ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶವನ್ನು ಪಾರು ಮಾಡಲು ಪಾಕಿಸ್ತಾನದ ರಾಯಭಾರಿ ಕಚೇರಿಗೆ ಅನಾಮಧೇಯ ದಾನಿಗಳು ಏಕೆ ಕಾಲಿಟ್ಟಿಲ್ಲ ಎಂದು ಪಾಕಿಸ್ತಾನಿ ಪತ್ರಕರ್ತರು ವ್ಯಂಗ್ಯವಾಡಿದ್ದಾರೆ.
ಇಸ್ಲಾಮಾಬಾದ್ (ಫೆಬ್ರವರಿ 13, 2023): ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ಹಿನ್ನೆಲೆ ಭಾರತ ಸೇರಿ ವಿದೇಶದ ಸರ್ಕಾರ, ಹಲವು ಜನರು ಸಹ ಸಹಾಯ ಮಾಡುತ್ತಿದ್ದಾರೆ. ಇದೇ ರೀತಿ, ಅನಾಮಧೇಯ ಪಾಕಿಸ್ತಾನಿ ಪ್ರಜೆಯೊಬ್ಬರು ಅಮೆರಿಕದಲ್ಲಿ ನೆರವು ನೀಡಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಪಾಕಿಸ್ತಾನಿ ಪತ್ರಕರ್ತರು ಹಾಗೂ ಜನರು ಪಾಕ್ ಪ್ರಧಾನಿಗೆ ನಾನಾ ಪ್ರಶ್ನೆಗಳನ್ನು ನೀಡಿದ್ದಾರೆ.
ಪಾಕ್ (Pakistan) ಪ್ರಜೆಯೊಬ್ಬರು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ (United States) ಟರ್ಕಿ ರಾಯಭಾರ (Turkish Embassy) ಕಚೇರಿಗೆ ತೆರಳಿ ಟರ್ಕಿ-ಸಿರಿಯಾ ಭೂಕಂಪ ಸಂತ್ರಸ್ತರಿಗೆ (Turkey Syria Relief Victims) 30 ಮಿಲಿಯನ್ ಡಾಲರ್ ಅಂದರೆ ಕೋಟ್ಯಂತರ ರೂ. ದೇಣಿಗೆ (Relief) ನೀಡಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಟ್ವೀಟ್ ಮಾಡಿದ್ದಾರೆ. ‘’ಯುಎಸ್‌ನಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಗೆ ಕಾಲಿಟ್ಟ ಅನಾಮಧೇಯ ಪಾಕಿಸ್ತಾನಿಯ ಉದಾಹರಣೆಯಿಂದ ಆಳವಾಗಿ ಮನಸ್ಸಿಗೆ ಮುಟ್ಟಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಸಂತ್ರಸ್ತರಿಗೆ 30 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಇವುಗಳು ಪರೋಪಕಾರದ ಅದ್ಭುತ ಕಾರ್ಯಗಳಾಗಿವೆ’’ ಎಂದು ಶೆಹಬಾಜ್ ಷರೀಫ್ ಟ್ವೀಟ್ ಮಾಡಿದ್ದಾರೆ.
ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ..! ಮುಳುಗುತ್ತಿರುವ ದೇಶವನ್ನು ರಕ್ಷಿಸಬೇಕಾ ಭಾರತ..?
ಆದರೆ, ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶವನ್ನು ಪಾರು ಮಾಡಲು ಪಾಕಿಸ್ತಾನದ ರಾಯಭಾರಿ ಕಚೇರಿಗೆ ಅನಾಮಧೇಯ ದಾನಿಗಳು ಏಕೆ ಕಾಲಿಟ್ಟಿಲ್ಲ ಎಂದು ಪಾಕಿಸ್ತಾನಿ ಪತ್ರಕರ್ತರು ವ್ಯಂಗ್ಯವಾಡಿದ್ದಾರೆ. ಈ ಲೋಕೋಪಕಾರಿಯು ಪಾಕಿಸ್ತಾನದ ರಾಯಭಾರ ಕಚೇರಿಗೆ ಸದ್ದಿಲ್ಲದೆ ನಡೆದು ಪ್ರವಾಹ ಪರಿಹಾರಕ್ಕಾಗಿ ಈ ಹಣವನ್ನು ಏಕೆ ಸೂಚಿಸಲಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಏಕೆ ಎಂದು ಆಶ್ಚರ್ಯಪಡುತ್ತೀರಾ? ಎಂದು ಲೇಖಕಿ ಆಯೇಶಾ ಸಿದ್ದಿಕಾ ಟ್ವೀಟ್ ಮಾಡಿದ್ದಾರೆ.
