ಹೈ ಹೀಲ್ಸ್ ಧರಿಸಿ 12.28 ಸೆಕೆಂಡ್‌ನಲ್ಲಿ 100 ಮೀಟರ್ ಓಡಿದ ಯುವಕನಿಗೆ ಗಿನ್ನೆಸ್ ಗರಿ
ಹೆಣ್ಣು ಮಕ್ಕಳ ಪಾಲಿನ ಸ್ಟೈಲ್ ಸ್ಟಂಟ್ ಎನಿಸಿರುವ ಈ ಹೈ ಹೀಲ್ಸ್ ಬಳಸಿ ಪುರುಷರೊಬ್ಬರು ದಾಖಲೆ ಬರೆದಿದ್ದಾರೆ. ಹೌದು ಪುರುಷರೊಬ್ಬರು ಹೈ ಹೀಲ್ಸ್ ಧರಿಸಿ ವೇಗವಾಗಿ 100 ಮೀಟರ್ ಓಡಿದ್ದು, ಈ ಮೂಲಕ ಗಿನ್ನೆಸ್ ಪುಟ ಸೇರಿದ್ದಾರೆ.
ಹೈ ಹೀಲ್ಸ್ ಏನಿದ್ರು ಹೆಣ್ಣು ಮಕ್ಕಳಿಗೆ ಸೇರಿದ್ದು ಎಂಬುದು ಹೆಣ್ಣು ಮಕ್ಕಳಾದಿಯಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಹೆಣ್ಣಿನ ನಡಿಗೆಯ ಸೌಂದರ್ಯವನ್ನು ಹೆಚ್ಚಿಸುವ ಈ ಹೈ ಹೀಲ್ಸ್ ಸ್ವಲ್ಪ ವಾಲಿದರೂ ಮುಗ್ಗರಿಸುವುದು ಪಕ್ಕ, ಮಾಡೆಲ್‌ಗಳ ಪಾಲಿನ ಅಚ್ಚುಮೆಚ್ಚಿನ ಪಾದರಕ್ಷೆ ಎನಿಸಿದ ಈ ಹೈ ಹೀಲ್ಸ್‌ಗಳನ್ನು ಧರಿಸಿ ಸ್ಟೇಜ್‌ನಲ್ಲೇ ಕ್ಯಾಟ್‌ವಾಕ್ ಮಾಡುತ್ತಲೇ ಮುಗ್ಗರಿಸಿದವರಿದ್ದಾರೆ. ಇದನ್ನು ಹಾಕಿ ನಡೆಯುವುದಕ್ಕೆ ಅಷ್ಟೇ ನಾಜೂಕುತನ ಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಬಿದ್ದು ಹಲ್ಲು ಮುರಿಯುವುದು ಗ್ಯಾರಂಟಿ. ಆದರೆ ಹೆಣ್ಣು ಮಕ್ಕಳ ಪಾಲಿನ ಸ್ಟೈಲ್ ಸ್ಟಂಟ್ ಎನಿಸಿರುವ ಈ ಹೈ ಹೀಲ್ಸ್ ಬಳಸಿ ಪುರುಷರೊಬ್ಬರು ದಾಖಲೆ ಬರೆದಿದ್ದಾರೆ. ಹೌದು ಪುರುಷರೊಬ್ಬರು ಹೈ ಹೀಲ್ಸ್ ಧರಿಸಿ ವೇಗವಾಗಿ 100 ಮೀಟರ್ ಓಡಿದ್ದು, ಈ ಮೂಲಕ ಗಿನ್ನೆಸ್ ಪುಟ ಸೇರಿದ್ದಾರೆ.
ನಡೆಯುವುದಕ್ಕೆ ಕಷ್ಟವೆನಿಸುವ ಈ ಹೈ ಹೀಲ್ಸ್ ಧರಿಸಿ ಪುರುಷರೊಬ್ಬರು ಓಡಿ ಸಾಧನೆ ಮಾಡಿದ್ದು ಇದು ಹೆಣ್ಣು ಮಕ್ಕಳನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಸ್ಪೇನ್‌ನ ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೊಡ್ರಿಗಸ್ ಎಂಬುವವರೇ ಹೀಗೆ ಹೈ ಹೀಲ್ಸ್ ಧರಿಸಿ ಓಡುವ ಮೂಲಕ ಬೇರೆಯವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದವರು. ಅವರು ಹೈ ಹೀಲ್ಸ್ ಧರಿಸಿ 100 ಮೀಟರ್ ಓಟವನ್ನು 12.28 ಸೆಕೆಂಡ್‌ನಲ್ಲಿ ಮುಗಿಸಿದ್ದಾರೆ. ಈ ಸಾಧನೆ ಮಾಡುವುದಕ್ಕಾಗಿ ಲೋಪೆಜ್ ರೊಡ್ರಿಗಸ್ 2.76 ಇಂಚು ಉದ್ದದ ಹೈ ಹೀಲ್ ಪಾದರಕ್ಷೆಯನ್ನು ಧರಿಸಿದ್ದರು.
