ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಪಾಕಿಸ್ತಾನದಲ್ಲಿ ಸುಮಾರು 1500-1700 ವರ್ಷಗಳಷ್ಟು ಹಳೆಯದಾದ ಮುದ್ರೆಯೊಂದನ್ನು ಪತ್ತೆಹಚ್ಚಿದೆ. ಬ್ರಾಹ್ಮಿ ಲಿಪಿಯನ್ನು ಹೊಂದಿರುವ ಈ ಮುದ್ರೆಯು ದೇವದಾರು ಕಾಡಿನಲ್ಲಿದ್ದ ಸ್ವಾಮಿ ಕೋಟೇಶ್ವರ ಎಂಬ ಶಿವನ ದೇಗುಲಕ್ಕೆ ಸಂಬಂಧಿಸಿದ್ದು, ಸ್ಕಂದ ಪುರಾಣದ ಕಥೆಯೊಂದಿಗೆ ಸಂಬಂಧ ಹೊಂದಿದೆ ಎಂದು ವರದಿಯಾಗಿದೆ.

ಇಸ್ಲಾಮಾಬಾದ್: ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಇತಿಹಾಸವನ್ನು ಓದಬೇಕು. ಇಂದಿಗೂ ಇತಿಹಾಸದಲ್ಲಿರುವ ಅಡಗಿರುವ ಸತ್ಯ ತಿಳಿಯಲು ಇಂದಿಗೂ ಸಂಶೋಧನೆಗಳು ನಡೆಯುತ್ತಿವೆ. ಎಪಿಗ್ರಾಫಿ ಡಿವಿಜನ್ ವಿಭಾಗದಲ್ಲಿ Archaeological Survey of India (ASI) ಇಲಾಖೆ ಮಹತ್ವದ ಶೋಧವೊಂದನ್ನು ಮಾಡಿದೆ. ನೆರೆಯ ಮುಸ್ಲಿಂ ದೇಶ ಪಾಕಿಸ್ತಾನದಲ್ಲಿ ಸುಮಾರು 1500-1700 ವರ್ಷಗಳಷ್ಟು ಹಿಂದಿನದ್ದು ಎನ್ನಲಾದ ಮುದ್ರೆಯೊಂದು ದೊರಕಿದೆ.

ಈ ಮುದ್ರೆ ಮೇಲೆ ಬ್ರಾಹ್ಮಿ ಲಿಪಿ ಕಂಡು ಬಂದಿದೆ ಎಂದು ವರದಿಯಾಗಿದೆ. ಬ್ರಾಹ್ಮಿ ಲಿಪಿ ಹೊಂದಿರುವ ಕಾರಣ ಇದೊಂದು ದೇವಾಲಯಕ್ಕೆ ಸಂಬಂಧಿಸಿದ ಮುದ್ರೆ ಎಂಬುವುದು ಗೊತ್ತಾಗುತ್ತೆ. ಈ ಮುದ್ರೆಯನ್ನು ಹಿಮಾಲಯದ ದೇವದಾರ ಮರಗಳು ಅಂದ್ರೆ ದೇವದರೂವನ್ ಅರಣ್ಯದಲ್ಲಿರುವ ಶಿವನ ರೂಪವಾದ ಸ್ವಾಮಿ ಕೋಟೇಶ್ವರ ದೇಗುಲಕ್ಕೆ ಸಮರ್ಪಿತ ಮಾಡಲಾಗಿತ್ತು. ASI ಎಪಿಗ್ರಾಫಿ ವಿಂಗ್ ವಿಭಾಗದ ಪ್ರಮುಖ ಅಧಿಕಾರಿ ಕೆ.ಮುನಿರತ್ನಮ್ ರೆಡ್ಡಿ ಲಭ್ಯವಾಗಿರುವ ಮುದ್ರೆಯ ಮಾಹಿತಿಯನ್ನು ನೀಡಿದ್ದಾರೆ.

