ತಾಯ್ನಾಡಿಗೆ ಸಂಕಷ್ಟ ಕಾಲ: ತವರಿಗೆ ಮರಳಿದ ಸಾವಿರಾರು ಇಸ್ರೇಲಿಗರು

ಒಂದು ದೇಶದಲ್ಲಿ ಯುದ್ಧ ಆರಂಭವಾದರೆ ಆ ಪ್ರದೇಶದ ಜನ ಸುರಕ್ಷಿತ ಪ್ರದೇಶಗಳತ್ತ ಓಡಲು ನೋಡುತ್ತಾರೆ.  ಆದರೆ ಇಸ್ರೇಲಿಗರು ಇದಕ್ಕೆ ತದ್ವಿರುದ್ಧ, ತಮ್ಮ ತಾಯ್ನಾಡು ಸಂಕಷ್ಟದಲ್ಲಿದೆ. ಯುದ್ಧ ಪೀಡಿತವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ವಿದೇಶಗಳಲ್ಲಿ ನೆಲೆಯಾಗಿದ್ದ ಅನೇಕರು ತಾಯ್ನಾಡಿಗೆ ಮರಳಿದ್ದಾರೆ.

Thousands of Israelis returned home to be with the homeland during the war akb

ಟೆಲ್‌ ಅವಿವಾ: ಇಸ್ರೇಲಿಗರ ದೇಶ ಪ್ರೇಮ ಹಾಗೂ ಸ್ವಾಭಿಮಾನವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಹಠ ಹೋರಾಟ ಶ್ರಮದಿಂದಲೇ ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ನಿರ್ಭಿತವಾಗಿ ಬದುಕುತ್ತಿರುವ ಇಸ್ರೇಲ್‌ನ ಈ ಸಧೃಡತೆಯ ಹಿಂದೆ ಇರುವುದು ಇಸ್ರೇಲಿಗರ ಅಪಾರ ದೇಶಭಕ್ತಿ. ಒಂದು ದೇಶದಲ್ಲಿ ಯುದ್ಧ ಆರಂಭವಾದರೆ ಆ ಪ್ರದೇಶದ ಜನ ಸುರಕ್ಷಿತ ಪ್ರದೇಶಗಳತ್ತ ಓಡಲು ನೋಡುತ್ತಾರೆ. ಇದಕ್ಕೆ ಮಧ್ಯಪ್ರಾಚ್ಯಗಳ ದೇಶಗಳೇ ಸಾಕ್ಷಿ. ಸದಾ ಯುದ್ಧ ಹಾಗೂ ರಾಜಕೀಯ ಆಸ್ಥಿರತೆಯ ಕಾರಣದಿಂದ ಸಿರಿಯಾದಂತಹ ದೇಶಗಳ ಬಹುತೇಕ ಜನರು ಯುದ್ಧಕಾಲದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಆಶ್ರಯ ಅರಸಿ ಹೊರಟು ಹೋಗಿರುವುದು ಇದಕ್ಕೆ ಉದಾಹರಣೆ. 

ಅಲ್ಲದೇ ಅಫ್ಘಾನಿಸ್ತಾನದಲ್ಲೂ ಅಫ್ಘಾನ್ ತಾಲಿಬಾನ್ ಸುಪರ್ದಿಗೆ ಸೇರುತ್ತಿದ್ದಂತೆ ಸಾವಿರಾರು ಜನ ಅಮೆರಿಕಾದಂತಹ ದೇಶಗಳಿಗೆ ವಲಸೆ ಹೋಗಿದ್ದರು. ಆದರೆ ಇಸ್ರೇಲಿಗರು ಇದಕ್ಕೆ ತದ್ವಿರುದ್ಧ, ತಮ್ಮ ತಾಯ್ನಾಡು ಸಂಕಷ್ಟದಲ್ಲಿದೆ. ಯುದ್ಧ ಪೀಡಿತವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ವಿದೇಶಗಳಲ್ಲಿ ನೆಲೆಯಾಗಿದ್ದ ಅನೇಕರು ತಾಯ್ನಾಡಿಗೆ ಮರಳಿದ್ದಾರೆ. ವಿದೇಶದಲ್ಲಿರುವ ಇಸ್ರೇಲಿಗರೆಲ್ಲರಿಗೂ ತಮ್ಮಿಷ್ಟದಂತೆ ಆರಾಮವಾಗಿ ಕಾಲ ಕಳೆಯಬಹುದು. ಆದರೆ ತಮ್ಮದೆನ್ನುವ ನೆಲೆಯೊಂದು ಇಲ್ಲದೇ ಹೋದರೆ ಏನಾಗುತ್ತದೆ ಎಂಬುದು ಇಸ್ರೇಲಿಗರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಹಲವು ದಶಕಗಳ ಕಾಲ ನೆಲೆ ಇಲ್ಲದೇ ಪ್ರಪಂಚದೆಲ್ಲೆಡೆ ತಿರಸ್ಕರಿಸಲ್ಪಟ್ಟು ಅಲೆದಾಡಿದ ನಂತರ ಶ್ರಮದಿಂದ  ಕಟ್ಟಿದ ತಾಯ್ನಾಡನ್ನು ಅಷ್ಟು ಸುಲಭವಾಗಿ ಬಿಡಲು ಸಾಧ್ಯವೇ.?   ಇಸ್ರೇಲಿಗರ ಈ ಉನ್ನತವಾದ ಈ ದೇಶಭಕ್ತಿಯೇ ಅವರನ್ನು ಈ ಸಂಕಷ್ಟದ ಸಮಯದಲ್ಲೂ ಧೈರ್ಯದಿಂದ ಹೋರಾಡುವುದಕ್ಕೆ ಶಕ್ತಿ ನೀಡುತ್ತಿದೆ ಎಂದರೆ ತಪ್ಪಾಗಲಾರದೇನೋ...

