ಈ ಹಕ್ಕಿಯ ಒಂದು ಗರಿ ಚಿನ್ನಕ್ಕಿಂತ ದುಬಾರಿ, ಬರೋಬ್ಬರಿ 39 ಕೋಟಿ ರೂಗೆ ಹರಾಜು!
ಹಕ್ಕಿಯ ಒಂದೇ ಒಂದು ಗರಿ ಬರೋಬ್ಬರಿ 39 ಕೋಟಿ ರೂಪಾಯಿಗೆ ಹರಾಜಾಗಿದೆ. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಹಕ್ಕಿಯ ಗರಿ ಅನ್ನೋ ದಾಖಲೆ ಬರೆದಿದೆ. ಅಷ್ಟಕ್ಕು ಈ ಗರಿ ಯಾವ ಹಕ್ಕಿದ್ದು?
ವೆಲ್ಲಿಂಗ್ಟನ್(ಮೇ.27) ಹಳೇಯ ಪಾರಂಪರಿಕ ವಸ್ತುಗಳು, ದಿಗ್ಗಜರು ಬಳಸಿದ ವಸ್ತುಗಳು ಸೇರಿದಂತೆ ಕೆಲವು ಐತಿಹಾಸಿಕ, ವಿಶೇಷ ವಸ್ತುಗಳು ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಆದರೆ ಇದೀಗ ಹಕ್ಕಿಯ ಗರಿಯೊಂದು ಇದೀಗ ಬರೋಬ್ಬರಿ 39 ಕೋಟಿ ರೂಪಾಯಿಗೆ ಹರಾಜಾಗಿದೆ. ಕೇವಲ ಒಂದೇ ಒಂದು ಗರಿ ಇಷ್ಟು ಮೊತ್ತಕ್ಕೆ ಹರಾಜಾಗಿದೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಹಕ್ಕಿ ಗರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟಕ್ಕೂ ಈ ಹರಾಜು ನಡೆದಿದ್ದು ನ್ಯೂಜಿಲೆಂಡ್‌ನಲ್ಲಿ.
ನ್ಯೂಜಿಲೆಂಡ್‌ನ ಹ್ಯೂಯೆ ಪಕ್ಷಿಯ ಗರಿ ಈ ಮೊತ್ತಕ್ಕೆ ಹರಾಜಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಪಕ್ಷಿ ಅಳಿವಿನಂಚಿನ ಪ್ರಬೇಧವಾಗಿದೆ. ನ್ಯೂಜಿಲೆಂಡ್‌ನಲ್ಲಿ ಈ ಪಕ್ಷಿ ಸದ್ಯ ಎಲ್ಲೂ ಕಾಣಿಸಿಲ್ಲ. ಸರಿಸುಮಾರು 1907ರ ಬಳಿಕ ಈ ಪಕ್ಷಿ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಈ ಹ್ಯೂಯೆ ಬರ್ಡ್ ನಶಿಸಿರುವ ಸಂತತಿ ಎಂದೂ ಪರಿಗಣಿಸಲಾಗುತ್ತಿದೆ. ಕೆಲ ಪರಿಸರ ಪ್ರೇಮಿಗಳ ಪ್ರಕಾರ ಬೆರಳಣಿಗೆ ಪಕ್ಷಿಗಳು ನ್ಯೂಜಿಲೆಂಡ್‌ನ ಕೆಲ ಕಾಡಿನಲ್ಲಿದೆ ಎಂದು ಹೇಳಲಾಗುತ್ತಿದೆ.
ಹಳೆ ವಸ್ತುವ ಎಸೀಬಿಡಿ, ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಹೀಗೆ!
19ನೇ ಶತಮಾನದಲ್ಲಿ ಎಲ್ಲೆಡೆ ಕಾಣಸಿಗುತ್ತಿದ್ದ ಈ ಪಕ್ಷಿ 20ನೇ ಶತಮಾನದಲ್ಲಿ ಅಳಿವಿನಂಚಿಗೆ ತಲುಪಿತ್ತು. 2010ರಲ್ಲಿ ಇದೇ ಹಕ್ಕಿಯ ಹರಿ ಹರಾಜಾಗಿತ್ತು. ಆದರೆ ಈ ಬಾರಿಯ ಹರಾಜು ಎಲ್ಲಾ ದಾಖಲೆ ಪುಡಿ ಮಾಡಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಈ ಒಂದು ಗರಿಯ ತೂಕ ಕೇವಲ 9 ಗ್ರಾಂ. ಅಂದರೆ ಒಂದು ಗ್ರಾಂ ಬೆಲೆ 4.29 ಲಕ್ಷ ರೂಪಾಯಿ. 1 ಗ್ರಾಂ ಚಿನ್ನದ ಇಂದಿನ ಮಾರುಕಟ್ಟೆ ಬೆಲೆ ಸರಿಸುಮಾರು 7,000 ರೂಪಾಯಿ.
ಹ್ಯೂಯೆ ಹಕ್ಕಿಯ ಹಿಂಬಾಗದ ಬಾಲದ ಗರಿ ಇದಾಗಿದೆ. 1,907ರಲ್ಲಿ ಕೊನೆಯದಾಗಿ ಈ ಪಕ್ಷಿ ಕಾಣಿಸಿಕೊಂಡಿದೆ. 1920ರಲ್ಲಿ ಈ ಹಕ್ಕಿ ಅಳವಿನಿಂಚಿಗೆ ತಲುಪಿತ್ತು. 1920 ತನಕ ಈ ಪಕ್ಷಿ ನ್ಯೂಜಿಲೆಂಡ್ ಕಾಡುಗಳಲ್ಲಿತ್ತು ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ. ಇದೀಗ ಈ ಹರಾಜು ಭಾರಿ ಸದ್ದು ಮಾಡುತ್ತಿದೆ.
ಇಷ್ಟೊಂದು ಮೊತ್ತ ನೀಡಿ ಹರಾಜಿನಲ್ಲಿ ಈ ಗರಿ ಖರೀದಿಸಿದ್ದು ಯಾರು ಅನ್ನೋ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಮುಖ್ಯವಾಗಿ ಈ ಗರಿ ಹರಾಜಿನಲ್ಲಿ ಖರೀದಿಸಲು ಭಾರಿ ಪೈಪೋಟಿ ನಡೆದಿತ್ತು. ಕಾರಣ ಚಿನ್ನ ಸೇರಿದಂತೆ ಇತರ ಯಾವುದೇ ವಸ್ತುವಿನ ಮೇಲಿನ ಹೂಡಿಕೆಗಿಂತ ಈ ಗರಿಯ ಮೇಲಿನ ಹೂಡಿಕೆ ಅತ್ಯುತ್ತಮ ಎಂದು ಉದ್ಯಮಿಗಳು ವಿಶ್ಲೇಷಿಸುತ್ತಾರೆ. ಪ್ರತಿ ವರ್ಷದಿಂದ ವರ್ಷಕ್ಕೆ ಈ ಗರಿಯ ಬೆಲೆಯಲ್ಲಿ 5 ರಿಂದ 10 ಕೋಟಿ ರೂಪಾಯಿ ಏರಿಕೆಯಾಗುತ್ತಿದೆ.
ಜಮ್ಮು ಕಾಶ್ಮೀರದ ಒಂದು ಮೊಟ್ಟೆಯ ಕಥೆ, ಬರೋಬ್ಬರಿ 2.26 ಲಕ್ಷ ರೂಗೆ ಮಾರಾಟ!