ಸ್ಕಂದ ಪುರಾಣದಲ್ಲಿರುವ ಕಥೆಯೊಂದಿಗೆ ಮುದ್ರೆ ಲಿಂಕ್

ಈ ಮುದ್ರೆಯನ್ನು ಸ್ಕಂದ ಪುರಾಣದಲ್ಲಿರುವ ಕಥೆಯೊಂದರ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಈ ಮುದ್ರೆ ದೇವದರುವಣದಲ್ಲಿ ಶಿವನ ಸಂಚಾರವನ್ನು ಉಲ್ಲೇಖಿಸುತ್ತಿದ್ದು, ಇದನ್ನು ಅತ್ಯಂತ ಹಳೆಯ ಲಿಖಿತ ಮತ್ತು ಚಿತ್ರಾತ್ಮಕ ಪುರಾವೆ ಎಂದು ಪರಿಗಣಿಸಲಾಗಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್‌ಗಿಟ್ ಬಳಿಯಲ್ಲಿ 4 ನೇ ಶತಮಾನದ ಸಂಸ್ಕೃತ ಶಾಸನವೊಂದು 2024ರಲ್ಲಿ ಪತ್ತೆಯಾಗಿತ್ತು. ಈ ಅಂಶವನ್ನು ಸಹ ಬ್ರಾಹ್ಮಿಲಿಪಿಯನ್ನು ಬರೆಯಲಾಗಿದೆ. ಪುಷ್ಪಸಿಂಗ್ ಎಂಬ ವ್ಯಕ್ತಿ ತನ್ನ ಗುರುವಿನ ಪುಣ್ಯತಿಥಿಯಂದು ಮಹೇಶ್ವರಲಿಂಗವನ್ನು ಸ್ಥಾಪಿಸಿದ್ದಾನೆ ಎಂದು ಅಧಿಕಾರಿ ಮುನಿರತ್ನಂ ರೆಡ್ಡಿ ಹೇಳುತ್ತಾರೆ. ಆದ್ರೆ ಗುರುವಿನ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ.

ಇದನ್ನೂ ಓದಿ: ‘ದಾನ ನಾಶ ಮಾಡಿದರೆ ಅಪಾರ ಪಾಪ’ ಕ್ರಿ.ಶ 800 ರ ಅಪರೂಪದ ಶಾಸನ ಪತ್ತೆ: ಕರಾವಳಿ ಇತಿಹಾಸಕ್ಕೆ ಸಿಕ್ಕಿತು ಹೊಸ ಬೆಳಕು!

ಪೇಶಾವರದಲ್ಲಿ 10ನೇ ಶತಮಾನದ ಶಾರದಾ ಲಿಪಿ/ಶಾಸನ ಪತ್ತೆ

ಗಿಲ್‌ಗಿಟ್ ಶಾಸನ ಪತ್ತೆಗೂ ಮುನ್ನ ಸುಮಾರು ಐದು ತಿಂಗಳ ಹಿಂದೆ ಪೇಶಾವರ ಬಳಿಯ ಕಲ್ಲುಗಳ ಮೇಲೆ ಸಂಸ್ಕೃತದಲ್ಲಿ ಬರೆಯಲಾದ 10ನೇ ಶತಮಾನದ ಶಾರದಾ ಲಿಪಿ ಪತ್ತೆ ಮಾಡಲಾಗಿತ್ತು. ಈ ಶಾಸನವು ಬೌದ್ಧ ಧರಣಿ ಮಂತ್ರಗಳ ಉಲ್ಲೇಖಗಳನ್ನು ಒಳಗೊಂಡಿತ್ತು. ಈ ಶಾಸನದ ಆರನೇ ಸಾಲಿನಲ್ಲಿ "ದ ಧಾ ರಿನಿ" ಎಂಬ ಪದಗಳನ್ನು ಬರೆಯಲಾಗಿದೆ. ಈ ಪ್ರದೇಶದಲ್ಲಿ ವೈವಿಧ್ಯಮಯ ಧರ್ಮಗಳು ಮತ್ತು ಸಂಪ್ರದಾಯಗಳ ಉಪಸ್ಥಿತಿ ಮತ್ತು ಅಂದು ಇಲ್ಲಿಯ ಸಾಂಸ್ಕೃತಿಕ ಜೀವನ ಸಾಕಷ್ಟು ಶ್ರೀಮಂತವಾಗಿತ್ತು ಎಂಬುದನ್ನು ಸ್ಪಷ್ಟವಾಗಿ ತೋರಿಸಿತ್ತು

ಇದನ್ನೂ ಓದಿ: Udupi: ಕಾರ್ಕಳ ತಾಲೂಕಿನ ಪುಟ್ಟ ಗ್ರಾಮದಲ್ಲಿ ಪತ್ತೆಯಾಯ್ತು 400 ವರ್ಷಗಳ ಹಿಂದಿನ ರಹಸ್ಯ