ಭಾರತೀಯ ಸೇನೆಯಿಂದ ರಿಜೆಕ್ಟ್ ಆಗಿದ್ದ ಯುವಕ ಉಕ್ರೇನ್‌ ಸೇನೆ ಸೇರಿದ

  • ಉಕ್ರೇನ್‌ ಸೇನೆ ಸೇರಿದ ತಮಿಳುನಾಡಿನ ವಿದ್ಯಾರ್ಥಿ
  • 2018ರಲ್ಲಿ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿ
  • ಕೊಯಂಬತ್ತೂರಿನ ಸಾಯಿನಿಕೇಶ್‌ ರವಿಚಂದ್ರನ್‌
Tamil Nadu student joins Ukraine forces to fight aganist Russia akb

ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ರಷ್ಯಾ ಮತ್ತಷ್ಟು ತೀವ್ರಗೊಳಿಸಿದೆ. ಈ ಮಧ್ಯೆ ತಮಿಳುನಾಡಿನ (Tamil Nadu) 21 ವರ್ಷದ ವಿದ್ಯಾರ್ಥಿಯೋರ್ವ ರಷ್ಯಾ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನ್‌ ಸೇನೆಯನ್ನು ಸೇರಿದ್ದಾನೆ. ತಮಿಳುನಾಡಿನ ಕೊಯಂಬತ್ತೂರು(Coimbatore) ಜಿಲ್ಲೆಯ ಸಾಯಿನಿಕೇಶ್‌ ರವಿಚಂದ್ರನ್‌ (sainikesh Ravichandran) ಎಂಬಾತನೇ ಉಕ್ರೇನ್‌ನ ಪ್ಯಾರಾ ಮಿಲಿಟರಿ ಪಡೆ ಸೇರಿದ ಯುವಕ. ಈ ವಿಚಾರ ತಿಳಿದ ಭಾರತದ ಅಧಿಕಾರಿಗಳು ಕೊಯಂಬತ್ತೂರಿನಲ್ಲಿರುವ ಆತನ ನಿವಾಸಕ್ಕೆ ಭೇಟಿ ನೀಡಿ ಆತನ ಪೋಷಕರನ್ನು ವಿಚಾರಿಸಿದ್ದಾರೆ. ಇದಕ್ಕೂ ಮೊದಲು ಈ ಯುವಕ ಭಾರತೀಯ ಸೇನೆ (Indian Army ) ಸೇರಲು ಅರ್ಜಿ ಸಲ್ಲಿಸಿದ್ದ ಆದರೆ ಆತನ ಅರ್ಜಿ ತಿರಸ್ಕರಿಸಲ್ಪಟ್ಟಿತ್ತು ಎಂಬುದು ಅಧಿಕಾರಿಗಳ ವಿಚಾರಣೆ ವೇಳೆ ತಿಳಿದು ಬಂದಿದೆ. 

2018 ರಲ್ಲಿ ಸಾಯಿನಿಕೇಶ್‌ ರವಿಚಂದ್ರನ್‌, ವ್ಯಾಸಂಗಕ್ಕಾಗಿ ಉಕ್ರೇನ್‌ಗೆ(Ukraine) ತೆರಳಿದ್ದ. ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ (Kharkiv) ರಾಷ್ಟ್ರೀಯ ಏರೋಸ್ಪೇಸ್‌ ವಿಶ್ವವಿದ್ಯಾನಿಲಯದಲ್ಲಿ(National Aerospace University) ಆತ ಶಿಕ್ಷಣ ಪಡೆಯುತ್ತಿದ್ದ. ಯುದ್ಧವಾಗದೇ ಎಲ್ಲವೂ ಸರಿಯಾಗಿಯೇ ಸಾಗಿದ್ದಲ್ಲಿ 2022ರ ಜುಲೈ(July) ವೇಳೆಗೆ ಈತನ ಕೋರ್ಸ್‌ ಪೂರ್ಣಗೊಳ್ಳುತ್ತಿತ್ತು. ಈ ಮಧ್ಯೆ ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ತೀವ್ರಗೊಂಡಿದ್ದು, ಸಾಯಿನಿಕೇಶ್‌ ಅವರ ಕುಟುಂಬ ಆತನ ಸಂಪರ್ಕವನ್ನು ಕಳೆದುಕೊಂಡಿತ್ತು. ನಂತರ ಆತನ ಕುಟುಂಬ ಭಾರತದ ರಾಯಭಾರ (Indian embassy) ಕಚೇರಿಯ ಸಹಾಯ ಯಾಚಿಸಿದ್ದು, ಅವರು ಆತನನ್ನು ಸಂಪರ್ಕಿಸಿದ ಬಳಿಕ ಮತ್ತೆ ಸಾಯಿನಿಕೇಶ್‌ ಪೋಷಕರ ಸಂಪರ್ಕಕ್ಕೆ ಸಿಕ್ಕಿದ್ದ. ಈ ವೇಳೆ ಆತ ತಾನು ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಪ್ಯಾರಾ ಮಿಲಿಟರಿ ಪೋರ್ಸ್‌ (paramilitary force) ಸೇರಿರುವುದಾಗಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ. 

