ಉಡುಗೊರೆ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಬಿಡುಗಡೆ. ಮತ್ತೊಂದು ಕೇಸಲ್ಲಿ ತಕ್ಷಣವೇ ಬಂಧನ. ಬುಧವಾರ ನ್ಯಾಯಾಲಯಕ್ಕೆ ಹಾಜರು.
ಇಸ್ಲಾಮಾಬಾದ್ (ಆ.30): ತೋಶಾಖಾನಾ (ಉಡುಗೊರೆ) ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡಿರುವ ಇಸ್ಲಾಮಾಬಾದ್ ಹೈಕೋರ್ಟ್, ತಕ್ಷಣವೇ ಇಮ್ರಾನ್ ಬಿಡುಗಡೆ ಮಾಡುವಂತೆ ಮಂಗಳವಾರ ಆದೇಶಿಸಿದೆ. ಆದರೆ ಬಿಡುಗಡೆ ಸಜ್ಜಾಗಿದ್ದ ಇಮ್ರಾನ್‌ರನ್ನು ಮತ್ತೊಂದು ಕೇಸಲ್ಲಿ ಬಂಧಿಸಿದ ಕಾರಣ ಅವರು ತಕ್ಷಣಕ್ಕೆ ಜೈಲಿನಿಂದ ಹೊರಬರುವ ಸಾಧ್ಯತೆ ದೂರವಾಗಿದೆ.
ಭೂಮಿ ಸೂರ‍್ಯನ ಸುತ್ತ ಸುತ್ತಲ್ಲ, ಪಾಕ್ ವಿದ್ಯಾರ್ಥಿಯ ಅಚ್ಚರಿ ಹೇಳಿಕೆ ವೈರಲ್
ಉಡುಗೊರೆ ಪ್ರಕರಣದಲ್ಲಿ ಶಿಕ್ಷೆ ಪ್ರಶ್ನಿಸಿ ಇಮ್ರಾನ್ ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪು ನೀಡಿದ ಹೈಕೋರ್ಟ್, ವಿಚಾರಣೆ ವೇಳೆ ಅಧೀನ ನ್ಯಾಯಾಲಯ ಲೋಪ ಎಸಗಿದೆ ಎಂದು ಹೇಳಿತು. ಜೊತೆಗೆ ಶಿಕ್ಷೆ ಅಮಾನತು ಮಾಡಿ, ಇಮ್ರಾನ್ ಬಿಡುಗಡೆಗೆ ಆದೇಶಿಸಿತು. ಹೈಕೋರ್ಟ್ ಆದೇಶದಿಂದ 5 ವರ್ಷಗಳ ಕಾಲ ರಾಜಕೀಯದಲ್ಲಿ ಭಾಗವಹಿಸದಂತೆ ಮತ್ತು ಚುನಾವಣೆಗೆ ಸ್ಪರ್ಧಿಸಿದಂತೆ ಅವಕಾಶ ಕಳೆದುಕೊಂಡಿದ್ದ ಇಮ್ರಾನ್‌ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬಿನ್ ಲಾಡೆನ್‌ನನ್ನು ಕೊಂದ ಅಮೆರಿಕ ನೌಕಾ ಪಡೆ ಮಾಜಿ ಯೋಧ ಅರೆಸ್ಟ್
ಆದರೆ ಈ ತೀರ್ಪಿನ ಬೆನ್ನಲ್ಲೇ ತಮ್ಮ ಅಧಿಕಾರಾವಧಿಯಲ್ಲಿ ವಿದೇಶಗಳಿಂದ ಪಡೆದ ಠೇವಣಿಯನ್ನು ಮುಚ್ಚಿಟ್ಟು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದ ಆರೋಪದಡಿ ಅವರನ್ನು ಮತ್ತೆ ಬಂಧಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು ಆ.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈ ಶ್ರೀಮಂತ ಮಹಿಳೆ ಭಾರತದ ವೈದ್ಯೆ, ಫೋರ್ಬ್ಸ್ ಪಟ್ಟಿಯಲ್ಲೂ ಸ್ಥಾನ,
ಚಿಕನ್, ಮಟನ್: ಈ ನಡುವೆ ಇನ್ನು ಇಮ್ರಾನ್ ಖಾನ್‌ಗೆ ನೀಡಬೇಕಾಗಿದ್ದ ಸೌಲಭ್ಯಗಳನ್ನು ಜೈಲಿನಲ್ಲಿ ನೀಡಲಾಗುತ್ತಿಲ್ಲ ಎಂಬ ವರದಿಗಳ ಬೆನ್ನಲ್ಲೇ ಅವರಿಗೆ ಜೈಲಿನಲ್ಲಿ ನಾಟಿ ಕೋಳಿ, ಮಟನ್ ಊಟ ನೀಡಲಾಗುತ್ತಿದೆ ಎನ್ನಲಾಗಿದೆ. ಇಮ್ರಾನ್ ಅವರ ಉನ್ನತ ಪ್ರೊಫೈಲ್‌ಗೆ ತಕ್ಕಂತೆ ಅವರಿಗೆ ಎಲ್ಲ ಸೌಲಭ್ಯ ನೀಡಲಾಗುತ್ತಿದೆ. ಚಿಕನ್ ಮಟನ್ ನೀಡಲಾಗುತ್ತಿದೆ ಎಂದು ಜೈಲಿನ ಪೊಲೀಸ್ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ. ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಜೈಲಲ್ಲಿ ವಿಷ ಉಣ್ಣಿಸಿ ಕೊಲ್ಲಲು ಸಂಚು ನಡೆದಿದೆ ಎಂದು ಅವರ ಪತ್ನಿ ಬುಷ್ರಾ ಬೀಬಿ ಆಪಾದಿಸಿದ್ದರು.
