ಭಯೋತ್ಪಾದಕರಿಂದ ಪಾಕಿಸ್ತಾನದ ಶಾಲೆಗೆ ಬೆಂಕಿ: 1400 ವಿದ್ಯಾರ್ಥಿಗಳು ಪಾರು
ಬೆಂಕಿ ತಗುಲಿರುವ ಕುರಿತು ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಮರದಿಂದಲೇ ಶಾಲೆ ನಿರ್ಮಿಸಿದ್ದ ಕಾರಣ ಅದು ಪೂರ್ಣ ಸುಟ್ಟು ಭಸ್ಮವಾಗಿದೆ.
ಪೇಶಾವರ್(ಮೇ.28): ಪರ್ವತ ಪ್ರದೇಶಗಳಿಂದ ಆವೃತವಾಗಿರುವ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹರಿಪುರ ಜಿಲ್ಲೆಯ ಸಿರಿಕೋಟ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಭಾರೀ ಅಗ್ನಿ ಅವಗಢ ಸಂಭವಿಸಿದ್ದು, ಅದೃಷ್ಟವಶಾತ್ ಶಾಲೆಯಲ್ಲಿದ್ದ ಎಲ್ಲ 1,400 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.
ಬೆಂಕಿ ತಗುಲಿರುವ ಕುರಿತು ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಮರದಿಂದಲೇ ಶಾಲೆ ನಿರ್ಮಿಸಿದ್ದ ಕಾರಣ ಅದು ಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಕ್ಕಿಯ ಒಂದು ಗರಿ ಚಿನ್ನಕ್ಕಿಂತ ದುಬಾರಿ, ಬರೋಬ್ಬರಿ 39 ಕೋಟಿ ರೂಗೆ ಹರಾಜು!
ಉಗ್ರ ಕೃತ್ಯ:
ಸಿರಿಕೋಟ್ ಬಾಲಕಿಯರ ಶಾಲೆಯಲ್ಲಿ ಅಗ್ನಿದುರಂತಕ್ಕೆ ಉಗ್ರರೇ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೊದಲಿಗೆ ಉಗ್ರರು ಶಾಲೆಯ ಕಾವಲುಗಾರನನ್ನು ಹೊಡೆದುರುಳಿಸಿ ಬಳಿಕ ಎರಡು ಕೊಠಡಿಗಳಿಗೆ ನುಗ್ಗಿ ಶಾರ್ಟ್ ಸರ್ಕೀಟ್ ಮಾಡಿರುವುದಾಗಿ ತಿಳಿಸಿವೆ. ಇದಕ್ಕೂ ಮೊದಲು ಮೇ 8ರಂದೂ ಸಹ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಉಗ್ರರು ಶಾಲೆಯೊಂದಕ್ಕೆ ಹಾನಿ ಮಾಡಿದ್ದರು.