Mumbai News: ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ಎನ್‌ಆರ್‌ಐ ಉದ್ಯಮಿ
ತನ್ನ ತಾಯಿಯ ಜನ್ಮದಿನವನ್ನು ಆಚರಿಸಲು ಮುಂಬೈಗೆ ಬಂದಿದ್ದ ಎನ್‌ಆರ್‌ಐ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖಿನ್ನತೆಯಿಂದ (Depression) ಬಳಲುತ್ತಿದ್ದ 58 ವರ್ಷದ ಎನ್‌ಆರ್‌ಐ ಉದ್ಯಮಿ (NRI Businessman) ಆತ್ಮಹತ್ಯೆಯಿಂದ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ (Mumbai) ನಡೆದಿದೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿರುವ ತನ್ನ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನ 10 ನೇ ಮಹಡಿಯ ಬಾಲ್ಕನಿಯಿಂದ ಹಾರಿ ಸಾವಿಗೆ ಶರಣಾಗಿದ್ದಾರೆ ಎಂದು ಮುಂಬೈ ಪೊಲೀಸರು (Mumbai Police) ಪಿಟಿಐಗೆ ಮಾಹಿತಿ ನೀಡಿದ್ದಾರೆ. ಉದ್ಯಮಿ ವ್ಯವಹಾರದಲ್ಲಿ ಅನುಭವಿಸಿದ ನಷ್ಟದಿಂದಾಗಿ (Business Loss) ಖಿನ್ನತೆಗೆ ಒಳಗಾಗಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.
ತನ್ನ ತಾಯಿಯ ಜನ್ಮದಿನವನ್ನು (Birthday) ಆಚರಿಸಲು ಮುಂಬೈಗೆ ಬಂದಿದ್ದ ಎನ್‌ಆರ್‌ಐ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲಾಬಾದ ಐಷಾರಾಮಿ ಹೋಟೆಲ್‌ವೊಂದು ನಿರ್ವಹಿಸುವ ಐಷಾರಾಮಿ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ವ್ಯಕ್ತಿ ಕೆಳಕ್ಕೆ ಬಿದ್ದಿರುವುದು ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯಾಹ್ನ 10 ನೇ ಮಹಡಿಯ ಬಾಲ್ಕನಿಯಿಂದ ಜಂಪ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನು ಓದಿ: ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದ ನಂ. 1 ಶ್ರೀಮಂತ ಎಲಾನ್ ಮಸ್ಕ್..!
ಯುಎಇಯಲ್ಲಿ ತನ್ನ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ ನಂತರ ಉದ್ಯಮಿ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಈ ಮಧ್ಯೆ, ಅವರ ಕುಟುಂಬ ಸದಸ್ಯರು ಸಹ ಈ ಸಾವಿಗೆ ಇತರೆ ವ್ಯಕ್ತಿಗಳ ಕೈವಾಡ ಇರುವ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದೂ ಪೊಲೀಸ್ ಅಧಿಕಾರಿ ಹೇಳಿದರು. ಹಾಗೂ, ಆಕಸ್ಮಿಕ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.
ಉದ್ಯಮಿ ಸೈರಸ್ ಎಂಜಿನಿಯರ್ ಅವರ ಪುತ್ರ ಶಾರುಖ್ ಎಂಜಿನಿಯರ್ ದುಬೈನಲ್ಲಿ ಕಾರ್ಬೋನಿಕ್ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಇದು ಆಹಾರ ದರ್ಜೆಯ ಡ್ರೈ ಐಸ್ ಮತ್ತು ಇತರೆ ಸಂಬಂಧಿತ ಉತ್ಪನ್ನಗಳು ಹಾಗೂ ಸೇವೆಗಳನ್ನು ಪೂರೈಸುವ ವ್ಯವಹಾರ ಮಾಡುತ್ತಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಉದ್ಯಮಿ ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಸಹ ಅಗಲಿದ್ದಾರೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: Uttara Kannada: ಕಾಳಿ ನದಿಗೆ ಹಾರಿ ಜಿಲ್ಲಾ ಪಂಚಾಯತ್ ಉದ್ಯೋಗಿ ಆತ್ಮಹತ್ಯೆ
ತನ್ನ ತಾಯಿಯ ಜನ್ಮದಿನವನ್ನು ಆಚರಿಸಲು ಅವರು ನವೆಂಬರ್ 27 ರಂದು ಭಾರತಕ್ಕೆ ಬಂದಿದ್ದರು. ಇನ್ನು, ಅವರ ತಂದೆ ಸೈರಸ್ ಮತ್ತು ಸಹೋದರಿ ತೈನಾಜ್ ಮರ್ಚೆಂಟ್ ಅವರೊಂದಿಗಿನ ಪ್ರಾಥಮಿಕ ವಿಚಾರಣೆಯ ವೇಳೆ ಕಳೆದ ಕೆಲ ದಿನಗಳಿಂದ ಉದ್ಯಮಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಬಹಿರಂಗಪಡಿಸಿದೆ. ಒಂದೆರಡು ತಿಂಗಳುಗಳಿಂದ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದಾರೆ ಎಂದು ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸುದ್ದಿ ವೆಬ್‌ಸೈಟ್‌ವೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವೈದ್ಯ