Asianet Suvarna News Asianet Suvarna News

ಭೂಕಂಪ ಪೀಡಿತ ಟರ್ಕಿಗೆ ಪರಿಹಾರ ಕಳುಹಿಸಿ ಅ.ರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡ ಪಾಕ್

ನೆರೆಯ ರಾಷ್ಟ್ರ ಪಾಕಿಸ್ಥಾನವೂ ಕೂಡ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಆದರೆ ಹೀಗೆ ಕಳುಹಿಸಿಕೊಟ್ಟ ಪರಿಹಾರ ಸಾಮಾಗ್ರಿಯಲ್ಲಿ ಒಂದು ಟ್ವಿಸ್ಟ್ ಇದೆ ಅದೇನು ಅಂತೀರಾ ಮುಂದೆ ಓದಿ..

The relief materials sent to pak by turkey on 2022 flood, which are sent to turkey as earthquake relief materials now akb
Author
First Published Feb 19, 2023, 3:03 PM IST

ಇಸ್ತಾಂಬುಲ್/ಡಮಾಸ್ಕಸ್: ಟರ್ಕಿ ಈ ಶತಮಾನದಲ್ಲಿ ಕಂಡು ಕೇಳರಿಯದ ಭೀಕರ ಭೂಕಂಪಕ್ಕೆ ಕೆಲ ದಿನಗಳ ಹಿಂದೆ ತುತ್ತಾಗಿತ್ತು. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 46 ಸಾವಿರ ಗಡಿ ದಾಟಿದೆ.  ಸಾವಿರಾರು ಜನ ಮನೆ ಕುಟುಂಬದವರನ್ನು  ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಜಗತ್ತಿನ್ನೆಲ್ಲೆಡೆಯ ದೇಶಗಳು ಟರ್ಕಿಗಾಗಿ ಮಿಡಿಯುತ್ತಿದ್ದು, ಅಲ್ಲಿನ ಜನರಿಗಾಗಿ ಪರಿಹಾರ ಸಾಮಾಗ್ರಿಗಳನ್ನು ಹಂತ ಹಂತವಾಗಿ ಕಳುಹಿಸಿಕೊಡುತ್ತಿವೆ. ಹಾಗೆಯೇ ನಮ್ಮ ನೆರೆಯ ರಾಷ್ಟ್ರ ಪಾಕಿಸ್ಥಾನವೂ ಕೂಡ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಆದರೆ ಹೀಗೆ ಕಳುಹಿಸಿಕೊಟ್ಟ ಪರಿಹಾರ ಸಾಮಾಗ್ರಿಯಲ್ಲಿ ಒಂದು ಟ್ವಿಸ್ಟ್ ಇದೆ ಅದೇನು ಅಂತೀರಾ ಮುಂದೆ ಓದಿ..

ಈಗ ಹೇಗೆ ಟರ್ಕಿ ಭೂಕಂಪಕ್ಕೆ ತುತ್ತಾಗಿ ಸಂಪೂರ್ಣ ಸರ್ವನಾಶವಾಗಿದೆಯೋ ಅದೇ ರೀತಿ ಕಳೆದ ವರ್ಷ ಪಾಕ್‌ನಲ್ಲಿ ಉಂಟಾದ ಪ್ರವಾಹಕ್ಕೆ ಅಲ್ಲಿನ ಜನ ಅಕ್ಷರಶಃ ತತ್ತರಿಸಿ ಹೋಗಿದ್ದರು. ಆಗ ಆ ದೇಶಕ್ಕೂ ಜಗತ್ತಿನ್ನೆಲೆಡೆಯಿಂದ ನೆರವು ಹರಿದು ಬಂದಿತ್ತು. ಪಾಕಿಸ್ತಾನಕ್ಕೆ(Pakistan) ಅಂದು ಪರಿಹಾರ ಸಾಮಾಗ್ರಿ ರೂಪದಲ್ಲಿ ನೆರೆವು ನೀಡಿದ ದೇಶಗಳಲ್ಲಿ ಮುಸ್ಲಿಂ ರಾಷ್ಟ್ರ(Muslim Nation) ಟರ್ಕಿ ಕೂಡ ಒಂದು. ಹೀಗೆ ಅಂದು ಟರ್ಕಿ ನೀಡಿದ ಪರಿಹಾರ ಸಾಮಾಗ್ರಿಯನ್ನೇ ಈಗ ಪಾಕಿಸ್ಥಾನ ವಾಪಸ್ ಕಳುಹಿಸಿದೆಯಂತೆ. ಇದು ಈಗ ಟರ್ಕಿ ಅಧಿಕಾರಿಗಳಿಗೆ ಗೊತ್ತಾಗಿದ್ದು, ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. 

ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

ಪಾಕಿಸ್ತಾನ ಸರ್ಕಾರದ ಸಿಬ್ಬಂದಿ ಈ ಪರಿಹಾರ ಸಾಮಾಗ್ರಿಯ ಹೊರಗಿನ ಹೊದಿಕೆಯನ್ನು ತೆಗೆಯಲು ಯಶಸ್ವಿಯಾದರು ಆದರೆ ಒಳಗಿದ್ದ ಸಾಮಾಗ್ರಿಗಳ ಹೊದಿಕೆ ಬದಲಿಸಲು ವಿಫಲರಾದರೂ ಎಂದು ಈ ವಿಚಾರ ತಿಳಿದ ಕೆಲ ವ್ಯಕ್ತಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.  ಹೀಗೆ ಪಾಕಿಸ್ತಾನವೂ ಭೂಕಂಪ ಪೀಡಿತ ಟರ್ಕಿಗೆ ಕಳುಹಿಸಿ ಪರಿಹಾರ ಸಾಮಾಗ್ರಿಗಳ (relief materials) ಮೇಲ್ಭಾಗದಲ್ಲಿ 'ಭೂಕಂಪದ ನಂತರ ಟರ್ಕಿಗೆ ಸಹಾಯ ಮಾಡಲು ಪಾಕಿಸ್ತಾನವು ಪರಿಹಾರ ಸಾಮಗ್ರಿಗಳನ್ನು ಕಳುಹಿಸುತ್ತಿದೆ' ಎಂದು  ಪೆಟ್ಟಿಗೆ ಹೊರಭಾಗದಲ್ಲಿ ಬರೆದಿದ್ದರೆ, ಒಳಭಾಗದ ಪೆಟ್ಟಿಗೆಯಲ್ಲಿ  ಜೂನ್ 2022 ರ ಪ್ರವಾಹದ ನಂತರ ಟರ್ಕಿಯು ಪಾಕಿಸ್ತಾನಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸುತ್ತಿದೆ ಎಂದು ಬರೆದುಕೊಂಡಿದೆ. 

ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನ ಅಪಹಾಸ್ಯಕ್ಕೆ ಗುರಿಯಾಗುತ್ತಿದೆ. ನೆಟ್ಟಿಗರು ಪಾಕಿಸ್ಥಾನವನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಇದೊಂದು ಸೋನ್ ಪಪ್ಡಿ ಕ್ಷಣ ( ಭಾರತದಲ್ಲಿ ಜನ ದೀಪಾವಳಿ ಸಮಯದಲ್ಲಿ ಉಡುಗೊರೆಯಾಗಿ ಬಂದ ಸೋನ್‌ ಪಪ್ಡಿಯನ್ನೇ ಮತ್ತೆ ಪ್ಯಾಕ್ ಮಾಡಿ ಬೇರೆಯವರಿಗೆ ಉಡುಗೊರೆಯಾಗಿ ನೀಡುತ್ತಾರಂತೆ ಅದಕ್ಕೆ ಹೋಲಿಕೆ)  ಎಂದು ಪಾಕ್ ಕಾಲೆಳೆದಿದ್ದಾರೆ. 

ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್‌ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ

ಇತ್ತ ಈ ವಿಚಾರ ಟರ್ಕಿಯಲ್ಲಿ ಬಯಲಾಗುತ್ತಿದ್ದಂತೆ ಅಲ್ಲಿನ ಕಾನ್ಸುಲೇಟ್ ಜನರಲ್ ಈ ವಿಷಯವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ.  ಈ ಮಧ್ಯೆ ಭೂಕಂಪದ ನಂತರ ಟರ್ಕಿಗೆ ಎರಡು ದಿನಗಳ ಭೇಟಿ ನೀಡಲು ಬಯಸಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹಾಗೂ  ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (foreign minister Bilawal Bhutto) ಅವರು ತಮ್ಮ ಭೇಟಿಯನ್ನು ಮುಂದೂಡಿದ್ದಾರೆ. ಟರ್ಕಿ ಸರ್ಕಾರ ಪ್ರಸ್ತುತ ಪರಿಹಾರ ಕಾರ್ಯಗಳಲ್ಲಿ ತೊಡಗಿರುವುದರಿಂದ ಪಾಕಿಸ್ತಾನದ ನಾಯಕರಿಗೆ ಭೇಟಿ ಮುಂದುವರಿಸುವಂತೆ ಕೇಳಿದ ಹಿನ್ನೆಲೆಯಲ್ಲಿ ಇವರ ಭೇಟಿ ಮುಂದುವರೆದಿದೆ. 

 

Follow Us:
Download App:
  • android
  • ios