Asianet Suvarna News Asianet Suvarna News

ಬ್ರೂಸ್ಲಿ ಅಭಿಮಾನಿಯ ಅದ್ಬುತ ಕಥನ: ಚೀನಾ ಪಠ್ಯಪುಸ್ತಕದಲ್ಲಿ ಪಾಠವಾದ ಭಾರತೀಯ

ಚೀನಾಗೂ ಭಾರತದಕ್ಕೂ ಅಂತ ಉತ್ತಮ ಒಡನಾಟವೇನಿಲ್ಲ, ಆದರೂ ಭಾರತೀಯನೋರ್ವ ಚೀನಾದ ಪಠ್ಯ ಪುಸ್ತಕದಲ್ಲಿ ಜಾಗ ಕಲ್ಪಿಸಿಕೊಂಡು ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾನೆ. ವಿಚಿತ್ರ ಎನಿಸಿದರು ಇದು ಸತ್ಯ. ಚೈನೀಸ್ ಅಮೆರಿಕನ್ ಮಾರ್ಷಲ್ ಆರ್ಟಿಸ್ಟ್ ಹಾಗೂ ನಟ ಬ್ರೂಸ್ಲಿಯ ಅಪ್ಪಟ ಅಭಿಮಾನಿಯೋರ್ವನ ಕತೆ ಇದು. 

The Amazing Story of a Brucely Fan dev raturi from uttarkhand An Indians Lesson in a Chinese Textbook akb
Author
First Published Jul 26, 2023, 4:49 PM IST

ಬೀಜಿಂಗ್: ಚೀನಾಗೂ ಭಾರತದಕ್ಕೂ ಅಂತ ಉತ್ತಮ ಒಡನಾಟವೇನಿಲ್ಲ, ಆದರೂ ಭಾರತೀಯನೋರ್ವ ಚೀನಾದ ಪಠ್ಯ ಪುಸ್ತಕದಲ್ಲಿ ಜಾಗ ಕಲ್ಪಿಸಿಕೊಂಡು ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾನೆ. ವಿಚಿತ್ರ ಎನಿಸಿದರು ಇದು ಸತ್ಯ. ಚೈನೀಸ್ ಅಮೆರಿಕನ್ ಮಾರ್ಷಲ್ ಆರ್ಟಿಸ್ಟ್ ಹಾಗೂ ನಟ ಬ್ರೂಸ್ಲಿಯ ಅಪ್ಪಟ ಅಭಿಮಾನಿಯೋರ್ವನ ಕತೆ ಇದು. 

ಉತ್ತರಾಖಂಡ್‌ನ ತೆಹ್ರಿ ಗರ್ವಾಲ್ ಜಿಲ್ಲೆಯ ಕೆಮ್ರಿಯಾ ಸೌರ್ ಗ್ರಾಮದ ದೇವ್ ರಾತೂರಿ (46) ಬ್ರೂಸ್ಲಿಯ ಅಪ್ಪಟ ಅಭಿಮಾನಿ, ತನ್ನ ನೆಚ್ಚಿನ ಹೀರೋ ಹಾದಿಯನ್ನೆ ಹಿಡಿಯಬೇಕೆಂದು ಬಯಸಿದ ದೇವ್ ರಾತೂರಿ 1998ರಲ್ಲಿ ಹಿಂದಿ ಸಿನಿಮಾವೊಂದಕ್ಕೆ ಒಮ್ಮೆ ಅಂದಿನ ಮಹಾಭಾರತದ ದುರ್ಯೋಧನ ಪಾತ್ರಧಾರಿ ಪುನೀತ್ ಇಸ್ಸರ್ ಮುಂದೆ ಆಡಿಷನ್ ಕೂಡ ನೀಡಿದ್ದರು. ಆದರೆ ಅದು ಯಶಸ್ಸು ಕಾಣಲಿಲ್ಲ, ಆದರೆ ಈ ದೇವ್ ರಾತೂರಿ ಈಗ ಚೀನಾ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಸ್ಪೂರ್ತಿದಾಯಕ ಕತೆಯ ಹೀರೋ ಆಗಿದ್ದಾರೆ. ಪಠ್ಯದ ಕೆಲ ಸಿಲಾಬಸ್‌ಗಳಲ್ಲಿ ಇವರ ಕತೆ ಇದ್ದು ಅಲ್ಲಿನ ಶಾಲಾ ಮಕ್ಕಳು ಮಾತ್ರವಲ್ಲದೇ ಜನರ ಬಾಯಲ್ಲಿ ದೇವ್ ರಾತೂರಿ ಫುಲ್ ಫೇಮಸ್ ಆಗಿದ್ದಾರೆ. ಕ್ಸಿಯನ್ ನಗರದ ಶಾಂಕ್ಸಿ ಪ್ರಾಂತ್ಯದಲ್ಲಿ 7 ತರಗತಿಯ ಇಂಗ್ಲೀಷ್ ಪಠ್ಯದಲ್ಲಿ ದೇವ್ ರಾತೂರಿ ಸಾಹಸಗಾಥೆ ಇದೆ.

