ಚುನಾವಣಾ ಪ್ರಚಾರದ ವೇಳೆ ಸುಂಟರಗಾಳಿಗೆ ಕುಸಿದ ವೇದಿಕೆ: 9 ಸಾವು: ಭಯಾನಕ ದೃಶ್ಯ ವೈರಲ್
ಚುನಾವಣಾ ಪ್ರಚಾರದ ವೇಳೆ ಬೀಸಿದ ಭಾರಿ ಸುಂಟರಗಾಳಿಗೆ ಬೃಹತ್ ವೇದಿಕೆ ಕುಸಿದು 9 ಜನ ಸಾವನ್ನಪ್ಪಿದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ, ಮೆಕ್ಸಿಕನ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಈ ಅವಾಂತರ ನಡೆದಿದ್ದು, 63ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಬೀಸಿದ ಭಾರಿ ಸುಂಟರಗಾಳಿಗೆ ಬೃಹತ್ ವೇದಿಕೆ ಕುಸಿದು 9 ಜನ ಸಾವನ್ನಪ್ಪಿದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ, ಮೆಕ್ಸಿಕನ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಈ ಅವಾಂತರ ನಡೆದಿದ್ದು, 63ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಅಘಾತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಚಾರ ಸಮಾವೇಶದಲ್ಲಿ ಭಾಗಿಯಾದ ಜನ ಕಿರುಚಿಕೊಂಡು ಓಡುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.
ಉತ್ತರ ಮೆಕ್ಸಿಕನ್ ರಾಜ್ಯದ ನ್ಯೂವೊ ಲಿಯಾನ್‌ನಲ್ಲಿ ಈ ಘಟನೆ ನಡೆದಿದೆ. ಮೆಕ್ಸಿಕೋದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾದ ಜಾರ್ಜ್ ಅಲ್ವಾರೆಜ್ ಮೈನೆಜ್ ಅವರು ಚುನಾವಣಾ ಭಾಷಣ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಸುಂಟರಗಾಳಿಗೆ ಸ್ಟೇಜ್ ಕುಸಿಯುವುದನ್ನು ಗಮನಿಸಿ ಅವರು ಸುರಕ್ಷಿತ ಪ್ರದೇಶಕ್ಕೆ ಓಡಲು ಮುಂದಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಚುನಾವಣ ಪ್ರಚಾರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಭ್ಯರ್ಥಿ ಜಾರ್ಜ್ ಹೇಳಿದ್ದಾರೆ.
ಕವ್ವಾಲಿ ವೇಳೆ ಕುಸಿದ ವೇದಿಕೆ... ನಗು ಉಕ್ಕಿಸುತ್ತಿದೆ ನಂತರದ ದೃಶ್ಯ
ಜಾರ್ಜ್ ಅಲ್ವಾರೆಜ್ ಮೈನೆಜ್ ಅವರು ಸ್ಟೇಜ್‌ನಲ್ಲಿ ನಿಂತು ಭಾಷಣ ಮಾಡುತ್ತಿದ್ದು, ಕೆಳಗೆ ನಿಂತಿದ್ದ ಜನ ಜೋರಾಗಿ ಅವರ ಹೆಸರನ್ನು ಕೂಗುತ್ತಿರುವ ವೇಳೆಯೇ ಈ ದುರಂತ ನಡೆದಿದ್ದು, ಬೃಹತ್ ವೇದಿಕೆಯ ದೊಡ್ಡ ದೊಡ್ಡ ಲೈಟಿಂಗ್ ಸೆಟ್ ಸೇರಿದಂತೆ ಇಡೀ ವೇದಿಕೆಯೇ ಕ್ಷಣದಲ್ಲಿ ನೆಲಕ್ಕೆ ಕುಸಿಯುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಕಾರ್ಯಕ್ರಮದ ವೇಳೆ ಉರುಳಿದ ವೇದಿಕೆ : ಮೂವರು ಬಿಜೆಪಿ ಶಾಸಕರಿಗೆ ಗಾಯ
ಗಾಳಿಯ ರಭಸಕ್ಕೆ ನಾವಿದ್ದ ವೇದಿಕೆಯು ಕುಸಿದು ಬಿದ್ದಿದೆ, ಘಟನೆಯ ಬಳಿಕ ನಾನು ಸ್ಯಾನ್ ಜೋಸ್ ಆಸ್ಪತ್ರೆಗೆ ತೆರಳಿದ್ದೇನೆ. ನಾನು ಕ್ಷೇಮವಾಗಿದ್ದೇನೆ . ಹೆಚ್ಚಿನ ಮಾಹಿತಿ ಹಾಗೂ ಗಾಯಾಳುಗಳ ಕ್ಷೇಮಕ್ಕಾಗಿ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದೇನೆ. ಗಾಯಗೊಂಡ ಹಾಗೂ ಸಂತ್ರಸ್ತರ ಬಗ್ಗೆ ಕಾಳಜಿ ವಹಿಸುವುದು ಈಗ ಪ್ರಮುಖ ಆದ್ಯತೆಯಾಗಿದೆ, ಘಟನೆಯಲ್ಲಿ ಮಡಿದವರಿಗೆ ನನ್ನ ಸಂತಾಪಗಳು, ಗಾಯಾಳುಗಳ ಕ್ಷೇಮಕ್ಕೆ ಪ್ರಾರ್ಥಿಸುವೆ ಎಂದು ಅಧ್ಯಕ್ಷೀಯ ಅಭ್ಯರ್ಥಿ ಜಾರ್ಜ್ ಅಲ್ವಾರೆಜ್ ಮೈನೆಜ್ ಅವರು ಘಟನೆಯ ಬಳಿಕ ಟ್ವಿಟ್ ಮಾಡಿದ್ದಾರೆ. ಜೂನ್ ಎರಡರಂದು ಮೆಕ್ಸಿಕೋದಲ್ಲಿ ಅಧ್ಯಕ್ಷೀಯ, ರಾಜ್ಯ ಹಾಗೂ ಮುನ್ಸಿಪಲ್ ಚುನಾವಣೆಗಳು ನಡೆಯಲಿವೆ. ಇನ್ನು ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ಜಾರ್ಜ್ ಮೈನೆಜ್ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಆಡಳಿತದಲ್ಲಿರುವ ಮೊರೆನಾ ಪಕ್ಷದ ಕ್ಲೌಡಿಯಾ ಶೆನ್‌ಬಾಮ್ ಹಾಗೂ ವಿರೋಧ ಪಕ್ಷದ ಸಮ್ಮಿಶ್ರ ಅಭ್ಯರ್ಥಿ ಕ್ಸೋಚಿಟ್ಲ್ ಗಾಲ್ವೆಜ್ ಇವರನ್ನು ಹಿಂದಿಕ್ಕಿದ್ದಾರೆ.