ಚೀನಾಕ್ಕೆ ಶುರುವಾಯ್ತು ಹಿಮ್ಮುಖ ಹಣದುಬ್ಬರದ ಭೀತಿ, ಹಾಗೆಂದರೇನು?
ಚೀನಾದ ಗ್ರಾಹಕ ಹಣದುಬ್ಬರವು 28-ತಿಂಗಳ ಕನಿಷ್ಠ 0% ಕ್ಕೆ ಇಳಿದಿದೆ. ಉತ್ಪಾದಕರ ಬೆಲೆಗಳಲ್ಲಿನ ಕುಸಿತವು ಜೂನ್‌ನಲ್ಲಿ ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗಿದೆ ಎಂದು ಹೇಳಲಾಗಿದೆ.
ನವದೆಹಲಿ (ಜು.12): ಚೀನಾ ಪಾಲಿಗೆ ಮತ್ತೊಂದು ಆತಂಕ ಎದುರಾಗಿದೆ. ಕೋರೋನಾ ಸಮಸ್ಯೆಯಿಂಚ ಚೇತರಿಕೆ ಕಾಣುತ್ತಿರುವ ಚೀನಾದಲ್ಲೀಗ ಡಿಫ್ಲೇಷನ್ ಸಮಸ್ಯೆ ಅತಿಯಾಗಿ ಕಾಡಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದರು. ಇನ್‌ಫ್ಲೇಶನ್ ಅನ್ನೋದು ಹಣದುಬ್ಬರವಾಗಿದ್ದರೆ, ಡಿಫ್ಲೇಷನ್ ಅನ್ನೋದು ಅದರ ವಿರುದ್ಧ ಅಂದರೆ, ಹಿಮ್ಮುಖ ಹಣದುಬ್ಬರ. ಈ ಸಮಯದಲ್ಲಿ ವಸ್ತುಗಳ ಬೆಲೆ ಪಾತಾಳಕ್ಕೆ ಇಳಿಯುತ್ತದೆ. ಇದು ಉತ್ಪಾದಕರ ಪಾಲಿಗೆ ಸಮಸ್ಯೆ ತಂದೊಡ್ಡುತ್ತದೆ. ವಸ್ತುಗಳ ಬೆಲೆ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದಾಗ ಅದನ್ನು ಹಿಮ್ಮುಖ ಹಣದುಬ್ಬರ ಎನ್ನಲಾಗುತ್ತದೆ. ಇದು ಗ್ರಾಹಕನಲ್ಲಿ ಖರೀದಿಯ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಏರಿಸುತ್ತದೆ. ಹೇಗೆ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮೂಲಕ ಅಂದಾಜು ಮಾಡಲಾಗುತ್ತದೆಯೋ ಅದೇ ರೀತಿ ಹಿಮ್ಮುಖ ಹಣದುಬ್ಬರವನ್ನೂ ಇದೇ ರೀತಿಯ ಸೂಚ್ಯಂಕದ ಮೂಲಕ ಅಂದಾಜು ಮಾಡಲಾಗುತ್ತದೆ. ಚೀನಾದಲ್ಲಿ ಜೂನ್ ತಿಂಗಳಿನಲ್ಲಿ ವಸ್ತುಗಳ ಬೆಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. 7 ವರ್ಷದ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಿಸಿದಾಗ ಇದ್ದ ವೇಗಕ್ಕಿಂತ ಹೆಚ್ಚಾಗಿ ಜೂನ್ ತಿಂಗಳಲ್ಲಿ ವಸ್ತುಗಳ ಬೆಲೆ ಇಳಿಕೆಯಾಗಿದೆ.
