ಭೋಪಾಲ್ : ಮಧ್ಯ ಪ್ರದೇಶದ ನಡೆಯುತ್ತಿದ್ದ ಬಿಜೆಪಿ ರೈತ ಸಮಾವೇಶದ ವೇಳೆ ವೇದಿಕೆ ಕುಸಿದು ಬಿದ್ದು ಮೂವರು ಬಿಜೆಪಿ ಶಾಸಕರು ಹಾಗೂ 10ಕ್ಕೂ ಎಚ್ಚು ಮಂದಿ ಗಾಯಗೊಂಡಿದ್ದಾರೆ. 

ರಾಜ್ ಮೊಹಲ್ಲಾ ಪ್ರದೇಶದಲ್ಲಿ ನಡೆಯುತ್ತಿದ್ದ ಕಿಸಾನ್ ಆಕ್ರೋಶ್ ಸಮಾವೇಶದಲ್ಲಿ ಇದ್ದಕ್ಕಿದ್ದಂತೆ ವೇದಿಕೆ ಕುಸಿದು ಬಿದ್ದಿದೆ. ಹೆಚ್ಚು ಸಂಖ್ಯೆಯಲ್ಲಿ ಜನರು ವೇದಿಕೆ ಏರಿದ್ದರಿಂದ ಈ ಘಟನೆ ಸಂಭವಿಸಿದೆ. 

60 ಕ್ಕೂ ಹೆಚ್ಚು ಜನ ಏಕಾಏಕಿ ವೇದಿಕೆ ಏರಿದ್ದು, ಈ ವೇಳೆ ವೇದಿಕೆ ಕುಸಿದುಬಿದ್ದು ಬಿಜೆಪಿ ನಾಯಕರು ಗಾಯಗೊಂಡಿದ್ದಾರೆ. ಬಿಜೆಪಿ ಶಾಸಕರಾದ ಮಹೇಂದ್ರ ಹರ್ದಿಯಾ, ಉಷಾ ಠಾಕೂರ್, ಮಾಲಿನಿ ಗೌಡ ಗಾಯಗೊಂಡಿದ್ದು ತಕ್ಷಣವೇ ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಮಹಾಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾರಿಗೂ ಕೂಡ ಗಂಭೀರ ಗಾಯಗಳಾಗಿಲ್ಲ ಎಂದು ಇಲ್ಲಿ ಬಿಜೆಪಿ ನಾಯಕ ದೇವಕಿನಂದನ್ ತಿವಾರಿ ಹೇಳಿದರು.