇಸಲ್ಲಿ ಬಂಧನ!

2023ರಲ್ಲಿ ಈವರೆಗೂ 9 ದೇಶಗಳ ಮಾಜಿ ಪ್ರಧಾನಿ, ಅಧ್ಯಕ್ಷರ ಬಂಧನ, ಯಾರೆಲ್ಲಾ ಅನ್ನೋದು ಈ ಲಿಸ್ಟ್‌ ನೋಡಿ!