ಅಮೆರಿಕದ ಹೊಸ ಆಮದು ಸುಂಕದಿಂದ ತಪ್ಪಿಸಿಕೊಳ್ಳಲು ಆ್ಯಪಲ್ ಕಂಪೆನಿಯು ಭಾರತದಿಂದ 5 ವಿಮಾನಗಳಷ್ಟು ಐಫೋನ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಟ್ರಂಪ್ ಭಾರತದ ಮೇಲೆ ಶೇ.26ರಷ್ಟು ತೆರಿಗೆ ವಿಧಿಸಿದ್ದಾರೆ.

ನವದೆಹಲಿ (ಏ.7): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾಡಿರುವ ಹೊಸ ಆಮದು ಸುಂಕ ಘೋಷಣೆಗಳು ಏ.9ರಿಂದ ಜಾರಿಗೆ ಬರುತ್ತಿರುವ ಕಾರಣ ಅಮೆರಿಕದಲ್ಲಿ ಐಫೋನ್‌ಗಳೂ ದುಬಾರಿ ಆಗಲಿವೆ. ಹೀಗಾಗಿ ಬೆಲೆ ಏರಿಕೆಯಿಂದ ಸದ್ಯದ ಮಟ್ಟಿಗೆ ಪಾರಾಗಲು ಐಫೋನ್‌ ಉತ್ಪಾದಿಸುವ ಆ್ಯಪಲ್‌ ಕಂಪನಿ, ಭಾರತದಿಂದ 5 ವಿಮಾನದಷ್ಟು ಐಫೋನ್‌ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರವಾನಿಸಿದೆ. ಅಂತೆಯೇ ಚಿನ್ನ ಹಾಗೂ ಮುತ್ತು-ರತ್ನಗಳು ಕೂಡ ಭಾರತದಿಂದ ಅಮೆರಿಕಕ್ಕೆ ಸಾಗಣೆ ಆಗಿವೆ ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದ ಮೇಲೆ ಟ್ರಂಪ್‌ ಶೇ.26, ಚೀನಾದ ಮೇಲೆ ಶೇ.52, ತೈವಾನ್‌ ಮೇಲೆ ಶೇ.32ರಷ್ಟು ತೆರಿಗೆ ಹೇರಿದ್ದಾರೆ. ಐಫೋನ್‌ ಅಮೆರಿಕ ಕಂಪನಿಯಾದರೂ . ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ತೈವಾನ್‌ ಹಾಗೂ ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ ಈ 3 ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ.

ಇದನ್ನೂ ಓದಿ: ಅಮೆರಿಕ-ಚೀನಾ ತೆರಿಗೆ ಯುದ್ಧ ಬೆನ್ನಲ್ಲೇ ಮಸ್ಕ್‌ನಿಂದ ಟ್ರಂಪ್‌ಗೆ ವ್ಯಾಪಾರ ಸಲಹೆ: ಏನಿದು ಹೊಸ ಪ್ಲಾನ್?

ಹೀಗಾಗಿ ಸದ್ಯದ ಮಟ್ಟಿಗೆ ಈ ಬೆಲೆ ಏರಿಕೆಯಿಂದ ಪಾರಾಗಲು ಆ್ಯಪಲ್‌ ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್‌ಗಳನ್ನು ಅಮೆರಿಕಕ್ಕೆ ಸಾಗಿಸಿದೆ. ಅವನ್ನು ಅಮೆರಿಕದಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಲಾಗುತ್ತದೆ. ಏ.9ರೊಳಗೆ ಸಾಗಿಸುವ ಉತ್ಪನ್ನಗಳಿಗೆ ಹಳೆಯ ತೆರಿಗೆಯೇ ಅನ್ವಯ ಆಗುವ ಕಾರಣ ಹೊಸ ತೆರಿಗೆಯಿಂದ ಸದ್ಯಕ್ಕೆ ಬಚಾವಾಗಬಹುದಾಗಿದೆ ಎಂಬುದು ಕಂಪನಿ ಲೆಕ್ಕಾಚಾರ.