ಹಿಮ ಸರೋವರದ ಮೇಲೆ ಫೋಟೋ ತೆಗೆಯಲು ಹೋಗಿ ಮೂವರು NRIಗಳು ಸಾವು

ಹಿಮದಿಂದ ಗಟ್ಟಿಯಾದ ಸರೋವರದ ಮೇಲೆ ಫೋಟೋ ತೆಗೆಯಲು ಹೋಗಿ ಸಾವನ್ನಪ್ಪಿದ್ದ ಇಂಡೋ ಅಮೆರಿಕನ್ ಜೋಡಿಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಈಗ ಅಮರಿಕಾದ ಅರಿಜೋನಾದಲ್ಲಿ ಮಕ್ಕಳ ಸುರಕ್ಷತಾ ವಿಭಾಗದ ವಶದಲ್ಲಿಡಲಾಗಿದೆ.

three NRI died in Arizona after they Drown In Frozen lake blizzard hit america akb

ಅರಿಜೋನಾ: ಹಿಮ ಚಂಡಮಾರುತದಿಂದ ತತ್ತರಿಸಿರುವ ಅಮೇರಿಕಾದಲ್ಲಿ ಈಗಾಗಲೇ ಈ ಹಿಮ ಚಂಡಮಾರುತಕ್ಕೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆಯಷ್ಟೇ ಮೂವರು ಅನಿವಾಸಿ ಭಾರತೀಯರು ಹಿಮದಿಂದ ಗಟ್ಟಿಯಾದ ಕೆರೆಯ ಮೇಲೆ ನಡೆದಾಡಲು ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ನಿನ್ನೆ ಸಾವನ್ನಪ್ಪಿದ ಇಂಡೋ ಅಮೆರಿಕನ್ ಜೋಡಿಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಈಗ ಅಮರಿಕಾದ ಅರಿಜೋನಾದಲ್ಲಿ ಮಕ್ಕಳ ಸುರಕ್ಷತಾ ವಿಭಾಗದ (child safety department) ವಶದಲ್ಲಿದ್ದಾರೆ. ಉತ್ತರ ಅಮೆರಿಕಾದಾದ್ಯಂತ ಈ ಹಿಮಪಾತದ ಈ ಚಂಡಮಾರುತ ಎಡೆಬಿಡದೇ ಬಾಧಿಸುತ್ತಿರುವುದರಿಂದ ಅಮೆರಿಕಾ ಹಾಗೂ ಕೆನಡಾದ ಮಿಲಿಯನ್‌ಗೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ. 

ಹೆಪ್ಪುಗಟ್ಟಿದ ಸರೋವರದ (frozen lake) ಮೇಲೆ ನಡೆದಾಡಲು ಹೋದಾಗ ಪದರ ಬಾಯ್ತೆರೆದು ಇಂಡೋ ಅಮೆರಿಕನ್ ದಂಪತಿ ಸಾವನ್ನಪ್ಪಿದ್ದರು. ಕ್ರಿಸ್‌ಮಸ್‌ನ (Christmas) ಮಾರನೇ ದಿನ ಈ ದುರಂತ ನಡೆದಿತ್ತು. 49 ವರ್ಷದ ನಾರಾಯಣ ಮುದ್ದಣ (Narayana Muddana) ಹಾಗೂ ಅವರ ಪತ್ನಿ ಹರಿತಾ ಮುದ್ದಣ್ಣ (Haritha Muddana) ಹಾಗೂ ಅವರ 47 ವರ್ಷದ ಸ್ನೇಹಿತ ಗೋಕುಲ್ ಮಡಿಸೆಟಿ (Gokul Mediseti) ಎಂಬುವವರು ಅರಿಜೋನಾದ ಕೊಕೊನಿನೊ ಕೌಂಟಿ ವೂಡ್ಸ್ ಕ್ಯಾನನ್ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಐಸ್ ಮೇಲೆ ನಡೆದಾಡುತ್ತಿದ್ದಾಗ ಅದು ಬಾಯ್ತೆರೆದ ಪರಿಣಾಮ ಅವರು ಮುಳುಗಿ ಸಾವನ್ನಪ್ಪಿದ್ದರು. 

