Asianet Suvarna News Asianet Suvarna News

ಕೊರೋನಾಗೆ ಅಮೆರಿಕದಲ್ಲೂ ಆಯುರ್ವೇದ ಪ್ರಯೋಗ!

ಕೊರೋನಾಕ್ಕೆ ಆಯುರ್ವೇದ ಮದ್ದು: ಅಮೆರಿಕ ಪ್ರಯೋಗ| ಭಾರತ ಜತೆ ಜಂಟಿ ಕ್ಲಿನಿಕಲ್‌ ಟ್ರಯಲ್‌ಗೆ ಒಲವು|  ಅಮೆರಿಕದ ಭಾರತೀಯ ರಾಯಭಾರಿ ಹೇಳಿಕೆ

India And US to initiate clinical trials for Ayurvedic formulations
Author
Bangalore, First Published Jul 10, 2020, 8:37 AM IST

ವಾಷಿಂಗ್ಟನ್‌(ಜು.10): ಭಾರತದ ಅತ್ಯಂತ ಪುರಾತನ ಔಷಧೀಯ ಪದ್ಧತಿಯಾಗಿರುವ ಆಯುರ್ವೇದವನ್ನು ಕೊರೋನಾ ವೈರಸ್‌ ಚಿಕಿತ್ಸೆಗೆ ಬಳಸಿಕೊಳ್ಳುವ ಗಂಭೀರ ಪ್ರಯತ್ನವನ್ನು ಜಂಟಿಯಾಗಿ ನಡೆಸಲು ಅಮೆರಿಕ ಹಾಗೂ ಭಾರತ ಮುಂದಾಗಿವೆ. ಕೊರೋನಾ ರೋಗಿಗಳಿಗೆ ಆಯುರ್ವೇದ ಔಷಧಗಳನ್ನು ನೀಡಿ, ಕ್ಲಿನಿಕಲ್‌ ಟ್ರಯಲ್‌ ನಡೆಸುವ ಸಂಬಂಧ ಭಾರತ ಹಾಗೂ ಅಮೆರಿಕದ ಆಯುರ್ವೇದ ವೈದ್ಯರು ಹಾಗೂ ಸಂಶೋಧಕರು ಸಜ್ಜಾಗಿದ್ದಾರೆ.

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ಭಾರತದಲ್ಲಿ ಈಗಾಗಲೇ ಬೆಂಗಳೂರು ಸೇರಿದಂತೆ ಕೆಲವೆಡೆ ಕೊರೋನಾ ರೋಗಿಗಳಿಗೆ ಆಯುರ್ವೇದ ಔಷಧವನ್ನು ಹೆಚ್ಚುವರಿ ಚಿಕಿತ್ಸೆ ರೂಪದಲ್ಲಿ ನೀಡಿದ ಹಾಗೂ ಅದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ವರದಿಗಳು ಇವೆ. ಆದರೆ ಇದೀಗ ಇದೇ ಚಿಕಿತ್ಸೆಯನ್ನು ಅಮೆರಿಕ ಕೂಡ ಪರೀಕ್ಷೆಗೆ ಒಳಪಡಿಸಲು ಹೊರಟಿರುವುದು ಮಹತ್ವ ಪಡೆದುಕೊಂಡಿದೆ.

ಜಂಟಿ ಸಂಶೋಧನೆ, ಬೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳ ಮೂಲಕ ಆಯುರ್ವೇದವನ್ನು ಉತ್ತೇಜಿಸಲು ಮುಂದಾಗಿದ್ದೇವೆ. ಕೊರೋನಾ ರೋಗಿಗಳ ಮೇಲೆ ಆಯುರ್ವೇದ ಔಷಧಗಳನ್ನು ಬಳಸಿ ಜಂಟಿ ಕ್ಲಿನಿಕಲ್‌ ಪ್ರಯೋಗ ನಡೆಸಲು ಎರಡೂ ದೇಶಗಳ ಆಯುರ್ವೇದ ವೈದ್ಯರು ಹಾಗೂ ಸಂಶೋಧಕರು ಯೋಚಿಸುತ್ತಿದ್ದಾರೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು ಅವರು ತಿಳಿಸಿದ್ದಾರೆ.

ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ

ಭಾರತ- ಅಮೆರಿಕ ವಿಜ್ಞಾನಿಗಳು, ವಿದ್ವಾಂಸರು ಹಾಗೂ ವೈದ್ಯರೊಂದಿಗೆ ಬುಧವಾರ ವರ್ಚುವಲ್‌ ಮಾತುಕತೆ ನಡೆಸಿದ ಅವರು, ವಿಶಾಲ ಸಾಂಸ್ಥಿಕ ವ್ಯವಹಾರಗಳ ಜಾಲವು ಉಭಯ ದೇಶಗಳ ವೈಜ್ಞಾನಿಕ ಸಮುದಾಯವನ್ನು ಒಟ್ಟುಗೂಡಿಸಿ, ಕೊರೋನಾ ವಿರುದ್ಧ ಹೋರಾಡುವಂತೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Follow Us:
Download App:
  • android
  • ios