ಪಾರ್ಕ್ ಮಾಡಿದ್ದ ಪೊರ್ಶೆ ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸತ್ತಿದ್ದ ವಿಶೇಷ ಚೇತನನ್ನು ಅದೇ ಕಾರಿನಲ್ಲಿ ಇನ್‌ಫ್ಲುಯೆನ್ಸರ್ ಸುತ್ತಾಡಿಸಿದ್ದಾನೆ. ಯುವಕನ ಸಂಭ್ರಮ ಹೇಳತೀರದು. ಹೃದಯಸ್ಪರ್ಶಿ ವಿಡಿಯೋ ಎಂತವರ ಮನಸ್ಸು ಹದಗೊಳಿಸುತ್ತದೆ. 

ಐಷಾರಾಮಿ ಕಾರು, ಸ್ಪೋರ್ಟ್ಸ್ ಕಾರು ಎಲ್ಲರ ಕನಸು. ಆದರೆ ಕೆಲವರಿಗೆ ಮಾತ್ರ ಈ ಕನಸು ನನಸಾಗುತ್ತದೆ. ಇದರ ನಡುವೆ ತಮ್ಮ ಡ್ರೀಮ್ ಕಾರು ಕಂಡಾಗ ಫೋಟೋ ಕ್ಲಿಕ್ಕಿಸುವುದು, ಸೆಲ್ಫಿ ತೆಗೆಯುವುದು ಸಾಮಾನ್ಯ. ಹೀಗೆ ವಿಶೇಷ ಚೇತನ ಯುವಕನೊಬ್ಬ ಪಾರ್ಕಿಂಗ್ ಮಾಡಿದ್ದ ಪೊರ್ಶೆ ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದ. ಈ ವೇಳೆ ಮಾಲೀಕನ ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಆತನ ಕರೆಯಿಸಿ ಕಾರಿನ ಮುಂದೆ ಫೋಟೋ ತೆಗೆದುಕೊಟ್ಟಿದ್ದಾನೆ. ಬಳಿಕ ಪೊರ್ಶೆ ಕಾರಿನಲ್ಲಿ ಸುತ್ತಾಡಿಸಿ ಉಡುಗೊರೆ ನೀಡಿದ ಹೃಯಸ್ಪರ್ಶಿ ವಿಡಿಯೋ ಎಲ್ಲರಿಗೂ ಹೊಸ ಉತ್ಸಾಹ ನೀಡುತ್ತಿದೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಡೆಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿ, ವಿಶೇಷ ಚೇತನ ಯುವಕ ಹಳದಿ ಪೊರ್ಶೆ ಕಾರಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾನೆ. ಪಾರ್ಕ್ ಮಾಡಿದ ಕಾರಿಗೆ ಒರಗಿ ಫೋಟೋ ತೆಗೆದಿದ್ದಾನೆ. ಇದೇ ವೇಳೆ ಇನ್‌ಫ್ಲುಯೆನ್ಸರ್ ಆಗಮಿಸಿದ್ದಾನೆ. ಮಾಲೀಕ ಆಗಮಿಸುತ್ತಿದ್ದಂತೆ ಯುವಕ ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವಕನ ಕರೆದ ಮಾಲೀಕ, ಪ್ರೀತಿಯಿಂದ ಮಾತನಾಡಿಸಿದ್ದಾನೆ.

ಕಚೇರಿ ಬಳಿ ಉದ್ಯೋಗಿ ಕಾಲು ಹಿಡಿದು ಅಂಗಲಾಚಿದ ಬೆಕ್ಕಿನ ಮರಿಗೆ ಆಶ್ರಯ, ಹೃದಯಸ್ವರ್ಶಿ ವಿಡಿಯೋ!

ಬಳಿಕ ಆತನ ಫೋನ್‌ನಲ್ಲಿ ತೆಗೆದ ಸೆಲ್ಫಿ ಪರಿಶೀಲಿಸಿದ್ದಾನೆ. ಇದಾದ ಬಳಿಕ ಪೊರ್ಶೆ ಕಾರಿನ ಮುಂದೆ ನಿಲ್ಲುವಂತೆ ಸೂಚಿಸಿದ್ದಾನೆ. ನಾನು ಫೋಟೋ ತೆಗೆದುಕೊಡುತ್ತೇನೆ ಎಂದು ಯುವಕನ ಕಾರಿನ ಮುಂದೆ ನಿಲ್ಲಿಸಿ ಫೋಟೋ ತೆಗೆದಿದ್ದಾನೆ. ವಿಶೇಷ ಚೇತನ ಯುವಕನ ಖಷಿಗೆ ಪಾರವೇ ಇರಲಿಲ್ಲ. ಬಳಿಕ ಯುವಕನ ಕರೆದು ಪೊರ್ಶೆ ಕಾರಿನ ಒಳಗೆ ಕೂರಿಸಿ ಫೋಟೋ ತೆಗೆಸಿದ್ದಾನೆ. ಇದಾದ ಬಳಿಕ ಯುವಕನನ್ನು ಒಂದು ರೌಂಡ್ ಪೊರ್ಶೆ ಕಾರಿನಲ್ಲಿ ಕೂರಿಸಿ ಸುತ್ತಾಡಿಸಿದ್ದಾನೆ.

View post on Instagram

ಸುತ್ತಾಡಿಸುವಾಗ ಯುವಕನ ಸಂಭ್ರಮಿಸಿದ್ದಾನೆ. ಜೊತೆಗೆ ಸಂತೋಷದಿಂದ ಕಣ್ಮೀರಿಟ್ಟಿದ್ದಾನೆ. ಇದನ್ನು ಗಮನಿಸಿದ ಇನ್‌ಪ್ಲುಯೆನ್ಸರ್ ಕಣ್ಣಾಲಿಗಳು ತೇವಗೊಂಡಿತ್ತು. ಒಂದಷ್ಟು ರೌಂಡ್ ಸುತ್ತಿದ ಇನ್‌ಪ್ಲುಯೆನ್ಸರ್ ಕೆಲ ಉಡುಗೊರೆಗಳನ್ನು ಯುವಕನಿಗೆ ನೀಡಿದ್ದಾನೆ. ಬಳಿಕ ವಿಶೇಷ ಚೇತನ ಯುವಕನನ್ನು ಮತ್ತೆ ಅದೇ ಸ್ಥಳಕ್ಕೆ ತಂದು ಬಿಟ್ಟಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಇದೀಗ ಹಲವರ ಮನ ತಣಿಸಿದೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಯುವಕನ ಸುತ್ತಾಡಿಸಿದ ನಿಮಗೆ ಧನ್ಯವಾದ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್‌ಫ್ಲುಯೆನ್ಸರ್ ನಡೆ ಮೆಚ್ಚುವಂತದ್ದ ಎಂದು ಪ್ರತಿಕ್ರಿಯಿಸಿದ್ದಾರೆ.

ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!