ಕಡಲ ಸಿಂಹದ ಮೋಜು ಮಸ್ತಿ ಸಮುದ್ರದಿಂದ ಮೇಲೇರಿ ಬಂದು ಸೂರ್ಯಸ್ನಾನ ಕಡಲ ಸಿಂಹದ ಅವತಾರ ನೋಡಿ ದಂಗಾದ ಪ್ರವಾಸಿಗರು

ಸದಾ ಕೆಲಸದಲ್ಲಿ ಬ್ಯುಸಿಯಾಗಿರುವ ಜನ ರಜಾ ದಿನಗಳನ್ನು ಎಂಜಾಯ್‌ ಮಾಡಲು ಸಮುದ್ರ ತೀರ, ಬೀಚ್‌ಗಳು ಪ್ರವಾಸಿ ತಾಣಗಳಿಗೆ ಹೋಗುವುದು. ಅಲ್ಲಿ ಕಾಲ ಮೇಲೆ ಕಾಲು ಹಾಕಿ ಮಲಗಿಕೊಂಡು ಸೂರ್ಯಸ್ನಾನ ಮಾಡುವುದು ಸಾಮಾನ್ಯ. ಆದರೆ ಸದಾ ಕಡಲಲ್ಲೇ ಇರುವ ಕಡಲ ಸಿಂಹಕ್ಕೂ ಸೂರ್ಯ ಸ್ನಾನ ಮಾಡಬೇಕೆನಿಸಿದರೆ ಹೇಗಿರುತ್ತೆ. ಸಾಮಾಜಿಕ ಜಾಲತಾಣದಲ್ಲಿ ಕಡಲ ಸಿಂಹವೊಂದು ಮನುಷ್ಯರು ಹಾಲಿಡೇ ಎಂಜಾಯ್ ಮಾಡುವಂತೆ ತಾನು ಕೂಡ ಬೀಚೊಂದರ ಲಾಂಗ್‌ನಲ್ಲಿ ಮಲಗಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಬೀಚೊಂದರ ಸಮುದ್ರಕ್ಕೆ ಅಂಟಿಕೊಂಡಂತೆ ಇರುವ ಪ್ರವಾಸಿ ರೆಸಾರ್ಟ್‌ವೊಂದಕ್ಕೆ ಕಡಲ ಸಿಂಹವೊಂದು ತೆವಳುತ್ತಾ ಮೇಲೇರಿ ಬರುತ್ತದೆ. ನಂತರ ಅಲ್ಲೇ ಇರುವ ಸ್ವಿಮಿಂಗ್ ಪೂಲ್‌ಗೆ ಹಾರುವ ಕಡಲ ಸಿಂಹ ಅಲ್ಲಿ ಈಜುತ್ತಾ ಎಂಜಾಯ್ ಮಾಡುತ್ತದೆ. ನಂತರ ಸ್ವಿಮ್ಮಿಂಗ್‌ ಫೂಲ್ ಸಮೀಪವಿರುವ ಖಾಲಿ ಜಾಗದಲ್ಲಿ ಇಟ್ಟಿದ್ದ ಎರಡು ಲಾಂಗ್‌ ಚೇರ್‌ಗಳ ಬಳಿ ಬರುವ ಕಡಲ ಸಿಂಹ ಅದರಲ್ಲಿ ಒಂದು ಲಾಂಗ್ ಚೇರ್‌ನಲ್ಲಿ ಮನುಷ್ಯರು ಬೀಚ್‌ನಲ್ಲಿ ಹೇಗೆ ಮಲಗುತ್ತಾರೋ ಹಾಗೆ ಮಲಗಿ ಎಂಜಾಯ್ ಮಾಡುತ್ತದೆ.

View post on Instagram

ತಿಮಿಂಗಿಲ ಬಾಯಲ್ಲಿ ಕಡಲ ಸಿಂಹ: ಬದುಕಿದ ಪರಿಯೇ ಅನನ್ಯ!

ಆದರೆ ಲಾಂಗ್ ಮೇಲೆ ಈಗಾಗಲೇ ಒಬ್ಬರು ವ್ಯಕ್ತಿ ಕುಳಿತುಕೊಂಡು ಈ ಕಡಲ ಸಿಂಹದ ಚಲನವಲನವನ್ನು ಗಮನಿಸುತ್ತಿರುತ್ತಾರೆ. ಅವರು ನೋಡು ನೋಡುತ್ತಿದ್ದಂತೆ ಸ್ವಿಮ್ಮಿಂಗ್ ಪೂಲ್‌ನಿಂದ ಮೇಲೆ ಜಿಗಿಯುವ ಕಡಲ ಸಿಂಹ ಸೀದಾ ಅವರು ಕುಳಿತಿದ್ದ ಲಾಂಗ್ ಚೇರ್ ಮೇಲೆ ಹತ್ತಿ ದೇಹವನ್ನು ನೀಡಿ ಮಲಗಿಕೊಳ್ಳುತ್ತದೆ. ಇದನ್ನು ನೋಡಿ ಆ ಪ್ರವಾಸಿಗ ಪೂರ್ತಿ ಶಾಕ್ ಆಗಿದ್ದಲ್ಲದೇ ಆತ ಆ ಲಾಂಗ್ ಚೇರ್‌ನಲ್ಲಿದ್ದ ಟವೆಲ್ ಒಂದನ್ನು ಕಿತ್ತು ಸಮೀಪದಲ್ಲಿದ್ದ ಚೇರ್ ಮೇಲೆ ಹಾಕುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿಗಳು ಕೂಡ ಮನುಷ್ಯರಂತೆ ಐಷಾರಾಮಿ ಜೀವನ ಮಾಡಲು ಬಯಸುತ್ತವೆ ಎಂಬುದನ್ನು ಖಚಿತಪಡಿಸುವಂತಿದೆ. 