ಹಾಗೆ, ಪಾಕಿಸ್ತಾನಿ ಪತ್ರಕರ್ತ ಇಹ್ತಿಶಾಮ್ ಉಲ್ ಹಕ್ ಅವರು, ಲೋಲ್, ಬದಲಿಗೆ ಅವರು ಪಾಕಿಸ್ತಾನಿ ರಾಯಭಾರ ಕಚೇರಿಗೆ ಏಕೆ ಕಾಲಿಡಲಿಲ್ಲ ಎಂದು ನೀವೇ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ; ಪಾಕ್‌ಗೆ ತಿರುಗೇಟು
ಪಾಕಿಸ್ತಾನ ತೀವ್ರ ಆರ್ಥಿಕತೆಯ ತೊಂದರೆಯಿಂದ ನಲುಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದ್ದು, ಜನರು ಅವುಗಳನ್ನು ಕೊಳ್ಳಲು ಸಹ ಪರದಾಡುತ್ತಿದ್ದಾರೆ. ಇತ್ತೀಚೆಗೆ ಐಎಂಎಫ್ ಅಧಿಕಾರಿಗಳು ಪಾಕ್‌ಗೆ ಭೇಟಿ ನೀಡಿದ್ದು ಸಾಲ ನೀಡುವ ಬಗ್ಗೆ ಮಾತುಕತೆ ನಡೆಸಿದ್ದರು. ಇದಕ್ಕೆ ಐಎಂಎಫ್ ನಾನಾ ಷರತ್ತುಗಳನ್ನು ಹಾಕಿತ್ತು. ಆದರೆ, ಆ ಮಾತುಕತೆ ವಿಫಲವಾಗಿದೆ ಎಂದು ಹೇಳಲಾಗಿದ್ದು ಆದರೂ, ಮಾತುಕತೆಗಳನ್ನು ಮುಂದುವರಿಸಲು ವಾಗ್ದಾನ ಮಾಡಿದೆ.
6.5 ಬಿಲಿಯನ್ ಡಾಲರ್ ನೆರವಿಗಾಗಿ IMF ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದು ಪಾಕಿಸ್ತಾನಕ್ಕೆ ಅತ್ಯಂತ ಮುಖ್ಯವಾಗಿದೆ. ಇದರಿಂದ ಮತ್ತಷ್ಟು ಹೆಚ್ಚಿನ ಹಣದ ನೆರವೂ ಪಡೆಯಬಹುದು. ಇಸ್ಲಾಮಿಕ್ ಗಣರಾಜ್ಯಕ್ಕೆ ಹೆಚ್ಚಿನ ಸಹಾಯವನ್ನು ಪಡೆಯಲು, ಮತ್ತು 3 ಶತಕೋಟಿ ಡಾಲರ್‌ಗಿಂತ ಕಡಿಮೆಯಿರುವ ವಿದೇಶಿ ಕರೆನ್ಸಿ ಮೀಸಲುಗಳನ್ನು ಮರುಪೂರಣಗೊಳಿಸಲು ಹಣದ ಅಗತ್ಯವಿದೆ.
ಹೊಟ್ಟೆಗೆ ಹಿಟ್ಟಿಲ್ಲ..! ಪರಮಾಣು ಶಕ್ತಿ ದೇಶ ನಮ್ಮದು, ಭಾರತಕ್ಕೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ!
ಆದಾಯ ಕ್ರಮಗಳೊಂದಿಗೆ ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು, ಗುರಿಯಿಲ್ಲದ ಸಬ್ಸಿಡಿಗಳಲ್ಲಿ ಕಡಿತ ಮತ್ತು ವಿನಿಮಯ ದರವನ್ನು ಮಾರುಕಟ್ಟೆ-ನಿರ್ಧರಿಸಲು ಅವಕಾಶ ನೀಡುವುದು ಈ ಕ್ಷಣದಲ್ಲಿ ಐಎಂಎಫ್‌ನ ಆದ್ಯತೆಗಳಾಗಿವೆ.
ಐಎಂಎಫ್ ಇಂಧನ ಕ್ಷೇತ್ರದ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೂ ಪಾಕಿಸ್ತಾನದ ಅಧಿಕಾರಿಗಳು ಈ ವಾರ ವಿದ್ಯುತ್ ಬೆಲೆಗಳನ್ನು ಹೆಚ್ಚಿಸುವುದನ್ನು ತಳ್ಳಿಹಾಕಿದ್ದಾರೆ ಮತ್ತು ತಿಂಗಳುಗಳವರೆಗೆ ಗ್ಯಾಸ್ ಬೆಲೆಗಳನ್ನು ಹೆಚ್ಚಿಸುವುದನ್ನು ಸಹ ವಿರೋಧಿಸಿದ್ದಾರೆ.