ದೇವಭೂಮಿ ಟು ಚೀನಾ ಯಾನ

ಹಿಂದಿ ಸಿನಿಮಾಗೆ ಆಡಿಷನ್ ನೀಡಿ ಫೈಲ್ ಆದ 18 ವರ್ಷಗಳ ನಂತರ  ದೇವ್ ರಾತೂರಿ ಚೀನಾಗೆ ತೆರಳಿದ್ದು ಅಲ್ಲಿನ ರೆಸ್ಟೋರೆಂಟ್‌ ಒಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದರು.  ಉತ್ತರಾಖಂಡ್‌ನ ತೆಹ್ರಿ ಗರ್ವಾಲ್‌ನಲ್ಲಿ ರೈತ ಕುಟುಂಬವೊಂದರಲ್ಲಿ ಜನಿಸಿದ ದೇವ್ ಅವರು ಭಾರತದಲ್ಲೇ ಕರಾಟೆ ಕಲಿತಿದ್ದರು. ಹೆಚ್ಚಿನ ತರಬೇತಿಗಾಗಿ ಚೀನಾಗೆ ಹೋಗುವ ಅವಕಾಶಗಳನ್ನು ಎದುರು ನೋಡುತ್ತಾ ಅವರು  ದೆಹಲಿಯಲ್ಲಿ ದಶಕಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುತ್ತಿದ್ದರು.

ಇದಾದ ನಂತರ 2005ರಲ್ಲಿ ಅವರಿಗೆ ಚೀನಾದ ಶೆಂಝೆನ್ ಪ್ರದೇಶದಲ್ಲಿ ಭಾರತೀಯ ರೆಸ್ಟೋರೆಂಟೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುವ ಅವಕಾಶ ಒದಗಿ ಬಂತು ಬಂದ ಅವಕಾಶವನ್ನು ಮಿಸ್ ಮಾಡದ ದೇವ್, ಚೀನಾಗೆ ಹೊರಟೇ ಬಿಟ್ಟರು. ಅಲ್ಲಿ ಹೊಟೇಲೊಂದರಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿ ಸಂಬಳಕ್ಕೆ ದುಡಿಮೆ ಆರಂಭಿಸಿದ ದೇವ್ ಚೀನಾದ ಆಡುಭಾಷೆ ಮಂದಾರಿನ್ (Mandarin Language) ನಲ್ಲಿ ಸುಲಲಿತವಾಗಿ ಮಾತನಾಡುವುದನ್ನು ಕಲಿತರು. ಆದರೆ ಮಾರ್ಷಲ್ ಆರ್ಟ್ಸ್‌ನಲ್ಲಿ ನೈಪುಣ್ಯತೆ ಗಿಟ್ಟಿಸಿಕೊಳ್ಳಬೇಕೆಂಬ ದೇವ್ ಆಸೆ ಅವರು ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡದಂತೆ ತಡೆದಿತ್ತು. 