ಹಮಾಸ್‌ ಉಗ್ರರ ಬೆಂಬಲಿಸಿ ಬೀದಿಗಿಳಿದಿದ್ದವರಿಗೆ ಲಾಠಿರುಚಿ ತೋರಿಸಿದ ಫ್ರಾನ್ಸ್ ಪೊಲೀಸರು: ವೀಡಿಯೋ

ಜಗತ್ತಿನ ವಿವಿಧ ಮೂಲೆಗಳಲ್ಲಿ ಕೆಲಸ ಅರಸಿ ಹೋಗಿರುವ ಇಸ್ರೇಲಿಗರು , ಇಸ್ರೇಲ್‌ ಮೇಲೆ ಹಮಾಸ್‌ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ತಾಯ್ನಾಡಿಗೆ ಮರಳಿದ್ದಾರೆ. ವಿದೇಶದಲ್ಲಿರುವ ಇಸ್ರೇಲಿಗರನ್ನು ಹೊತ್ತ ವಿಮಾನವೊಂದು ಇಸ್ರೇಲ್‌ನ ಟೆಲ್ ಅವಿವಾದ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನದಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಖುಷಿಪಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ಈ ವೀಡಿಯೋ ನೋಡಿದ ಅನೇಕರು ಇಸ್ರೇಲಿಗರ ದೇಶಭಕ್ತಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಇಥಿಯೋಪಿಯಾದ  ಅಡಿಸ್ ಅಬಬಾ (Adis Ababa) ವಿಮಾನ ನಿಲ್ದಾಣದಿಂದ ಇಸ್ರೇಲಿಗರನ್ನು ಕರೆದುಕೊಂಡು ಬಂದ ವಿಮಾನ ಇಸ್ರೇಲ್‌ನ ಟೆಲ್ ವಿವಾದಲ್ಲಿ ಬಂದಿಳಿದಿತ್ತು.  ಇಸ್ರೇಲ್ ಪ್ಯಾಲೇಸ್ತೀನ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಎಲ್ಲರೂ ತಾಯ್ನಾಡಿಗೆ ಮರಳಿದ್ದಾರೆ ಎಂದು ಎಎನ್‌ಐ ಮಾಹಿತಿ ನೀಡಿದೆ. 

ಅಂತ್ಯ ಹಾಡುತ್ತೇವೆ... ಗಾಜಾದಲ್ಲಿ ಇನ್ನೆಂದು ಹೀಗಾಗಲು ಬಿಡಲ್ಲ: ಇಸ್ರೇಲ್ ರಕ್ಷಣಾ ಸಚಿವ

ಶನಿವಾರ ಆಕ್ಟೋಬರ್‌ 7 ರಂದು ಇಸ್ರೇಲ್‌ ಕಾಲಮಾನ ಬೆಳಗ್ಗೆ 6 ಗಂಟೆ ಸುಮಾರಿಗೆ ಹಮಾಸ್‌ ಉಗ್ರರು ಏಕಾಏಕಿ ಇಸ್ರೇಲ್ ಪಟ್ಟಣಗಳ ಮೇಲೆ ರಾಕೆಟ್‌ ದಾಳಿ ನಡೆಸಿ ಬಳಿಕ ಭೂಮಿ, ಆಗಸ, ಸಮುದ್ರ ಮಾರ್ಗಗಳ ಮೂಲಕವೂ ಇಸ್ರೇಲ್‌ನೊಳಗೆ ಪ್ರವೇಶಿಸಿ ಜನರನ್ನು ಒತ್ತೆಯಾಳುಗಳಾಗಿರಿಸಿಕೊಂಡು ಮತ್ತೆ ಅನೇಕರುನ್ನು ಹತ್ಯೆ ಮಾಡಿದ್ದರು. ಇದಾದ ನಂತರ ಇಸ್ರೇಲ್‌ ಗಾಜಾಪಟ್ಟಿಯಲ್ಲಿ ಮರುದಾಳಿ ನಡೆಸಿದ್ದು, ಸಾವಿನ ಸಂಖ್ಯೆ ನಾಲ್ಕಂಕಿ ದಾಟಿದೆ. ತನ್ನ ಕೆಣಕಿದ ಹಮಾಸ್ ಉಗ್ರರನ್ನು ನೆಲಸಮ ಮಾಡುವ ಪಣ ತೊಟ್ಟಿರುವ ಇಸ್ರೇಲ್‌ ಗಾಜಾಪಟ್ಟಿಯಲ್ಲಿ ದಾಳಿ ಮುಂದುವರೆಸಿದೆ. ಈ ಯುದ್ಧ ನಾವು ಶುರು ಮಾಡಿಲ್ಲ ಆದರೆ ಇದನ್ನು ಮುಗಿಸುವುದು ಮಾತ್ರ ನಾವೇ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 

ಇಸ್ರೇಲ್‌ ಸೇನೆಯಿಂದ ಗಾಜಾ಼ದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಳಕೆ?

Latest Videos
Follow Us:
Download App:
  • android
  • ios