ಚರ್ಮಕ್ಕೆ ಈ ಚಳಿ ತಾಗಿದರೆ 30 ನಿಮಿಷದಲ್ಲಿ ಹೆಪ್ಪುಗಟ್ಟುತ್ತೆ

ಈ ಮೂವರು ನೀರಿನಲ್ಲಿ ಮುಳುಗಿರುವ ವಿಚಾರ ತಿಳಿದು ರಕ್ಷಣಾ ಕಾರ್ಯಾಚರಣೆಗೆ ಬಂದಾಗ ಬಹಳ ತಡವಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸಿದವರು ಹರಿತಾರನ್ನು ನೀರಿನಿಂದ ಹೊರತೆಗೆದರಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನುಳಿದ ಇಬ್ಬರ ಶವ ಮರುದಿನ ಪತ್ತೆಯಾಗಿತ್ತು. ತಂದೆ ತಾಯಿ ಇಬ್ಬರು ದುರಂತದಲ್ಲಿ ಸಾವನ್ನಪ್ಪಿದ್ದರಿಂದ 7 ಹಾಗೂ 12 ವರ್ಷ ಪ್ರಾಯದ ಇಬ್ಬರು ಮಕ್ಕಳನ್ನು ಸುಪರ್ದಿಗೆ ಪಡೆಯಲು ಅರಿಜೋನಾ ಮಕ್ಕಳ ಸುರಕ್ಷತಾ ಇಲಾಖೆಯನ್ನು ಸ್ಥಳಕ್ಕೆ ಕರೆಸಲಾಗಿತ್ತು.  ಡಿಸೆಂಬರ್ 26 ರಂದು 6 ದೊಡ್ಡವರನ್ನು ಹಾಗೂ ಐವರು ಮಕ್ಕಳನ್ನು ಒಳಗೊಂಡ ಮೂರು ಕುಟುಂಬಗಳು ಈ ಹಿಮಚ್ಛದಿತ ಸ್ಥಳವನ್ನು ವೀಕ್ಷಿಸಿ ಖುಷಿ ಪಡುವ ಸಲುವಾಗಿ ತಮ್ಮ ಮನೆಯಿಂದ ಹೊರಟು ಬಂದಿದ್ದರು. ಈ ವೇಳೆ ಮಂಜು ನೋಡಿ ಮೈಮರೆತು ಮಂಜಿನ ಮೇಲೆ ನಿಂತು ಈ ಖುಷಿಯ ಕ್ಷಣಗಳ ಫೋಟೋ ತೆಗೆಯುತ್ತಿದ್ದ ವೇಳೆ ಮೂವರು ಐಸ್‌ನಿಂದ ಮೈನಸ್ 30 ಡಿಗ್ರಿಯ ನೀರಿನೊಳಗೆ ಬಿದ್ದಿದ್ದರು. 

ಮಂಜುಗಡ್ಡೆಯಾಗಿ ಬದಲಾದ ನಯಾಗಾರ ಫಾಲ್ಸ್: ಫೋಟೋಸ್ ವೈರಲ್

ಹೀಗೆ ಮಂಜಿನಲ್ಲಿ ಆಟವಾಡಲು ಬಂದವರೆಲ್ಲರೂ ಅನಿವಾಸಿ ಭಾರತೀಯರಾಗಿದ್ದು, ಮೃತರ ಪಕ್ಕದ ಮನೆಯಲ್ಲಿ ವಾಸಿಸುವ ಹಾಗೂ ಆ ಕುಟುಂಬಕ್ಕೆ ಆತ್ಮೀಯರಾಗಿರುವ ಕಿಶೋರ್ ಪಿಟ್ಟಲಾ (Kishore Pittala) ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೃತ ನಾರಾಯಣ್ ತುಂಬಾ ತಮಾಷೆಯ ವ್ಯಕ್ತಿಯಾಗಿದ್ದು, ತುಂಬಾ ಕರುಣೆಯುಳ್ಳ ವ್ಯಕ್ತಿಯೂ ಆಗಿದ್ದರು, ತನ್ನ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಹೇಳಿದ್ದಾರೆ. ನಾರಾಯಣ್ ಮುದ್ದನ್ ಅವರ ಕುಟುಂಬ ಈ ಸರೋವರಕ್ಕೆ ಭೇಟಿ ನೀಡುವ ಸಲುವಾಗಿ ನಮ್ಮನ್ನು ಆಮಂತ್ರಿಸಿದ್ದರು. ನಾವು ಈ ಸ್ಥಳಕ್ಕೆ ಹೋಗುತ್ತಿದ್ದೇವೆ ನೀವು ಬರುತ್ತೀರಾ ಎಂದು ಕೇಳಿದ್ದರು. ಆದರೆ ನನಗೆ ಬರಲಾಗಲಿಲ್ಲ. ಆದರೆ ಇತರ ಎರಡು ಕುಟುಂಬಗಳು ಇವರೊಂದಿಗೆ ಆಗಮಿಸಿದ್ದರು. ಅಲ್ಲದೇ ಇದೇ ಸಂದರ್ಭದಲ್ಲಿ ನಾರಾಯಣ್ ಪತ್ನಿ ಹರಿತಾ ಹುಟ್ಟುಹಬ್ಬವಿದ್ದು, ಇಲ್ಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದರು. ಒಟ್ಟು 11 ಜನ ಅಲ್ಲಿಗೆ ತೆರಳಿದ್ದರು, ಅದರಲ್ಲಿ ಎರಡು ಕುಟುಂಬಗಳು ತಮ್ಮ ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಅರಿಜೋನಾದ ತೆಲುಗು ಅಸೋಸಿಯೆಷನ್‌ನ (Arizona Telugu Association) ಅಧ್ಯಕ್ಷ ವೆಂಕಟ್ ಕೊಮಿನೇನಿ (Venkat Kommineni) ಹೇಳಿದ್ದಾರೆ. 

ಇಬ್ಬರು ಮಕ್ಕಳ ಪೋಷಕರಾದ ಹರಿತಾ (Haritha) ಹಾಗೂ ನಾರಾಯಣ್ (Narayana Rao) ತಮ್ಮ ಸ್ನೇಹಿತ ಗೋಕುಲ್ (Gokul) ಜೊತೆ ಐಸ್‌ ನೀರಿಗೆ ಬಿದ್ದಿದ್ದು, ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಗೋಕುಲ್ ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಒಟ್ಟಿನಲ್ಲಿ ಮಂಜಿನಲ್ಲಿ ಆಟವಾಡಲು ಹೋದವರು ಬಾರದ ಲೋಕಕ್ಕೆ ಹೋಗಿದ್ದು, ಇದರಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ.
 

Latest Videos
Follow Us:
Download App:
  • android
  • ios