Asianet Suvarna News Asianet Suvarna News

ಪ್ರಾಮಾಣಿಕನಾ... ಲ್ಯಾಪ್‌ಟಾಪ್ ಎಗರಿಸಿ ಮಾಲೀಕನಿಗೆ ಕ್ಷಮಿಸಿ ಎಂದು ಮೇಲ್ ಮಾಡಿದ ಕಳ್ಳ

ಕಳ್ಳನೋರ್ವ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಬಳಿಕ ಆತನ ಲ್ಯಾಪ್‌ಟಾಪ್‌ನಿಂದಲೇ ಅದರ ಮಾಲೀಕನಿಗೆ ತಾನು ನಿಮ್ಮ ಲ್ಯಾಪ್‌ಟಾಪ್ ಕದ್ದಿರುವೆ ಸಾರಿ ಎಂದು ಮೇಲ್ ಮಾಡಿದ ವಿಚಿತ್ರ ಘಟನೆ ನಡೆದಿದೆ. ಈ ವಿಚಾರವನ್ನು ಲ್ಯಾಪ್‌ಟಾಪ್ ಮಾಲೀಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.

Thief stolen a laptop and sent mail to its owner and said sorry, post goes viral in twitter akb
Author
First Published Oct 31, 2022, 5:21 PM IST

ಮುಂಬೈ: ಕಳ್ಳನೋರ್ವ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಬಳಿಕ ಆತನ ಲ್ಯಾಪ್‌ಟಾಪ್‌ನಿಂದಲೇ ಅದರ ಮಾಲೀಕನಿಗೆ ತಾನು ನಿಮ್ಮ ಲ್ಯಾಪ್‌ಟಾಪ್ ಕದ್ದಿರುವೆ ಸಾರಿ ಎಂದು ಮೇಲ್ ಮಾಡಿದ ವಿಚಿತ್ರ ಘಟನೆ ನಡೆದಿದೆ. ಈ ವಿಚಾರವನ್ನು ಲ್ಯಾಪ್‌ಟಾಪ್ ಮಾಲೀಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.

ಇಲ್ಲೊಬ್ಬ ಕಳ್ಳ ಲ್ಯಾಪ್‌ಟಾಪನ್ನೇ ಎಗರಿಸಿ ಅದರ ಮಾಲೀಕನಿಗೆ ಸಂದೇಶ ಕಳುಹಿಸಿದ್ದಾನೆ. ಟ್ಬಿಟ್ಟರ್ ಬಳಕೆದಾರ Zweli_Thixo ಎಂಬುವವರು ಈ ವಿಚಾರವನ್ನು ಹಂಚಿಕೊಂಡಿದ್ದು, ಕಳ್ಳ ಕಳುಹಿಸಿದ ಸಂದೇಶಗಳ ಸ್ಕ್ರೀನ್ ಶಾಟ್‌ನ್ನು  ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. Zweli_Thixo ಅವರ ಲ್ಯಾಪ್‌ಟಾಪ್ ಕದ್ದ ಕಳ್ಳ ಅವರಿಗೆ ಸಂದೇಶ ಕಳುಹಿಸಿದ್ದು, ಲ್ಯಾಪ್‌ಟಾಪ್ ಕದ್ದಿರುವುದಕ್ಕೆ ಕ್ಷಮೆ ಕೇಳುವ ಜೊತೆಗೆ ತಾನು ಏಕೆ ಲ್ಯಾಪ್‌ಟಾಪ್ ಕದ್ದೆ ಎಂಬ ವಿಚಾರವನ್ನು ಕೂಡ ಆತ ಸಂದೇಶದಲ್ಲಿ ತಿಳಿಸಿದ್ದಾನೆ. ಇದೆಲ್ಲದರ ನಡುವೆ ಈ ಕಳ್ಳನಿಗೆ ಲ್ಯಾಪ್‌ಟಾಪ್‌ನಲ್ಲಿ ಮಾಲೀಕನ ಬಹುಮುಖ್ಯವಾದ ಫೈಲ್ ಒಂದು ಇರುವುದು ತಿಳಿದು ಬಂದಿದ್ದು, ಅದನ್ನು ಬೇಕಾದಲ್ಲಿ ಮಾಲೀಕನಿಗೆ ಹಿಂದಿರುಗಿಸುವುದಾಗಿ ಆತ ಹೇಳಿದ್ದಾನೆ. 

 

'ಅವರು ನನ್ನ ಲ್ಯಾಪ್‌ಟಾಪ್‌ನ್ನು(laptop)  ನಿನ್ನೆ ರಾತ್ರಿ ಕದ್ದರು ಹಾಗೂ ನನಗೆ ನನ್ನದೇ ಇ-ಮೇಲ್‌ನಿಂದ (e-mail) ಸಂದೇಶ ಕಳುಹಿಸಿದ್ದಾರೆ. ಈ ಬಗ್ಗೆ ನಾನು ಮಿಶ್ರ ಭಾವನೆಗಳನ್ನು ಹೊಂದಿದ್ದೇನೆ' ಎಂದು ಲ್ಯಾಪ್‌ಟಾಪ್ ಮಾಲೀಕ Zweli_Thixo ಬರೆದುಕೊಂಡಿದ್ದಾರೆ. 

