Google AI Hub: ಅಮೆರಿಕವನ್ನೇ ಮೀರಿಸುತ್ತಾ ಭಾರತ? ಸುಂದರ್ ಪಿಚೈ ಮಾಸ್ಟರ್‌ಪ್ಲ್ಯಾನ್!
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಎಐ ಹಬ್ ಮತ್ತು 'ಇಂಡಿಯಾ-ಅಮೆರಿಕಾ ಕನೆಕ್ಟ್' ಯೋಜನೆಯನ್ನು ಘೋಷಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಗೂಗಲ್ ಸಿಇಒ ಸುಂದರ್ ಪಿಚೈ ಪ್ರಮುಖ ಘೋಷಣೆ
ಭಾರತದ ತಂತ್ರಜ್ಞಾನ ಬೆಳವಣಿಗೆಗೆ ಮತ್ತಷ್ಟು ಶಕ್ತಿ ತುಂಬಲು ಗೂಗಲ್ ಸಿಇಒ ಸುಂದರ್ ಪಿಚೈ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ದೆಹಲಿಯಲ್ಲಿ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026'ರಲ್ಲಿ ಮಾತನಾಡಿದ ಅವರು, 'ಕೃತಕ ಬುದ್ಧಿಮತ್ತೆ (AI) ನಮ್ಮ ಜೀವಿತಾವಧಿಯಲ್ಲಿ ದೊಡ್ಡ ಬದಲಾವಣೆ ತರುವ ವೇದಿಕೆಯಾಗಿದೆ' ಎಂದು ಹೇಳಿದರು. ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ಭಾಷಾ ವೈವಿಧ್ಯತೆ ಎಐ ಬೆಳವಣಿಗೆಗೆ ಬಲವಾದ ಅಡಿಪಾಯ ಹಾಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ-ಅಮೆರಿಕಾ ಕನೆಕ್ಟ್ ಯೋಜನೆ
ಈ ಶೃಂಗಸಭೆಯ ಪ್ರಮುಖಾಂಶವಾಗಿ, ಸುಂದರ್ ಪಿಚೈ 'ಇಂಡಿಯಾ-ಅಮೆರಿಕಾ ಕನೆಕ್ಟ್ ಇನಿಶಿಯೇಟಿವ್' ಎಂಬ ಹೊಸ ಯೋಜನೆಯನ್ನು ಪರಿಚಯಿಸಿದರು. ಇದರ ಮೂಲಕ ಅಮೆರಿಕ, ಭಾರತ ಮತ್ತು ದಕ್ಷಿಣ ಗೋಳಾರ್ಧದ ದೇಶಗಳ ನಡುವೆ ಎಐ ಸಂಪರ್ಕವನ್ನು ಸುಧಾರಿಸಲು ಹೊಸ ಸಬ್‌ಸೀ ಕೇಬಲ್‌ಗಳನ್ನು (ಸಮುದ್ರಾಂತರ್ಗತ ಕೇಬಲ್‌ಗಳು) ಅಳವಡಿಸಲಾಗುತ್ತದೆ.
ಡಿಜಿಟಲ್ ಮೂಲಸೌಕರ್ಯ ಬಲಪಡಿಸುವುದು
ಇದು ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದಲ್ಲದೆ, ಅತಿ ವೇಗದ ಡೇಟಾ ವರ್ಗಾವಣೆಗೂ ದಾರಿ ಮಾಡಿಕೊಡಲಿದೆ.
15 ಬಿಲಿಯನ್ ಡಾಲರ್ ಹೂಡಿಕೆಯಲ್ಲಿ AI ಹಬ್
ಯುವಕರಿಗೆ ಕೌಶಲ್ಯ ಅಭಿವೃದ್ಧಿ
ಭಾರತವು ಜಾಗತಿಕ ಎಐ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆ
ವೈಜ್ಞಾನಿಕ ಸಂಶೋಧನೆಯನ್ನು ವೇಗಗೊಳಿಸುವ ಉದ್ದೇಶದಿಂದ, ಗೂಗಲ್ 'ಎಐ ಫಾರ್ ಸೈನ್ಸ್ ಇಂಪ್ಯಾಕ್ಟ್ ಚಾಲೆಂಜ್' ಯೋಜನೆಯಡಿ 30 ಮಿಲಿಯನ್ ಡಾಲರ್ (ಸುಮಾರು 250 ಕೋಟಿ ರೂ.) ನಿಧಿಯನ್ನು ಮೀಸಲಿಟ್ಟಿದೆ. ಐಐಟಿಗಳಂತಹ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ಸೇರಿ ಈ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತದೆ. ಈ ಘೋಷಣೆಗಳ ಮೂಲಕ, ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಜಾಗತಿಕ ಎಐ ಕೇಂದ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

