Asianet Suvarna News Asianet Suvarna News

ಸೂಪರ್‌ಮಾರ್ಕೆಟ್‌ನಲ್ಲಿ ಬ್ರೆಡ್ ನಡುವೆ ಅಂಡರ್‌ವೇರ್ ಇಟ್ಟ ಇನ್‌ಫ್ಲುಯೆನ್ಸರ್‌ ವಿರುದ್ಧ ಆಕ್ರೋಶ!

ಸೂಪರ್ ಮಾರ್ಕೆಟ್‌ಗೆ ಕ್ಯಾಮೆರಾ ಮೂಲಕ ತೆರಳಿದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ತನ್ನ ಅಂಡರ್‌ವೇರನ್ನು ಬ್ರೆಡ್ ನಡುವೆ ಇಟ್ಟು ತೆರಳಿದ್ದಾಳೆ. ಈಕೆಯ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Social media influencer place under garments at breads rack in mercadona supermarket ckm
Author
First Published Aug 19, 2024, 9:11 PM IST | Last Updated Aug 19, 2024, 9:11 PM IST

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು, ಲೈಕ್ಸ್, ಹೆಚ್ಚು ಕಮೆಂಟ್ಸ್ ಪಡೆಯಲು ಹುಚ್ಚು ಸಾಹಸಕ್ಕೆ ಕೈಹಾಕುತ್ತಾರೆ. ಹೀಗೆ ಹಲವು ಬಾರಿ ಕೈ ಸುಟ್ಟುಕೊಂಡಿದ್ದಾರೆ.ಇದೀಗ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೂಪರ್ ಮಾರ್ಕೆಟ್‌ಗೆ ತೆರಳಿ ತನ್ನ ಅಂಡರ್‌ವೇರನ್ನು ಮಾರ್ಕೆಟ್‌ನಲ್ಲಿ ಇಟ್ಟಿರುವ ಬ್ರೇಡ್ ನಡುವೆ ಇಟ್ಟು ತೆರಳಿದ್ದಾಳೆ. ಈ ವಿಡಿಯೋವನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಆದರೆ ಈಕೆಯ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಎಲ್ಲಾ ಸೂಪರ್ ಮಾರ್ಕೆಟ್, ಮಾಲ್‌ಗಳಿಂದ ಈಕೆಯನ್ನು ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

ಬ್ರಿಟಿಷ್ ಇನ್‌ಫ್ಲುಯೆನ್ಸರ್ ಚ್ಲೊಯೆ ಲೊಪೆಜ್ ಈ ತಲೆತಿರುಕ ಐಡಿಯಾ ಮಾಡಿ ಆಕ್ರೋಶಕ್ಕೆ ತುತ್ತಾಗಿದ್ದಾಳೆ. ಸ್ಪೇನ್‌ನ ಮರ್ಸಡೋನಾ ಸೂಪರ್ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದೆ. ಲಾ ರೇಜನ್ ಅನ್ನೋ ಸ್ಪಾನಿಶ್ ಸುದ್ದಿ ಸಂಸ್ಥೆ ಈ ವಿಡಿಯೋ ಬಿತ್ತರಿಸಿದೆ. ಲೊಪೆಜ್ ಈ ರೀತಿಯ ವಿಡಿಯೋಗಳ ಮೂಲಕವೇ ಜನಪ್ರಿಯಗೊಂಡಿದ್ದಾಳೆ. ಇದೀಗ ಹೊಸ ಚಾಲೆಂಜ್ ಎಂದು ಒಳ ಉಡುಪುಗಳನ್ನು ಕಳಚಿ ಬ್ರೆಡ್ ನಡುವೆ ಇಟ್ಟಿದ್ದಾಳೆ.

 ಸೆಲ್ಫಿ ಕ್ಲಿಕ್ಕಿಸಿದ ವಿಶೇಷಚೇತನನ ಪೊರ್ಶೆಯಲ್ಲಿ ಸುತ್ತಾಡಿಸಿದ ಇನ್‌ಫ್ಲುಯೆನ್ಸರ್, ಕಣ್ಣೀರಿಟ್ಟ ಯುವಕ!

ಸೂಪರ್ ಮಾರ್ಕೆಟ್‌ಗೆ ವಸ್ತುಗಳ ಖರೀದಿ ಸೋಗಿನಲ್ಲಿ ಬಂದ ಈಕೆ, ಟ್ರೊಲಿ ಹಿಡಿದು ವಸ್ತುಗಳ ಖರೀದಿಗೆ ಮುಂದಾಗಿದ್ದಾಳೆ. ಬ್ರೆಡ್ ಸೆಕ್ಷನ್‌ಗೆ ಬಂದ ಈಕೆ, ನೇರವಾಗಿ ಒಳ ಉಡುಪು ಕಳಚಿ ಬ್ರೆಡ್ ನಡುವೆ ಇಟ್ಟಿದ್ದಾಳೆ. ಬಳಿಕ ನಗು ಮುಖದೊಂದಿಗೆ ತೆರಳಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದೆ. ಹಲವರು ಈಕೆಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

 

 

ಈ ವಿಡಿಯೋಗೆ ಹಲವರು ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನೆಂದು ಸೂಪರ್ ಮಾರ್ಕೆಟ್‌ನಲ್ಲಿ ಬ್ರೆಡ್ ಖರೀದಿಸುವುದಿಲ್ಲ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇನ್‌ಫ್ಲುಯೆನ್ಸರ್ ಈ ರೀತಿ ಹಲವು ಕಡೆಗಳಲ್ಲಿ ಮಾಡುತ್ತಾರೆ.ಹೀಗಾಗಿ ಈ ರೀತಿಯ ಹುಚ್ಚಾಟಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಬ್ರಿಟಿಷ್ ಮಹಿಳೆ ಸ್ಪೇನ್‌ಗೆ ಬಂದು ಇಲ್ಲಿನ ಆಹಾರವನ್ನೇ ಹಾಳು ಮಾಡಿದ್ದಾಳೆ. ಸೋಶಿಯಲ್ ಮೀಡಿಯಾ  ಇನ್‌ಫ್ಲುಯೆನ್ಸರ್ ಹೆಸರಿನಲ್ಲಿ ಈ ರೀತಿ ನಡೆಗೆ ಅವಕಾಶ ನೀಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹೋರಾಟಗಳು ಆರಂಭಗೊಂಡಿದೆ. ಇದೇ ರೀತಿ ಹಲವು ಘಟನೆಗಳನ್ನು ನೆಟ್ಟಿಗರು ಮೆಲುಕು ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆ ಹೆಚ್ಚಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಗನೊಂದಿಗೆ ಇನ್‌ಫ್ಲುಯೆನ್ಸರ್ ವಿಡಿಯೋ ಶೂಟ್‌ಗೆ ಭಾರಿ ಟೀಕೆ ಬೆನ್ನಲ್ಲೇ ಕಮೆಂಟ್ಸ್ ಸೆಕ್ಷನ್ ಆಫ್!
 

Latest Videos
Follow Us:
Download App:
  • android
  • ios