ಗಾಜಾದಲ್ಲಿ ಅನಸ್ತೇಶಿಯಾ ಇಲ್ಲದೇ ಶಸ್ತ್ರಚಿಕಿತ್ಸೆ: ಗಾಯಾಳುಗಳ ಉಳಿಸಲು ವೈದ್ಯರ ಹರಸಾಹಸ
ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ಗಾಯಗೊಂಡವರನ್ನು ರಕ್ಷಿಸಲು ವೈದರು ಹರಸಾಹಸ ಪಟ್ಟಿದ್ದಾರೆ. ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡ ಹಿನ್ನೆಲೆಯಲ್ಲಿ ಅಸಸ್ತೇಶಿಯಾ ಇಲ್ಲದೇ ಆಸ್ಪತ್ರೆಯ ನೆಲದ ಮೇಲೆಯೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಖಾನ್ ಯೂನಿಸ್: ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ಗಾಯಗೊಂಡವರನ್ನು ರಕ್ಷಿಸಲು ವೈದರು ಹರಸಾಹಸ ಪಟ್ಟಿದ್ದಾರೆ. ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡ ಹಿನ್ನೆಲೆಯಲ್ಲಿ ಅಸಸ್ತೇಶಿಯಾ ಇಲ್ಲದೇ ಆಸ್ಪತ್ರೆಯ ನೆಲದ ಮೇಲೆಯೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಅಲ್ ಅಹ್ಲಿ ಆಸ್ಪತ್ರೆಯ ಬಳಿ ಸಂಭವಿಸಿದ ಸ್ಫೋಟದಲ್ಲಿ 800ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದರು. ಈಗಾಗಲೇ ಗಾಜಾಕ್ಕೆ (Gaza Strip) ತಲುಪುತ್ತಿರುವ ಎಲ್ಲಾ ಸೌಲಭ್ಯಗಳು ನಿಂತುಹೋಗುತ್ತಿರುವುದರಿಂದ ಔಷಧ ಕೊರತೆ ಉಂಟಾಗಿದೆ. ಅಲ್ಲದೇ ಅತಿ ಹೆಚ್ಚು ಮಂದಿ ನಿರಾಶ್ರಿತರು ಆಸ್ಪತ್ರೆಯಲ್ಲೇ ಉಳಿದುಕೊಂಡಿರುವುದರಿಂದ ಗಾಯಾಳುಗಳ ಶುಶ್ರೂಷೆ ನಡೆಸಲು ಬೇಕಾದ ಸ್ಥಳಾವಕಾಶದ ಕೊರತೆ ಉಂಟಾಗಿದೆ.
ಗಾಯಗೊಂಡವರು ತೆವಳುತ್ತಲೇ ನಮ್ಮತ್ತ ಧಾವಿಸುತ್ತಿದ್ದರು. ಅದರಲ್ಲಿ ಒಬ್ಬನ ತೊಡೆಗಳು ಬೆಂಕಿಯಿಂದ ಸುಟ್ಟು ಹೋಗಿತ್ತು. ಬಹಳಷ್ಟು ಜನರ ಕೈ ಹಾಗೂ ಕಾಲುಗಳು ಸುಟ್ಟು ಹೋಗಿದ್ದವು. ಆಸ್ಪತ್ರೆಯ ನೆಲದ ಮೇಲೆ ನಾವು ಅವರಿಗೆ ಚಿಕಿತ್ಸೆ ಮಾಡಿದೆವು ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಗಾಜಾದ ಆಸ್ಪತ್ರೆ ಮೇಲೆ ದಾಳಿ: ಇಸ್ರೇಲ್ ಆರೋಪಿಸುತ್ತಿರುವ ಈ ಇಸ್ಲಾಮಿಕ್ ಜಿಹಾದ್ ಸಂಘಟನೆ ಯಾವುದು?
ಇಸ್ರೇಲಿಂದ ಮತ್ತೆ ವಾಯುದಾಳಿ: ಗಾಜಾ ಸಚಿವಾಲಯ ಆರೋಪ
ಗಾಜಾ ಸಿಟಿ: ಬುಧವಾರ ಆಸ್ಪತ್ರೆ ಮೇಲೆ ನಡೆದ ಭೀಕರ ದಾಳಿ ಬಳಿಕವೂ ಇಸ್ರೇಲ್ ತನ್ನ ದಾಳಿಯನ್ನು ಮತ್ತೆ ಮುಂದುವರೆಸಿದೆ ಎಂದು ಗಾಜಾದ ಆಂತರಿಕ ಸಚಿವಾಲಯ ಹೇಳಿದೆ. ಬುಧವಾರ ಸೂರ್ಯೋದಯಕ್ಕೂ ಮುನ್ನವೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ ಆರಂಭಿಸಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವುದಕ್ಕೂ ಕಷ್ಟವಾಗುತ್ತಿದೆ. ಅಲ್ ಖಾಸಾಸಿಬ್ ಹಾಗೂ ಹಾಲಿಮಾ ಅಲ್ ಸಾದಿಯಾ ಪ್ರಾಂತ್ಯದಲ್ಲಿ ನಡೆದ ದಾಳಿಯಿಂದಾಗಿ 37 ಜನರು ಅಸುನೀಗಿದ್ದಾರೆ ಎಂದು ಅದು ಹೇಳಿದೆ.
ಹಮಾಸ್ ಉಗ್ರರಿಂದ ಇಸ್ರೇಲಿಗರ ರಕ್ಷಿಸಿದ ಕೇರಳದ ಕೇರ್ ಟೇಕರ್ಸ್: ಧನ್ಯವಾದ ಹೇಳಿದ ಇಸ್ರೇಲ್ ರಾಯಭಾರಿ