ಚೀನಾ ವಿದೇಶಾಂಗ ಸಚಿವ ನಾಪತ್ತೆ: ವಾಂಗ್‌ಗೆ ಮತ್ತೆ ಸಚಿವ ಸ್ಥಾನ

ಆದರೆ ಈ ಬಗ್ಗೆ ವಿಚಾರಿಸಿದಾಗ  ದೇವ್‌ಗೆ ನಿರಾಶೆ ಕಾದಿತ್ತು. ಮಾರ್ಷಲ್ ಆರ್ಟ್ಸ್‌ಗೆ ಹೆಚ್ಚಿನ ತರಬೇತಿಗಾಗಿ ಅಲ್ಲಿಂದ ಬಹಳ ದೂರ ಇರುವ ಶವೋಲಿನ್ ಬುದ್ಧ ದೇಗುಲಕ್ಕೆ ಹೋಗಬೇಕಾಗಿತ್ತು. ಹೀಗಾಗಿ ಇದರ ವೆಚ್ಚ ಭರಿಸುವುದು ಕಷ್ಟ ಎಂದು ದೇವ್ ಸುಮ್ಮನಾಗಿದ್ದರು.  ಆದರೆ ಗುರಿ ಹಾಗೂ ಕನಸು ದೇವ್ ಅವರನ್ನು ಸುಮ್ಮನೇ ಕೂರಲು ಬಿಡಲಿಲ್ಲ,  ನಂತರ 7 ವರ್ಷಗಳ ಕಾಲ ಅವರು ಶ್ರಮವಹಿಸಿ ದುಡಿದರು. ಪರಿಣಾಮ ಚೀನಾದ ಲಕ್ಸುರಿ ಹೊಟೇಲೊಂದರ್ಲಿ ಮ್ಯಾನೇಜರ್ ಹುದ್ದೆಗೆ ಏರಿದರು. ಇದಾದ ನಂತರ 2013ರಲ್ಲಿ ಕ್ಸಿಯಾನ್ ಪ್ರದೇಶದಲ್ಲಿ ತನ್ನದೇ ಹೊಟೇಲ್ ಸ್ಥಾಪಿಸಿದ ದೇವ್ ಅದರಲ್ಲಿ ಭಾರತದ ಆಹಾರ ಪರಂರಪರೆಗೆ ಸ್ಥಾನ ನೀಡಿದರು.

ಅದೃಷ್ಟ ಹೇಳದೇ ಬಂತು ಎಂಬಂತೆ 2017ರಲ್ಲಿ ದೇವ್ ಹೊಟೇಲ್‌ಗೆ ಚೀನಾದ ಪ್ರಸಿದ್ಧ ನಿರ್ದೇಶಕರೊಬ್ಬರು ಆಗಮಿಸಿದ್ದು,  ಅವರು  SWAT ಹೆಸರಿನ ಟಿವಿ ಸಿರೀಸ್‌ನಲ್ಲಿ ಪುಟ್ಟ ಪಾತ್ರವೊಂದನ್ನು ನೀಡುತ್ತಾರೆ. ಇದು ಅವರ ಬದುಕಿನ ಅದೃಷ್ಟವನ್ನೇ ಬದಲಾಯಿಸಿತು. ಇದಾದ ನಂತರ ಸುಮಾರು 35 ಚೀನಿ ಸಿನಿಮಾಗಳಲ್ಲಿ ದೇವ್ ನಟಿಸಿದ್ದಾರೆ. ಅದರಲ್ಲಿ ಬಹಳ ಜನಪ್ರಿಯವಾದುದು ಮೈ ರೂಮ್‌ಮೇಟ್ ಇಸ್ ಎ ಡಿಟೆಕ್ಟಿವ್. ಇದರಲ್ಲಿ ಅವರಿಗೆ ಪ್ರಮುಖ ರೋಲ್ ನೀಡಲಾಗಿತ್ತು. ಇಂದು ಚೀನಾದಲ್ಲಿ ದೇವ್ ಒಟ್ಟು 8 ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. 

ಚೀನಾಕ್ಕೆ ಶುರುವಾಯ್ತು ಹಿಮ್ಮುಖ ಹಣದುಬ್ಬರದ ಭೀತಿ, ಹಾಗೆಂದರೇನು?

ಚೀನಾದ ಸಿನಿಮಾಗಳು ನಾನು ಜನಪ್ರಿಯಗೊಳ್ಳಲು ಕಾರಣವಾದವು. ಸ್ಥಳೀಯ ಜನರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಕೋವಿಡ್ ಸಮಯದಲ್ಲಿ ಇಲ್ಲಿನ ಜನರು ನನ್ನನ್ನುತುಂಬಾ ಬೆಂಬಲಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ.  ಪ್ರಸ್ತುತ ಚೀನಾದ ಕ್ಸಿಯಾನ್ ಪ್ರಾಂತ್ಯದಲ್ಲಿ ಪತ್ನಿ ಅಂಜಲಿ ಪುತ್ರ ಅರವ್ ಹಾಗೂ ಅರ್ನವ್ ಜೊತೆ ನೆಲೆಸಿದ್ದಾರೆ ದೇವ್.

Follow Us:
Download App:
  • android
  • ios