ಇಸ್ರೇಲ್ ಹಮಾಸ್ ಮಧ್ಯೆ ಇದೇ ಇದುವರೆಗಿನ ಭೀಕರ ಯುದ್ಧ: 7400ಕ್ಕೂ ಹೆಚ್ಚು ಬಲಿ
ಇಸ್ರೇಲ್ - ಹಮಾಸ್ ನಡುವಿನ ಯುದ್ಧದಲ್ಲಿ ಈವರೆಗೂ 7400ಕ್ಕೂ ಹೆಚ್ಚಿನ ಜನರು ಸಾವಿಗೀಡಾಗಿದ್ದು, ಉಭಯ ದೇಶಗಳ ನಡುವಿನ ಅತ್ಯಂತ ಭೀಕರ ಯುದ್ಧ ಎಂಬ ಕುಖ್ಯಾತಿಗೆ ಈಡಾಗಿದೆ. ಈವರೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 2800 ಪ್ಯಾಲೆಸ್ತೀನಿಯರು ಹತರಾಗಿದ್ದಾರೆ ಎಂದು ಗಾಜಾ ಹೇಳಿದೆ.

ಜೆರುಸಲೇಂ: ಇಸ್ರೇಲ್ - ಹಮಾಸ್ ನಡುವಿನ ಯುದ್ಧದಲ್ಲಿ ಈವರೆಗೂ 7400ಕ್ಕೂ ಹೆಚ್ಚಿನ ಜನರು ಸಾವಿಗೀಡಾಗಿದ್ದು, ಉಭಯ ದೇಶಗಳ ನಡುವಿನ ಅತ್ಯಂತ ಭೀಕರ ಯುದ್ಧ ಎಂಬ ಕುಖ್ಯಾತಿಗೆ ಈಡಾಗಿದೆ. ಈವರೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 2800 ಪ್ಯಾಲೆಸ್ತೀನಿಯರು ಹತರಾಗಿದ್ದಾರೆ ಎಂದು ಗಾಜಾ ಹೇಳಿದೆ.
ಜೊತೆಗೆ ಉರುಳಿಬಿದ್ದ ಕಟ್ಟಡಗಳ ಅವಶೇಷಗಳಡಿ 1200ಕ್ಕೂ ಹೆಚ್ಚಿನ ಜನರು ಸಿಲುಕಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಜೊತೆಗೆ 1200 ಹಮಾಸ್ ಉಗ್ರರನ್ನು ನಾವು ಕೊಂದಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಜೊತೆಗೆ ಮಂಗಳವಾರ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದನ್ನು ಸೇರಿಸಿದರೆ 6000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನು(Palestin) ಸಾವನ್ನಪ್ಪಿದಂತಾಗಲಿದೆ. ಮತ್ತೊಂದೆಡೆ ಅ.7ರಂದು ಹಮಾಸ್ ನಡೆಸಿದ ಉಗ್ರ ದಾಳಿಯಲ್ಲಿ 1400ಕ್ಕೂ ಹೆಚ್ಚು ಇಸ್ರೇಲಿಗಳು ಹತರಾಗಿದ್ದಾರೆ.
ಹಮಾಸ್ ದುಷ್ಕೃತ್ಯ ಐಸಿಸ್‌ಗಿಂತ ಕ್ರೂರ: ಇಸ್ರೇಲ್‌ಗೆ ಅಮೆರಿಕ ಸಂಪೂರ್ಣ ಬೆಂಬಲ: ಬೈಡೆನ್
ಲಂಡನ್ ಇಸ್ರೇಲ್ ದಾಳಿಗೆ ತುತ್ತಾಗಿರುವ ಗಾಜಾ ಜನರಿಗೆ ಸ್ಕಾಟ್ಲೆಂಡ್ ಸ್ವಾಗತ ಕೋರಿದೆ. ಈ ಕುರಿತು ಮಾತನಾಡಿದ ಇಲ್ಲಿನ ಸಚಿವ ಹುಮ್ಸಾ ಯೂಸುಫ್, ‘ಗಾಜಾದಲ್ಲಿ ದಾಳಿಗೆ ತುತ್ತಾಗಿರುವ ಜನರಿಗೆ ಸ್ಕಾಟ್ಲೆಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಪ್ಯಾಲೆಸ್ತೀನಿಯರು ಸ್ಕಾಟ್ಲೆಂಡ್‌ಗೆ ಬನ್ನಿ’ ಎಂದರು. ಜೊತೆಗೆ ಬ್ರಿಟನ್ ಸರ್ಕಾರಕ್ಕೂ ನಿರಾಶ್ರಿತರನ್ನು ಸ್ವಾಗತಿಸಲು ಸರಿಯಾದ ಕಾನೂನನ್ನು ರಚಿಸಲು ಕೋರಿದರು.
ಗಾಜಾದ ಆಸ್ಪತ್ರೆ ಮೇಲೆ ದಾಳಿ: ಇಸ್ರೇಲ್ ಆರೋಪಿಸುತ್ತಿರುವ ಈ ಇಸ್ಲಾಮಿಕ್ ಜಿಹಾದ್ ಸಂಘಟನೆ ಯಾವುದು?
ಇಸ್ರೇಲ್ ಮೇಲೆ ನಿರ್ಬಂಧಕ್ಕೆ ಒಐಸಿಗೆ ಇರಾನ್ ಆಗ್ರಹ
ಟೆಹ್ರಾನ್: ಪ್ಯಾಲೆಸ್ತೀನ್ ಮೇಲಿನ ದಾಳಿ ಮತ್ತು ಗಾಜಾದಲ್ಲಿನ 500 ಜನರ ಸಾವಿಗೆ ಕಾರಣವಾದ ಘಟನೆ ಸಂಬಂಧ ಇಸ್ರೇಲ್‌ಗೆ ಎಲ್ಲಾ ಇಸ್ಲಾಮಿಕ್ ದೇಶಗಳು ತೈಲ ಪೂರೈಕೆ ಸ್ಥಗಿತ ಮಾಡಬೇಕು. ಜೊತೆಗೆ ತಮ್ಮ ದೇಶಗಳಿಂದ ಇಸ್ರೇಲ್‌ನ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಬೇಕು ಮತ್ತು ಸಾಧ್ಯವಿರುವ ಎಲ್ಲಾ ನಿರ್ಬಂಧಗಳನ್ನು ಹೇರಬೇಕು ಎಂದು ಇರಾನ್‌ನ ವಿದೇಶಾಂಗ ಸಚಿವ ಹೊಸ್ಸೇನ್ ಅಮಿರಬ್ದೊಲ್ಲಾಹಿಯನ್ ಆಗ್ರಹಿಸಿದ್ದಾರೆ.
ಗಾಜಾದಲ್ಲಿ ಅನಸ್ತೇಶಿಯಾ ಇಲ್ಲದೇ ಶಸ್ತ್ರಚಿಕಿತ್ಸೆ: ಗಾಯಾಳುಗಳ ಉಳಿಸಲು ವೈದ್ಯರ ಹರಸಾಹಸ