ಜಿನೆವಾ(ಜು.14 ): ಕೊರೋನಾ ವೈರಸ್ ವಿಚಾರ ಮುಚ್ಚಿಟ್ಟ, ಗಂಭೀರತೆ ಕುರಿತು ಎಚ್ಚರಿಕೆ ನೀಡಿದ, ಕೊರೋನಾ ಆರಂಭಿಕ ದಿನಗಳಲ್ಲಿ ಮಾರ್ಗಸೂಚಿ ಪ್ರಕಟಿಸದ ಗಂಭೀರ ಆರೋಪಗಳು ವಿಶ್ವ ಆರೋಗ್ಯ ಸಂಸ್ಥೆ(WHO) ಮೇಲಿದೆ. ಇತ್ತ ಆಯಾ ದೇಶಗಳು ಕೊರೋನಾ ಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವಾಗಲೇ WHO ತನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದೆ.

ವಿಶ್ವದ ಮೊದಲ ಕೊರೋನಾ ಚುಚ್ಚುಮದ್ದು ಸಿದ್ಧ, ರಷ್ಯಾದಿಂದ ಅಧಿಕೃತ!

ಕೊರೋನಾ ವೈರಸ್ ಪಿಡುಗು ನಿರ್ಮೂಲನೆ ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಬದುಕು ಸಹಸ ಸ್ಥಿತಿಗೆ ಮರಳುವ ಸಾಧ್ಯತೆ ಇಲ್ಲ ಎಂದು WHO ಹೇಳಿದೆ. ಕೊರೋನಾ ವೈರಸ್ ಸಾರ್ವಜನಿಕ ಶತ್ರುವಾಗಿ ಪರಿಣಮಿಸಿದೆ. ಹಲವು ದೇಶಗಳು ಕೊರೋನಾ ವಿರುದ್ಧ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಇನ್ನು ಕೆಲ ದೇಶಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದೆ. ಇದರಿಂದ ವಿಶ್ವಕ್ಕೆ ಅಪಾಯ ತಪ್ಪಿದ್ದಲ್ಲ ಎಂದು WHO ಹೇಳಿದೆ.

ಕೊರೋನಾಗೆ ಅಮೆರಿಕದಲ್ಲೂ ಆಯುರ್ವೇದ ಪ್ರಯೋಗ!...

ದಿನದಿಂದ ದಿನಕ್ಕೆ ಬದುಕು ದುಸ್ತರವಾಗುತ್ತಿದೆ. ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಬೇಕು. ಜನರಿಗೆ ಕೊರೋನಾ ಕುರಿತು ಅರಿವು ಮೂಡಿಸಬೇಕು. ಈಗಾಗಲೇ ತಿಳಿಸಿರುವಂತೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಶುಚಿತ್ವ ಸೇರಿದಂತೆ ಹಲವು ಕ್ರಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು ಎಂದು WHO ಹೇಳದೆ.