ಹಮಾಸ್ ಉಗ್ರರ ಬೆಂಬಲಿಸಿ ಬೀದಿಗಿಳಿದಿದ್ದವರಿಗೆ ಲಾಠಿರುಚಿ ತೋರಿಸಿದ ಫ್ರಾನ್ಸ್ ಪೊಲೀಸರು: ವೀಡಿಯೋ
ಫ್ರಾನ್ಸ್‌ನಲ್ಲಿ(France) ಹಮಾಸ್ ಉಗ್ರರನ್ನು ಬೆಂಬಲಿಸಿ ಬೀದಿಗಳಿದ ಹಮಾಸ್ ಬೆಂಬಲಿಗರಿಗೆ ಅಲ್ಲಿನ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಪ್ಯಾರಿಸ್: ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಹೋರಾಟ ನಿರ್ಣಾಯಕ ಹಂತ ತಲುಪಿದೆ. ತನ್ನ ಕೆಣಕಿದ ಹಮಾಸ್ ಉಗ್ರರಿಗೆ ಅಂತ್ಯ ಹಾಡಲು ಇಸ್ರೇಲ್ ಸೇನಾಪಡೆ ತನ್ನಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತ ಇಸ್ರೇಲ್ ಪ್ರತ್ಯುತ್ತರಕ್ಕೆ ಗಾಜಾ ಪಟ್ಟಿಯಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಜಗತ್ತಿನ ಹಲವು ದೇಶಗಳು ಇಸ್ರೇಲ್ ಬೆಂಬಲಿಸಿ ಮತ್ತೆ ಕೆಲವು ಹಮಾಸ್ ಉಗ್ರರು ಹಾಗೂ ಪ್ಯಾಲೇಸ್ತೀನಿಯರನ್ನು ಬೆಂಬಲಿಸುತ್ತಿದ್ದಾರೆ. ಈ ಮಧ್ಯೆ ಫ್ರಾನ್ಸ್‌ನಲ್ಲಿ(France) ಹಮಾಸ್ ಉಗ್ರರನ್ನು ಬೆಂಬಲಿಸಿ ಬೀದಿಗಳಿದ ಹಮಾಸ್ ಬೆಂಬಲಿಗರಿಗೆ ಅಲ್ಲಿನ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹಮಾಸ್ ಬೆಂಬಲಿಸಿ ಕೆಲವರು ಜಾಥಾ ನಡೆಸಿದ್ದಾರೆ, ಮೊನ್ನೆಯಷ್ಟೇ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ ಹಮಾಸ್ ಬೆಂಬಲಿಸಿ ಅನೇಕರು ಬೀದಿಗಳಿದು ಪ್ರತಿಭಟನೆ ನಡೆಸಿದ ವೀಡಿಯೋ ವೈರಲ್ ಆಗಿತ್ತು. ಆದರೆ ಅಮೆರಿಕಾ ಈ ಯುದ್ಧದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ. ಹಾಗೆಯೇ , ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್‌ನಲ್ಲೂ ಹಮಾಸ್ ಬೆಂಬಲಿಸಿ ಅನೇಕರು ಬೀದಿಗಿಳಿದಿದ್ದರು. ಆದರೆ ಭಯೋತ್ಪಾದಕ ಸಂಘಟನೆಯೆಂದು ಗುರುತಿಸಲ್ಪಟ್ಟಿರುವ ಹಮಾಸ್ ಉಗ್ರ ಸಂಘಟನೆಯನ್ನು ಬೆಂಬಲಿಸುವುದು ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್‌ನಂತೆ ಫ್ರಾನ್ಸ್‌ನಲ್ಲೂ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಹಮಾಸ್ ಬೆಂಬಲಿಸಿ ಬೀದಿಗಿಳಿದ ಜನರಿಗೆ ಫ್ರಾನ್ಸ್ ಪೊಲೀಸರು ಸರಿಯಾಗಿ ಲಾಠಿ ರುಚಿ ತೋರಿಸಿದ್ದಾರೆ. ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂತ್ಯ ಹಾಡುತ್ತೇವೆ... ಗಾಜಾದಲ್ಲಿ ಇನ್ನೆಂದು ಹೀಗಾಗಲು ಬಿಡಲ್ಲ: ಇಸ್ರೇಲ್ ರಕ್ಷಣಾ ಸಚಿವ
ಇನ್ನು ತನ್ನ ಅಸ್ತಿತ್ವಕ್ಕೆ ತನ್ನ ಉಳಿವಿಗೆ ಹೋರಾಡುತ್ತಿರುವ ಯಹೂದಿ ರಾಷ್ಟ್ರ(Jewish country) ಇಸ್ರೇಲ್ ಬೆಂಬಲಿಸಿ ಕೂಡ ಜಗತ್ತಿನ ವಿವಿಧ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ವಿವಿಧೆಡೆ ಇಸ್ರೇಲ್ ಧ್ವಜ ಹಿಡಿದು ಅನೇಕರು ಇಸ್ರೇಲ್ ಪರ ಬೆಂಬಲ ವ್ಯಕ್ತಪಡಿಸಿ ಜಾಥಾ ಕೂಡ ನಡೆಸಿದ್ದಾರೆ. ಅಮೆರಿಕಾ, ಬ್ರಿಟನ್, ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ (Western Country) ಜೊತೆಗೆ ಈ ಬಾರಿ ಭಾರತವೂ ಇಸ್ರೇಲ್ ಅನ್ನು ಬೆಂಬಲಿಸುತ್ತಿದ್ದರೆ, ಇತ್ತ ಚೀನಾ, ಪಾಕಿಸ್ತಾನ, ಇರಾನ್, ಟರ್ಕಿ (Turkey), ಈಜಿಪ್ಟ್ ಮುಂತಾದ ರಾಷ್ಟ್ರಗಳು ಹಮಾಸ್ ಉಗ್ರರನ್ನು ಬೆಂಬಲಿಸುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರ ಜೊತೆ ಮಾತನಾಡಿ ಭಾರತ ಇಸ್ರೇಲ್ ಜೊತೆ ಇರುವುದಾಗಿ ಹೇಳಿದ್ದರು.
ಇನ್ನು ಪ್ರತಿಭಟನಾಕಾರರನ್ನು ಲಾಠಿ ರುಚಿ ತೋರಿಸಿ ಮನೆಗೆ ಅಟ್ಟಿದ ಫ್ರಾನ್ಸ್ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಫ್ರಾನ್ಸ್ ವರ್ಷಗಳ ಹಿಂದಷ್ಟೇ ಮುಸ್ಲಿಂ ಆತಂಕವಾದಿಗಳ ಭಾರಿ ದಂಗೆಯಿಂದ ನಲುಗಿ ಹೋಗಿತ್ತು. ಹೀಗಾಗಿ ಫ್ರಾನ್ಸ್ ಪೊಲೀಸರಿಗೆ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಅನುಭವ ಚೆನ್ನಾಗಿ ಇದೆ ಎಂದು ವೀಡಿಯೋ ನೋಡಿದ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ: ಭಾರತದ ಪ್ಯಾಲೆಸ್ತೀನ್ ಪರ ನಿಲುವು ಬದಲಾಯ್ತಾ?