ಸಮುದ್ರ ವಾಸ ಸಾಕಾಯ್ತು.... ರಸ್ತೆಗೆ ಬಂದೆ ನಾ... ಹೆದ್ದಾರಿಯಲ್ಲಿ ಕಾಣಿಸಿಕೊಂಡ ಅಪರೂಪದ ಸಮುದ್ರ ಸಿಂಹ
ಈಕ್ವೆಡಾರ್‌ನ (Ecuador)ಗ್ಯಾಲಪಗೋಸ್ ದ್ವೀಪಗಳಲ್ಲಿನ (Galápagos Island) ಬೀಚ್‌ಸೈಡ್ ರೆಸಾರ್ಟ್‌ವೊಂದರಲ್ಲಿ ಈ ಘಟನೆ ನಡೆದಿದೆ.ವೈರಲ್‌ಹಗ್ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಸಿಂಹದ ಈ ವರ್ತನೆಯಿಂದ ರೆಸಾರ್ಟ್‌ನಲ್ಲಿ ತಮ್ಮ ರಜೆ ಕಳೆಯಲು ಬಂದ ಪ್ರವಾಸಿಗರು ದಿಗ್ಭ್ರಮೆಗೊಂಡಿದ್ದಂತು ನಿಜ. ಸಮುದ್ರದಿಂದ ಹೊರಬರುವ ಸಮುದ್ರ ಸಿಂಹವು ಮೆಟ್ಟಿಲುಗಳನ್ನು ಹತ್ತಿ ಈಜುಕೊಳಕ್ಕೆ ಜಿಗಿಯುವುದನ್ನು ವೀಡಿಯೊ ತೋರಿಸುತ್ತದೆ. ಈ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಜನ ನೋಡಿದ್ದು ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಬಾಲಕಿಯ ಮೇಲೆ ದಾಳಿ ಮಾಡಿ ಎಳೆದೊಯ್ದ ಕಡಲ ಸಿಂಹ
ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕಡಲ ಕಿನಾರೆಯಲ್ಲಿ ಕುಳಿತ ಪುಟ್ಟ ಬಾಲಕಿಯೊಬ್ಬಳನ್ನು ಕಡಲ ಸಿಂಹ ಎಳೆದೊಯ್ದ ವಿಡಿಯೋ ಇದಾಗಿದೆ. 'ದ ವಾಷಿಂಗ್ಟನ್ ಪೋಸ್ಟ್' ಬಿತ್ತರಿಸಿರುವ ವರದಿಯನ್ವಯ ಕೆನಡಾದ ಪಶ್ಚಿಮ ತಟದಲ್ಲಿ ನಿರ್ಮಿಸಿರುವ ಡಕ್ ಮೇಲೆ ನಿಂತ ಜನರು ಅಲ್ಲಿಂದಲೇ ಮೀನುಗಳಿಗೆ ತಿಂಡಿ ಹಾಕಿ ಆನಂದಿಸುತ್ತಿದ್ದರು. ಅಲ್ಲೇ ಇದ್ದ ಕಡಲ ಸಿಂಹ ಕೂಡಾ ಇವರು ಹಾಕಿದ ತಿಂಡಿಯನ್ನು ತಿನ್ನುತ್ತಿತ್ತು. ಈ ಮಧ್ಯೆ ಬಾಲಕಿಯೊಬ್ಬಳು ಕಿನಾರೆಯಲ್ಲಿ ಕುಳಿತ್ತಿದ್ದಾಳೆ. ಇದೇ ವೇಳೆ ನೀರಿನಿಂದ ಹೊರ ಹಾರಿದ ಕಡಲ ಕಿನಾರೆ ಬಾಲಕಿಯ ಮೇಲೆ ದಾಳಿ ನಡೆಸಿ ಆಕೆಯನ್ನು ನೀರಿಗೆ ಎಳೆದೊಯ್ದಿದೆ. ಇದನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೂ ಲೆಕ್ಕಸದೇ ಮರುಕ್ಷಣವೇ ನೀರಿಗೆ ಜಿಗಿದು ಬಾಲಕಿಯನ್ನು ರಕ್ಷಿಸಿ ಮರಳಿ ತಟಕ್ಕೆ ಕರೆತಂದಿದ್ದಾನೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಸದ್ಯ ವಿಡಿಯೋ ಸೋಷಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.