Asianet Suvarna News Asianet Suvarna News

Sri Lanka Crisis ಕರ್ಫ್ಯೂ, ತುರ್ತುಪರಿಸ್ಥಿತಿ ಬೆನ್ನಲ್ಲೇ ಪರಿಸ್ಥಿತಿ ಗಂಭೀರ, ಶ್ರೀಲಂಕಾದಲ್ಲಿ ಲಾಕ್‌ಡೌನ್ ಘೋಷಣೆ!

  • ಶ್ರೀಲಂಕಾದಲ್ಲಿ ಹಿಂಸಾಚಾರ ನಿಯಂತ್ರಿಸಲು 36 ಗಂಟೆಗಳ ಕರ್ಫ್ಯೂ
  • ಹಿಂಸಾಚಾರ ತೀವ್ರ, ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆ
  • ಆಹಾರ, ನೀರು, ವಿದ್ಯುತ್ ಇಲ್ಲದೆ ಜನರ ಪರದಾಟ, ಸರ್ಕಾರದ ವಿರುದ್ಧ ಆಕ್ರೋಶ
Sri lanka Impose nationwide lockdown to control protest against the president for Economic crisis ckm
Author
Bengaluru, First Published Apr 2, 2022, 6:38 PM IST | Last Updated Apr 2, 2022, 6:38 PM IST

ಕೊಲೊಂಬೊ(ಏ.02): ಶ್ರೀಲಂಕಾದಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದು ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಪ್ರತಿ ದಿನ 13 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಆಹಾರ ಸೇರಿದಂತೆ ಯಾವುದೇ ಉತ್ಪನ್ನ ಆಮದು ಮಾಡಿಕೊಳ್ಳಲು ಲಂಕಾ ಸರ್ಕಾರದಲ್ಲಿ ನಯಾ ಪೈಸೆ ಉಳಿದಿಲ್ಲ. ಶ್ರೀಲಂಕಾ ಸರ್ಕಾರದ ವಿರುದ್ಧ ರೊಚ್ಚಿ ಗೆದ್ದಿರುವ ಪ್ರತಿಭಟನಾಕಾರರು ಹಿಂಸಾಚಾರ ತೀವ್ರಗೊಳಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಆದರೆ ನಿಯಂತ್ರಣಕ್ಕೆ ಬರದ ಕಾರಣ ಇದೀಗ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

36 ಗಂಟೆಗಳ ಕರ್ಫ್ಯೂ ವಿಧಿಸಿದ್ದ ಶ್ರೀಲಂಕಾ ಇದೀಗ ಶನಿವಾರದಿಂದ ಸೋಮವಾರ ಮುಂಜಾನೆ ವರೆಗೂ ದಶವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಿದೆ. ಲಂಕಾದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಿಂಸಾಚಾರ ನಿಯಂತ್ರಿಸಿ, ಪ್ರತಿಭಟನಾಕಾರರನ್ನು ಚದುರಿಸಲು ಇದೀಗ ಶ್ರೀಲಂಕಾ ಕೊರೋನಾ ಸಂದರ್ಭದಲ್ಲಿ ಬಳಕೆ ಮಾಡಿದ್ದ ಲಾಕ್‌ಡೌನ್ ಅಸ್ತ್ರ ಪ್ರಯೋಗಿಸಿದೆ.

Sri Lanka Economic Crisis ಅಧ್ಯಕ್ಷರ ಮನೆಯ ಮುಂದೆ ಹಿಂಸಾತ್ಮಕ ಪ್ರತಿಭಟನೆ, ದೇಶದಲ್ಲಿ ಡೀಸೆಲ್ ಖಾಲಿ!

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಎಪ್ರಿಲ್ 2 ರಿಂದ ಎಪ್ರಿಲ್ 4 ರ ಮುಂಜಾನೆ ವರೆಗೆ ಲಾಕ್‌ಡೌನ್ ಜಾರಿ ಮಾಡಿದೆ. ಯಾರು ಮನೆಯಿಂದ ಹೊರಬರುವಂತಿಲ್ಲ. ಶ್ರೀಲಂಕಾ ಈ ಬಾರಿ ಜಾರಿ ಮಾಡಿರುವ ಲಾಕ್‌ಡೌನ್ ಕೊರೋನಾಗಿಂತ ಕಠಿಣವಾಗಿದೆ. ಗುಂಪಾಗಿ ಇರುವಂತಿಲ್ಲ, ಏಕಾಂಗಿಯಾಗಿಯೂ ಪ್ರತಿಭಟನೆ ಮಾಡುವಂತಿಲ್ಲ. 