ಆರ್ಥಿಕ ತಜ್ಞರು ನೀಡುವ ಮಾಹಿತಿಯ ಪ್ರಕಾರ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಚೀನಾ ದೊಡ್ಡ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ವಸ್ತುಗಳ ಬೆಲೆ ಇಳಿಕೆಯಾಗುವುದರಿಂದ ಜನರು ವಸ್ತುಗಳ ಮೇಲೆ ಖರ್ಚು ಮಾಡುವ ಸಮಯವೂ ಇಳಿಕೆಯಾಗುತ್ತದೆ. ಇನ್ನು ಜನರು ಹಣವನ್ನು ಖರ್ಚು ಮಾಡದೇ ಇದ್ದಲ್ಲಿ ನೇರವಾಗಿ ಉತ್ಪಾದಕರ ಮೇಲೆ ಅದರ ಪರಿಣಾಮ ಬೀರುತ್ತದೆ. ಅವರಿಗೆ ಕಡಿಮೆ ಆದಾಯ ಬಂದಲ್ಲಿ, ಅದು ದೇಶದಲ್ಲಿ ನಿರುದ್ಯೋಗ ಸಮಸ್ಯೆಗೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಅವರ ಪ್ರಕಾರ ಡಿಫ್ಲೇಶನ್ ಒಂದು ರೀತಿಯ ದೇಶದ ಆರ್ಥಿಕತೆಯ ಹಿಂಜರಿತಕ್ಕೂ ಕಾರಣವಾಗಬಹುದು. ಇದು ಡೂಮ್ ಲೂಪ್‌ಗೆ ಹೋಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದರಿಂದಾಗಿ ಚೀನಾದ ಪ್ರಮುಖ ಕರೆನ್ಸಿ ಯುವಾನ್‌ನ ಮೌಲ್ಯದಲ್ಲೂ ಇಳಿಕೆಯಾಗಲಿದೆ. ಅದರೊಂದಿಗೆ ಏಷ್ಯಾದ ಷೇರು ಮಾರುಕಟ್ಟೆಗಳೂ ಕುಸಿತ ಕಾಣಲಿದೆ ಎಂದಿದ್ದಾರೆ. ಇಂಥ ಪರಿಸ್ಥಿತಿ ಎದುರಾದಾಗ ಸೆಂಟ್ರಲ್ ಬ್ಯಾಂಕ್‌ಗಳು, ಮಾರುಕಟ್ಟೆಗೆ ಹಣದ ಹರಿವನ್ನು ಹೆಚ್ಚು ಮಾಡುವ ಮೂಲಕ ಹಿಮ್ಮುಖ ಹಣದುಬ್ಬರವನ್ನು ನಿಯಂತ್ರಣ ಮಾಡುವ ಕೆಲಸ ಮಾಡುತ್ತದೆ.
ಹೂಡಿಕೆಗೆ ಭಾರತವೇ ನಂ.1 ಪ್ರಶಸ್ತ ಸ್ಥಳ: ಚೀನಾವನ್ನು ಹಿಂದಿಕ್ಕಿದ ಭಾರತ
ಗ್ರಾಹಕ ಹಣದುಬ್ಬರವು ವರ್ಷಾಂತ್ಯದ ವೇಳೆಗೆ 2% ನಷ್ಟು ತಲುಪುವ ನಿರೀಕ್ಷೆಯಿದೆ ಮತ್ತು "ದೀರ್ಘಕಾಲದ ಹಣದುಬ್ಬರದ ಅಪಾಯವು ಹೆಚ್ಚಿಲ್ಲ" ಎಂದು ಗೋಲ್ಡನ್ ಕ್ರೆಡಿಟ್ ರೇಟಿಂಗ್ ಇಂಟರ್ನ್ಯಾಷನಲ್‌ನ ಮುಖ್ಯ ಸ್ಥೂಲ ಆರ್ಥಿಕ ವಿಶ್ಲೇಷಕ ವಾಂಗ್ ಕ್ವಿಂಗ್ ಚೀನಾದ ಸುದ್ದಿ ಮಾಧ್ಯಮ ದಿ ಪೇಪರ್‌ಗೆ ತಿಳಿಸಿದ್ದಾರೆ.
ಭಾರತದಂತೆ ಚೀನಾದಲ್ಲೂ ಹಳ್ಳಿ ಯುವಕರ ವರಿಸೋ ಹೆಣ್ಣೇ ಸಿಕ್ತಿಲ್ಲ!