ಕಳ್ಳ ಮಾಲೀಕನಿಗೆ ಕಳುಹಿಸಿದ ಸಂದೇಶ ಹೀಗಿದೆ ನೋಡಿ, 'ಬ್ರೋ ಹೇಗಿದೆ ಇದು, ನನಗೆ ಗೊತ್ತು ನಾನು ನಿಮ್ಮ ಲ್ಯಾಪ್‌ಟಾಪ್‌ನ್ನು ನಿನ್ನೆ ಕಳವು ಮಾಡಿದೆ. ನನಗೆ ನನ್ನ ದಿನದ ಖರ್ಚು ವೆಚ್ಚ ಪೂರೈಸುವ ಸಲುವಾಗಿ ಸ್ವಲ್ಪ ಹಣ ಬೇಕಾಗಿತ್ತು. ಸಂಶೋಧನಾ ಪ್ರಸ್ತಾವನೆಗೆ (Research Proposal) ಸಂಬಂಧಿಸಿದಂತೆ ನೀವು ಬಹಳ ಬ್ಯುಸಿಯಾಗಿರುವುದನ್ನು ನಾನು ಗಮನಿಸಿದೆ. ಅದ್ನು ನಾನು ಇಲ್ಲಿ ಲಗತ್ತಿಸಿದ್ದೇನೆ. ಹಾಗೆಯೇ ಈ ಲ್ಯಾಪ್‌ಟಾಪ್‌ನಲ್ಲಿರುವ (Laptop) ಬೇರೆ ಯಾವುದಾದರೂ ಫೈಲ್ ನಿಮಗೆ ಬೇಕಾದಲ್ಲಿ ನನಗೆ ಸೋಮವಾರ 12 ಗಂಟೆಯೊಳಗಾಗಿ ಮೇಲ್ ಮಾಡಿ ನಂತರ ನಾನು ಇದಕ್ಕೆ ಗ್ರಾಹಕರನ್ನು ಹುಡುಕುತ್ತೇನೆ ಎಂದು ಕಳ್ಳ (Thief) ಮೇಲ್ ಮಾಡಿದ್ದಾನೆ. ಅಲ್ಲದೇ ಮೇಲ್‌ನಲ್ಲಿ ಸಬ್ಜೆಕ್ಟ್ ಬರೆಯುವ ಜಾಗದಲ್ಲಿ Sorry for the laptop' ಎಂದು ಬರೆದಿದ್ದಾನೆ. 

ಬೆಂಗಳೂರು: ಕದ್ದ ಹಣ ಭಿಕ್ಷುಕರಿಗೆ ದಾನ ಮಾಡ್ತಿದ್ದ ಖತರ್ನಾಕ್‌ ಕಳ್ಳ ಅರೆಸ್ಟ್‌

ಇವರ ಈ ಸ್ಕ್ರೀನ್‌ಶಾಟ್‌  (ScreenShot) ನೋಡಿದ ಅನೇಕರು ಹೀಗೆ ಕಳ್ಳತನಕ್ಕೆ ಗುರಿಯಾದ ತಮ್ಮ ಅನುಭವಗಳ ಬಗ್ಗೆ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಇಂತಹದ್ದೇ ಅನುಭವ ನನಗೂ ಆಗಿತ್ತು. ಕಳ್ಳನೊಬ್ಬ ನನ್ನ ಕಾರಿನ ಕಿಟಕಿ ಗಾಜು ಒಡೆದು ಅದರಲ್ಲಿದ್ದ ಲ್ಯಾಪ್‌ಟಾಪ್ ಬ್ಯಾಗ್ ಎಗರಿಸಿದ್ದ. ಅದರಲ್ಲಿ ನನ್ನ ಐಡಿ ಕಾರ್ಡ್(ID card), ಡ್ರೈವಿಂಗ್ ಲೈಸೆನ್ಸ್ (Driving licence), ಪರ್ಸ್ (Purse) ಮುಂತಾದವುಗಳಿದ್ದವು ಎಂದು ಒಬ್ಬರು ಹೇಳಿಕೊಂಡಿದ್ದಾರೆ. 

ಸಾಮಾನ್ಯವಾಗಿ ನಮ್ಮ ಪಾಲಿಗೆ ಅಮೂಲ್ಯವೆನಿಸಿದ ಯಾವುದೇ ವಸ್ತುಗಳು ಕಳೆದು ಹೋದರೂ ಬಹಳ ಬೇಜಾರಾಗುತ್ತದೆ. ಅದರಲ್ಲೂ ಮೊಬೈಲ್‌ಗಳು, ಲ್ಯಾಪ್‌ಟಾಪ್ ಮುಂತಾದ ಅಮೂಲ್ಯ ವಸ್ತುಗಳು ಕಳೆದು ಹೋದರೆ ಬಹುತೇಕ ಪ್ರಪಂಚವೇ ಕಳೆದು ಹೋದಂತಹ ಅನುಭವವಾಗುತ್ತದೆ. ಏಕೆಂದರೆ ಪ್ರತಿಯೊಂದು ಡಿಜಿಟಲ್‌ಮಯವಾಗಿರುವ ಇಂದಿನ ಯುಗದಲ್ಲಿ ಪ್ರತಿಯೊಂದನ್ನು ಡಿಜಿಟಲೈಸ್ ಆಗಿ ಇಲೆಕ್ಟ್ರಾನಿಕ್ ಲಾಕರ್‌ಗಳಲ್ಲಿ ಇಟ್ಟಿರುತ್ತಾರೆ. ಹೀಗಿರುವಾಗ ಅಂತಹದೊಂದು ಕಳೆದು ಹೋದರೆ ಅದನ್ನು ಮತ್ತೆ ಮರು ಸ್ಥಾಪಿಸುವುದಕ್ಕೆ ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ. ಆದರೆ ಇಲ್ಲಿ ಕಳ್ಳ ಅಮೂಲ್ಯ ವಸ್ತುಗಳನ್ನು ಹಿಂದಿರುಗಿಸಲು ಬಯಸಿದ್ದು ಮಾಲೀಕನ ಮನ ಗೆದ್ದಿದೆ. 

ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

Follow Us:
Download App:
  • android
  • ios