Asianet Suvarna News Asianet Suvarna News

ಆಫ್ಘಾನಿಸ್ತಾನ ಜೈಲಿನಂದ 100 ಉಗ್ರರ ಬಿಡುಗಡೆ; ಪಾಕಿಸ್ತಾನ ISI ಕೈವಾಡ!

  • ಆಫ್ಘಾನಿಸ್ತಾನದಲ್ಲಿ ಮುಂದುವರಿಯಿತು ತಾಲಿಬಾನ್ ಅಟ್ಟಹಾಸ
  • 100 ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ ಉಗ್ರರು ಜೈಲಿನಿಂದ ಬಿಡುಗಡೆ
  • ಅಲ್ ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಜೈಲಿನಿಂದ ಬಿಡುಗಡೆ
Taliban release more than hundred Tehrik-e-Taliban Pakistan terrorists from afghanistan jail ckm
Author
Bengaluru, First Published Aug 20, 2021, 9:03 PM IST

ಕಾಬೂಲ್(ಆ.20): ಆಫ್ಘಾನಿಸ್ತಾನ ಕೈವಶ ಮಾಡಿ ಚೆಂಡಾಡುತ್ತಿರುವ ತಾಲಿಬಾನ್ ಉಗ್ರರು ಕ್ರೌರ್ಯ ಮೆರೆಯುತ್ತಿದ್ದಾರೆ. ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ನಡುವೆ ತಾಲಿಬಾನ್ ಉಗ್ರರು ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಉಗ್ರರನ್ನು ಬಿಡುಗಡೆ ಮಾಡುತ್ತಲೇ ಇದೆ. ಇದೀಗ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ(ಟಿಟಿಪಿ), ಆಲ್ ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ 100 ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!

ತಾಲಿಬಾನ್ ಉಗ್ರರ ಈ ನಿರ್ಧಾರದ ಹಿಂದೆ ಪಾಕಿಸ್ತಾನ ಐಎಸ್ಐ ಹಾಗೂ ಉಗ್ರ ಸಂಘಟನೆಗಳ ಕೈವಾಡವಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಆಫ್ಘಾನಿಸ್ತಾನ ಸರ್ಕಾರ ಬಂಧಿಸಿ ಜೈಲಿನಲ್ಲಿಟ್ಟದ್ದ ಪಾಕಿಸ್ತಾನದ ಉಗ್ರರನ್ನು ತಾಲಿಬಾನ್ ಉಗ್ರರು ಬಿಡುಗಡೆ ಮಾಡಿದ್ದಾರೆ. 

ಇದೀಗ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಜೊತೆಗೆ ಇತರ ಉಗ್ರ ಸಂಘಟನೆ ಉಗ್ರರು ತುಂಬಿ ತುಳುಕುತ್ತಿದ್ದಾರೆ. ಬಂಧಿಯಾಗಿದ್ದ ಉಗ್ರರ ಬಿಡುಗಡೆಯಾಗಿರುವುದು ಪಾಕಿಸ್ತಾನ ಉಗ್ರರ ಕೈ ಬಲಪಡಿಸಿದೆ. ತಾಲಿಬಾನ್ ಬಿಡುಗಡೆಗೊಳಿಸಿದ ಉಗ್ರರ ಪೈಕಿ ಟಿಟಿಪಿ ಮುಖ್ಯಸ್ಥ ಮೌಲ್ವಿ ಫಾಕಿರ್ ಮೊಹಮ್ಮದ್ ಕೂಡ ಸೇರಿದ್ದಾರೆ. 

ತಾಲಿಬಾನ್ ತಾಂಡವ: ಅಫ್ಘಾನಿಸ್ತಾನದ ಹೆಣ್ಣು ಮಕ್ಕಳು ಏನಾದರು?

ಅಲ್ ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಹಲವು ಕಮಾಂಡರ್‌ಗಳನ್ನೂ ತಾಲಿಬಾನ್ ಜೈಲಿನಿಂದ ಬಿಡುಗಡೆ ಮಾಡಿದೆ. ಪಾಕಿಸ್ತಾನ ಐಎಸ್ಐ ಈ ಕಾರ್ಯತಂತ್ರದ ಹಿಂದಿದೆ. ಈಗಾಗಲೇ ಆಫ್ಘಾನಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ ತಾಲಿಬಾನ್ ಉಗ್ರರು, ಬುಲೆಟ್ ಪ್ರೂಫ್ ಕೊಂಡೊಯ್ಯಿದ್ದಾರೆ. ಈ ನಡೆಯ ಹಿಂದೆ ಪಾಕಿಸ್ತಾನ ಐಎಸ್ಐ ಕೈವಾಡವಿದೆ.

ಭಾರತಕ್ಕೆ ನೇರವಾಗಿ ಘಾಸಿಗೊಳಿಸಲು ಸಾಧ್ಯವಾಗದ ಕಾರಣ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಲು ಪಾಕಿಸ್ತಾನ ಐಎಸ್ಐ ತಾಲಿಬಾನ್ ಉಗ್ರರಿಗೆ ಸೂಚನೆ ನೀಡಿದೆ. ಇದರ ಪ್ರಕಾರ ತಾಲಿಬಾನ್ ಉಗ್ರರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಭಾರತದ ಶಕ್ತಿಯನ್ನು ಕುಗ್ಗಿಸುವ ಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ. ಇದೀಗ ಉಗ್ರರ ಬಿಡುಗಡೆ ಕೂಡ ಇದೇ ಪ್ಲಾನ್.

ಒಂದೆಡೆ ಶಾಂತಿ ಮಂತ್ರ, ಇನ್ನೊಂದೆಡೆ ಭೀಕರ ದಾಳಿ ತಾಲಿಬಾನ್‌ ರೌದ್ರಾವತಾರ ಶುರು!

ಬಿಡುಗಡೆಯಾದ ಉಗ್ರರನ್ನು ಭಾರತದೊಳಕ್ಕೆ ನುಸುಳಲು ಅವಕಾಶ ಮಾಡಿಕೊಡುವುದು ಪಾಕಿಸ್ತಾನ ಐಎಸ್ಐ ಪ್ಲಾನ್. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಾಲಿಬಾನ್‌ಗೆ ಪಾಕಿಸ್ತಾನ ಐಎಸ್‌ಐ ಹಣದ ನೆರವು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.

Follow Us:
Download App:
  • android
  • ios