Russia Ukraine war ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನೆಗಳಲ್ಲಿ ಹಬ್ಬದ ವಾತಾವರಣ

ಈ ಮಧ್ಯೆ  ರಷ್ಯಾ-ಉಕ್ರೇನ್‌ ಸಮರದ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋಮವಾರದಿಂದ ವಿಚಾರಣೆ ಆರಂಭವಾಗಿದೆ. ಆದರೆ ಕಲಾಪಕ್ಕೆ ರಷ್ಯಾ ಬಹಿಷ್ಕಾರ ಹಾಕಿದೆ. ತನ್ನ ಮೇಲಿನ ದಾಳಿಲಿ ತಡೆಗೆ ಆದೇಶ ನೀಡಬೇಕು ಎಂದು ಇತ್ತೀಚೆಗೆ ಉಕ್ರೇನ್‌ ಸರ್ಕಾರ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ ಹೋಗಿತ್ತು. ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು, ನರಮೇಧದ ಪರಿಕಲ್ಪನೆಯನ್ನೇ ತಿರುಚಿರುವ ರಷ್ಯಾವನ್ನು ದಾಳಿಗೆ ಹೊಣೆ ಮಾಡಬೇಕು. ತಕ್ಷಣವೇ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ರಷ್ಯಾಕ್ಕೆ ಸೂಚಿಸಬೇಕು. ತಕ್ಷಣವೇ ವಿಚಾರಣೆ ನಡೆಸಬೇಕು ಎಂದು ಉಕ್ರೇನ್‌ ಮನವಿ ಮಾಡಿತ್ತು.

Russia Ukraine war ಯುದ್ಧ ಕುರಿತ ಅಂತಾರಾಷ್ಟ್ರೀಯ ಕೋರ್ಟ್‌ ಕಲಾಪಕ್ಕೆ ರಷ್ಯಾ ಬಹಿಷ್ಕಾರ!

ಈ ನಡುವೆ ಭಾರತ ಸರ್ಕಾರ ಉಕ್ರೇನ್‌ನಲ್ಲಿರುವ ಅನೇಕ ಭಾರತೀಯರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದು, ಆಪರೇಷನ್‌ ಗಂಗಾ ಮೂಲಕ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಹಾಗೂ ಪ್ರಜೆಗಳನ್ನು ಉಕ್ರೇನ್‌ನಿಂದ ಭಾರತಕ್ಕೆ ಸ್ಥಳಾಂತರಿಸಿದೆ. ಪ್ರಯಾಣಿಕ ವಿಮಾನಗಳಲ್ಲದೇ ವಾಯುಸೇನೆಗೆ ಸೇರಿದ ವಿಮಾನಗಳನ್ನು ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿತ್ತು.

ಇತ್ತ ಉಕ್ರೇನಿನ ಸುಮಿಯಲ್ಲಿ ರಷ್ಯಾ ಬಾಂಬ್‌ ಶೆಲ್‌ ದಾಳಿಯನ್ನು ತೀವ್ರಗೊಳಿಸಿದ್ದು, ಅಲ್ಲಿ ಸಿಲುಕಿರುವ 700 ಕ್ಕೂ ಹೆಚ್ಚು ಭಾರತೀಯರ ಪರಿಸ್ಥಿತಿ ಅಯೋಮಯವಾಗಿದೆ. 'ನೀರು, ಆಹಾರ ಹಾಗೂ ವಿದ್ಯುತ್‌ ಪೂರೈಕೆಯಿಲ್ಲ. ಅಂಗಡಿಗಳು ಎಟಿಎಂ ಕಾರ್ಡುಗಳನ್ನು ಸ್ವೀಕರಿಸುತ್ತಿಲ್ಲ. ನಗದು ಹಣ ಪಡೆದುಕೊಳ್ಳಲು ಹೋದರೆ ಎಟಿಎಂಗಳಲ್ಲೇ ಹಣವಿಲ್ಲ. ಇದರಿಂದಾಗಿ ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸಲೂ ನಮಗೆ ಸಾಧ್ಯವಾಗುತ್ತಿಲ್ಲಎಂದು ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟವನ್ನು ತೋಡಿಕೊಂಡಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು 10 ದಿನಗಳಿಂದ ಕಾಯುತ್ತಿದ್ದೇವೆ. ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲಾಗುತ್ತದೆ ಎಂಬ ಭರವಸೆಯೂ ನಮಲ್ಲಿ ಉಳಿದಿಲ್ಲ ಎಂದು ವಿದ್ಯಾರ್ಥಿಗಳು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios