Asianet Suvarna News Asianet Suvarna News

ಪತ್ನಿ ಮಕ್ಕಳನ್ನು ಕೊಲ್ಲಲು ಹೋಗಿ ತಾನೇ 300 ಅಡಿ ಪ್ರಪಾತಕ್ಕೆ ಬಿದ್ದ NRI

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಐಷಾರಾಮಿ ಟೆಸ್ಲಾ ಕಾರಿನಲ್ಲಿ ಹೋಗುತ್ತಿದ್ದಾಗ ಉದ್ದೇಶಪೂರ್ವಕವಾಗಿಯೇ ಕಾರನ್ನು ರಭಸವಾಗಿ ಚಲಾಯಿಸಿ ಎತ್ತರದ ಪ್ರದೇಶದಿಂದ 250-300 ಅಡಿ ಕೆಳಗೆ ಬೀಳಿಸಿದ್ದಾನೆ.

Tesla car accident man went to kill his wife and children and fell into a 300 feet gorge in washington akb
Author
First Published Jan 5, 2023, 8:05 AM IST

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಐಷಾರಾಮಿ ಟೆಸ್ಲಾ ಕಾರಿನಲ್ಲಿ ಹೋಗುತ್ತಿದ್ದಾಗ ಉದ್ದೇಶಪೂರ್ವಕವಾಗಿಯೇ ಕಾರನ್ನು ರಭಸವಾಗಿ ಚಲಾಯಿಸಿ ಎತ್ತರದ ಪ್ರದೇಶದಿಂದ 250-300 ಅಡಿ ಕೆಳಗೆ ಬೀಳಿಸಿದ್ದಾನೆ. ಆದರೆ ಘಟನೆಯಲ್ಲಿ ಎಲ್ಲರೂ ಸುದೈವವಶಾತ್‌ ಪಾರಾಗಿದ್ದಾರೆ. ಇದೆ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕೊಲೆ ಯತ್ನ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಆರೋಪದಡಿ ಕಾರು ಚಾಲನೆ ಮಾಡುತ್ತಿದ್ದ ಧರ್ಮೇಶ್‌ ಎ ಪಟೇಲ್‌ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಬಳಿಕ ಕೂಡಲೇ ಕಾರಿನಲ್ಲಿದ್ದ 4 ವರ್ಷದ ಹೆಣ್ಣು ಮತ್ತು 9 ವರ್ಷದ ಗಂಡು ಮಕ್ಕಳು ಸೇರಿ ದಂಪತಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗಿದೆ. ಇಷ್ಟುಎತ್ತರದಿಂದ ಕಾರು ಬಿದ್ದರೂ ಪ್ರಾಣಾಪಾಯದಿಂದಾಗಿ ಪಾರಾಗಿದ್ದು ಆಶ್ಚರ್ಯವೆಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಧರ್ಮೇಶ್‌ ವರ್ತನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹಿಮ ಸರೋವರದ ಮೇಲೆ ಫೋಟೋ ತೆಗೆಯಲು ಹೋಗಿ ಮೂವರು NRIಗಳು ಸಾವು

Mumbai News: ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ಎನ್‌ಆರ್‌ಐ ಉದ್ಯಮಿ

Follow Us:
Download App:
  • android
  • ios