Why This Kolaveri Di: ಅರ್ಥ ಗೊತ್ತಿಲ್ದೇ 40 ಕೋಟಿಗೂ ಅಧಿಕ ಜನ ವೀಕ್ಷಿಸಿ ದಾಖಲೆ ಬರೆಯಿತು ಈ ಹಾಡು!
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ (Guinness World Records) ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೋಪೆಜ್ ರೊಡ್ರಿಗಸ್ ಹೈ ಹೀಲ್ಸ್ ಧರಿಸಿ ಓಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 12.82 ಸೆಕೆಂಡ್‌ನಲ್ಲಿ ಹೈ ಹೀಲ್ಸ್‌ನಲ್ಲಿ ಅತ್ಯಂತ ವೇಗದ 100 ಮೀಟರ್ ಓಟ ಪುರುಷನಿಂದ ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೋಡ್ರಿಗಸ್ ಎಂದು ಬರೆದಿದ್ದಾರೆ. ರೋಡ್ರಿಗಸ್ ( Christian Roberto Lopez Rodriguez) ಅವರು ಒಲಿಂಪಿಕ್ಸ್‌ನಲ್ಲಿ ಅತ್ಯಂತ ವೇಗವಾಗಿ 100 ಮೀಟರ್ ಓಡಿ ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ (Usain Bolt) ಅವರಿಗಿಂತ ಕೇವಲ 3.2 ಸೆಕೆಂಡುಗಳಷ್ಟೇ ವಿಳಂಬವಾಗಿ ಈ ಓಟ ಓಡಿ ಈ ಸಾಧನೆ ಮಾಡಿದ್ದಾರೆ. ಈ ಓಟಕ್ಕಾಗಿ ತಾನು ಸಿದ್ದಗೊಂಡ ರೀತಿಯನ್ನು ವಿವರಿಸಿದ ರೋಡ್ರಿಗಸ್, ಇದಕ್ಕಾಗಿ ನನ್ನ ತಯಾರಿ ಬಹಳ ನಿರ್ದಿಷ್ಟ ಹಾಗೂ ಸಮಗ್ರವಾಗಿತ್ತು.
ಅತ್ಯಂತ ವೇಗವಾಗಿ ಹೈ ಹೀಲ್ಸ್ ಧರಿಸಿ ಓಡುವುದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ಸ್ಪೇನ್‌ನಲ್ಲಿ (Spain) ಈ ರೀತಿಯ ಓಟದ ಸ್ಪರ್ಧೆಗಳಿವೆ. ಅವು ಯಾವಾಗಲೂ ನನಗೆ ಇಷ್ಟವಾಗುತ್ತವೆ ಎಂದು ರೋಡ್ರಿಗಸ್ ಹೇಳಿದ್ದಾರೆ. 2019 ರಲ್ಲಿ ಇದೇ ರೀತಿಯ ಸಾಧನೆಯನ್ನು ಜರ್ಮನಿಯ (Germany) ಆಂಡ್ರೆ ಓರ್ಟೋಲ್ಫ್ (Andre Ortolf) ಅವರು ನಿರ್ಮಿಸಿದ್ದರು. 14.02 ಸೆಕೆಂಡುಗಳಲ್ಲಿ ಅವವರು 100 ಮೀಟರ್ ಓಟ ಮುಗಿಸಿದ್ದರು. ಅವರ ಈ ಸಾಧನೆಯನ್ನು ಈಗ ರೋಡ್ರಿಗಸ್ ಬ್ರೇಕ್ ಮಾಡಿದ್ದಾರೆ. ರೊಡ್ರಿಗಸ್ ಅವರು ದಾಖಲೆ ಬ್ರೇಕ್ ಮಾಡಿದ ಸರಣಿ ಬ್ರೇಕರ್ ಆಗಿದ್ದು, ಈ ಸಾಧನೆ ಜೊತೆ ಅವರ ಹೆಸರಲ್ಲಿ ಬೇರೆ ಗಿನ್ನೆಸ್ ರೆಕಾರ್ಡ್‌ಗಳು ಇವೆ. ಒಂದು ಗಂಟೆಯಲ್ಲಿ ಅತೀಹೆಚ್ಚು ಜಂಪಿಂಗ್ ಜಾಕ್ ಮಾಡಿದ ಸಾಧನೆಯೂ ಅವರ ಹೆಸರಿನಲ್ಲಿದೆ.
15 ಗಂಟೆ 22 ನಿಮಿಷ: 286 ಮೆಟ್ರೋ ಸ್ಟೇಷನ್‌ಗೆ ಭೇಟಿ ನೀಡಿ ದಾಖಲೆ ನಿರ್ಮಿಸಿದ ಯುವಕ