ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಷಣ ಮಾಡುತ್ತಿದ್ದಾಗ, ಸುಮಾರು 100-200 ವಿದ್ಯಾರ್ಥಿಗಳು ಸಭಾಂಗಣದಿಂದ ಹೊರನಡೆದು ಪ್ರತಿಭಟಿಸಿದರು. 

ಸ್ಟ್ಯಾನ್‌ಫೋರ್ಡ್: ಗೂಗಲ್‌ ಸಿಇಒ ಸುಂದರ್‌ ಪಿಚೈ ಸ್ಟ್ಯಾನ್‌ಫೋರ್ಡ್ ವಿವಿಯ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದಾಗ ಸುಮಾರು 100-200 ವಿದ್ಯಾರ್ಥಿಗಳು ಸಭಾಂಗಣದಿಂದ ದಿಢೀರನೆ ಹೊರನಡೆದ ಘಟನೆ ನಡೆದಿದೆ. ಸ್ಟುಡೆಂಟ್ಸ್ ಫಾರ್ ಜಸ್ಟಿಸ್ ಇನ್ ಪ್ಯಾಲೆಸ್ಟೈನ್ ಹಾಗೂ ನೋ ಟೆಕ್ ಫಾರ್ ಅಪಾರ್ಥೈಡ್ ಎಂಬ ಗುಂಪಿನ ವಿದ್ಯಾರ್ಥಿಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದರು ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರದ ಜತೆ ಗೂಗಲ್‌ ಸಹಭಾಗಿತ್ವಕ್ಕೆ ವಿರೋಧ

ಪಿಚೈ ವಿದ್ಯಾರ್ಥಿಗಳನ್ನುದ್ದೇಶಿಸಿ ಎಐ, ತಂತ್ರಜ್ಞಾನ ಹಾಗೂ ವೈಯಕ್ತಿಕ ಜೀವನದ ಸಾಧನೆಗಳ ಬಗ್ಗೆ ಮಾತಾಡುತ್ತಿದ್ದರು. ಆಗ ಈ ಘಟನೆ ನಡೆದಿದ್ದು, ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಗೂಗಲ್ ಕಂಪನಿಯು ಇಸ್ರೇಲ್ ರಕ್ಷಣಾ ಪಡೆಗಳು, ಅಮೆರಿಕ ಗೃಹ ಸಚಿವಾಲಯ ಮತ್ತು ಇತರ ಸರ್ಕಾರಿ ಸಂಸ್ಥೆಗಳೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಸರ್ಕಾರಿ ಕೆಲಸಗಳಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವದ ವಿರುದ್ಧ ಅಮೆರಿಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ವಿದ್ಯಾರ್ಥಿಗಳು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ ಎನ್ನಲಾಗಿದೆ.

Scroll to load tweet…