ಶ್ರೀಲಂಕಾದ ಪರಿಸ್ಥಿತಿಗೆ ಅಧ್ಯಶ್ರ ಗೊಟಬಯ ರಾಜಪಕ್ಸ ಕಾರಣ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದ್ದಾರೆ. ಕೊರೋನಾ ಹೊಡೆತ ಲಂಕಾದ ಮೇಲೆ ತೀವ್ರ ಪರಿಣಾಮ ನೀಡಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಲಂಕಾ ಸರ್ಕಾರದ ಅಸಮರ್ಥ ಆಡಳಿತ ಈ ಪರಿಸ್ಥಿತಿಗೆ ಕಾರಣ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

Sri Lanka: ದ್ವೀಪ ರಾಷ್ಟ್ರ ಲಂಕಾ ದಿವಾಳಿ: ಒಂದು ಹೊತ್ತಿನ ಊಟಕ್ಕೂ ಜನರ ಪರದಾಟ

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಜನಜೀವನ ಹೈರಾಣಾದ ಬೆನ್ನಲ್ಲೇ, ಜನರ ಆಕ್ರೋಶ ಭುಗಿಲೆದ್ದಿದ್ದು, ಗುರುವಾರ ದಿಢೀರನೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮನೆ ಮುಂದೆ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಇದೆ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಉದ್ರಿಕ್ತ ಜನತೆಯನ್ನು ಚದುರಿಸಲು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದಾರೆ. ಈ ಗಲಭೆಯಲ್ಲಿ ಐವರು ಪೊಲೀಸರಿಗೆ ಗಾಯವಾಗಿದೆ. ಘಟನೆ ಸಂಬಂಧ 45 ಜನರನ್ನು ಬಂಧಿಸಲಾಗಿದೆ.

ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಕೊರತೆಯಿಂದಾಗಿ ಅಗತ್ಯ ವಸ್ತುಗಳ ಭಾರೀ ಕೊರತೆ ಕಾಡುತ್ತಿದೆ. ದೇಶದಲ್ಲಿ ಅಡುಗೆ ಅನಿಲದ ಬೆಲೆ ಗಗನಕ್ಕೇರಿದ್ದು, ವಿದ್ಯುತ್‌ ಖರೀದಿಗಾಗಿಯೂ ಹಣವಿಲ್ಲದೇ ದಿನಕ್ಕೆ 13 ಗಂಟೆಗಳ ಕಾಲ ವಿದ್ಯುತ್‌ ಕಟ್‌ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲದೇ ಭಾರೀ ಸಮಸ್ಯೆಯುಂಟಾಗಿದೆ. ಇದರಿಂದ ರೊಚ್ಚಿಗೆದ್ದ ಜನತೆ ಬೀದಿಗಿಳಿದಿದ್ದು, ‘ಪೆಟ್ರೋಲ್‌ ಇಲ್ಲ, ಗ್ಯಾಸ್‌ ಇಲ್ಲ. ಹಾಲಿನ ಪುಡಿಯಿಲ್ಲ, ವಿದ್ಯುತ್‌ ಇಲ್ಲ, ಮನೆಗೆ ಹೋಗು ಗೋಟಾ’ ಎಂದು ಜನರು ಫಲಕ ಹಿಡಿದು ಪ್ರತಿಭಟಿಸಿದ್ದಾರೆ. ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಜೊತೆಗೆ ಕೊಲೊಂಬೊ-ಕ್ಯಾಂಡಿ ರಸ್ತೆಯನ್ನು ಪ್ರತಿಭಟನಾಕಾರರು ತಡೆಹಿಡಿದಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗುರುವಾರ ರಾತ್ರಿ ರಾಜಧಾನಿ ಕೊಲೊಂಬೊದ ಹಲವಾರು ಭಾಗಗಳಲ್ಲಿ ಕಫä್ರ್ಯ ವಿಧಿಸಲಾಗಿದೆ. ಹಿಂಸಾಚಾರದ ಕೃತ್ಯದ ಹಿಂದೆ ವಿಪಕ್ಷಗಳು ಬೆಂಬಲಿಸುತ್ತಿರುವ ಉಗ್ರವಾದಿ ಗುಂಪುಗಳ ಕೈವಾಡವಿದೆ ಎಂದು ರಾಷ್ಟಾ್ರಧ್ಯಕ್ಷರ ಮಾಧ್ಯಮ ವಿಭಾಗ ಆರೋಪಿಸಿದೆ.

Latest Videos
Follow Us:
Download App:
  • android
  • ios