ಸಮುದ್ರ ಬಿಟ್ಟು ರಸ್ತೆಯಲ್ಲಿ ಓಡಾಡಿದ ಸಮುದ್ರ ಸಿಂಹ ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯೋಗೋದಲ್ಲಿ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ಕ್ಯಾಲಿಫೋರ್ನಿಯಾ(ಜ.10): ಸಾಗರ ಸಮುದ್ರ ತೀರಗಳಲ್ಲಿ ವಾಸಿಸುವ ಸಮುದ್ರ ಸಿಂಹವೊಂದು ಸಾಗರವನ್ನು ಬಿಟ್ಟು ರಸ್ತೆಗೆ ಬಂದು ಓಡಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ. ಸಮುದ್ರ ಸಿಂಹವೊಂದು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ವಾಹನ ತುಂಬಿದ ಈ ರಸ್ತೆಯಲ್ಲಿ ಇದರ ರಕ್ಷಣೆಯ ಸಲುವಾಗಿ ಇಬ್ಬರು ವ್ಯಕ್ತಿಗಳು ಅದಕ್ಕೆ ವಾಹನಗಳು ಡಿಕ್ಕಿ ಹೊಡೆಯದಂತೆ ಅಡ್ಡಡ್ಡ ನಿಂತು ಅದು ರಸ್ತೆ ದಾಟಲು ಸಹಾಯ ಮಾಡುತ್ತಾರೆ. ನಂತರ ಸಮುದ್ರ ಸಿಂಹ ರಸ್ತೆ ದಾಟಿ ಇನ್ನೊಂದು ಭಾಗಕ್ಕೆ ಬಂದು ಸೇರುತ್ತದೆ. 

ಪ್ರಾಣಿಗಳು ಕೂಡ ಕೆಲವೊಮ್ಮೆ ಬರಬಾರದಲ್ಲಿ ಬಂದು ಸಂಕಷ್ಟಕ್ಕೆ ಸಿಲುಕಿ ಮನುಷ್ಯನ ಸಹಾಯ ಬಯಸುತ್ತವೆ ಇಲ್ಲೂ ಅದೇ ಆಗಿದೆ. ಕ್ಯಾಲಿಫೋರ್ನಿಯಾ (California) ದ ಸ್ಯಾನ್ ಡಿಯಾಗೋ (San Diego) ದಲ್ಲಿ ಜನನಿಬಿಡ ಹೆದ್ದಾರಿಯಲ್ಲಿ ಕುತೂಹಲಕಾರಿ ಸಮುದ್ರ ಸಿಂಹವೊಂದು ಎಡವಿ ಬಿದ್ದಿದೆ. ಈ ಪ್ರಾಣಿಯನ್ನು ಹಾದು ಹೋಗುವ ವಾಹನ ಚಾಲಕರು ಗಮನಿಸಿದ್ದಾರೆ ಮತ್ತು ಈ ಅಪರೂಪದ ಸಮುದ್ರ ಸಿಂಹದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಅದೃಷ್ಟವಶಾತ್ ಈ ಪ್ರಾಣಿಯನ್ನು ರಕ್ಷಿಸಲಾಯಿತು ಮತ್ತು ಅದರ ಆವಾಸಸ್ಥಾನಕ್ಕೆ ಅದನ್ನು ತೆಗೆದುಕೊಂಡು ಹೋಗಿ ಬಿಡಲಾಯಿತು.

Scroll to load tweet…

ಈ ವಿಡಿಯೋವನ್ನು ಅಲ್ಲಿನ ಗುಡ್ ನ್ಯೂಸ್ ವರದಿಗಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಡಲ ಸಿಂಹವು ಇನ್ನೊಂದು ಬದಿಯನ್ನು ತಲುಪಲು ಹೆದ್ದಾರಿಯಲ್ಲಿ ಅಡ್ಡ ನಿಂತು ಇಬ್ಬರು ಜನರು ಸಂಚಾರವನ್ನು ನಿಯಂತ್ರಿಸುತ್ತಿರುವುದು ಈ ವಿಡಿಯೋದಲ್ಲಿದೆ.

ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!

ಸ್ಯಾನ್ ಡಿಯಾಗೋದಲ್ಲಿ ಹೆದ್ದಾರಿ 94 ಅನ್ನು ದಾಟಲು ಪ್ರಯತ್ನಿಸುತ್ತಿರುವ ಸಮುದ್ರ ಸಿಂಹವನ್ನು ರಕ್ಷಿಸಲು ಚಾಲಕರು ತಮ್ಮ ಕಾರುಗಳನ್ನು ನಿಲ್ಲಿಸಲು ಹಿಂಜರಿಯಲಿಲ್ಲ. ಸಮುದ್ರ ತೀರದಿಂದ 3 ಮೈಲುಗಳಷ್ಟು ದೂರದಲ್ಲಿ ಈ ಹೆದ್ದಾರಿ ಇದೆ. ನಂತರ ಈ ಸಮುದ್ರ ಸಿಂಹವನ್ನು ಅದು ಇರಬೇಕಾದ ಸ್ಥಳಕ್ಕೆ ಬಿಡಲಾಯಿತು ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. 

ತಾಯಿ ಆನೆಯೊಂದು ಮರಿಯಾನೆಗೆ ತಿನಿಸುವ ಸುಂದರ ವಿಡಿಯೋ...

ಇತ್ತೀಚೆಗೆ ಮಾನವರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಜನವಸತಿ ಪ್ರದೇಶಗಳತ್ತ ಹುಲಿ, ಚಿರತೆಗಳು ಬರುವುದು ಸಾಮಾನ್ಯವಾಗಿದೆ. ಅದರಲ್ಲೂ ಚಿರತೆಗಳು ಕಾಡು ಪ್ರಾಣಿಗಳಾಗಿದ್ದರೂ ಇತ್ತೀಚೆಗೆ ಮಾನವರಿರುವ ಪ್ರದೇಶಗಳಿಗೆ ಅವುಗಳ ಅಲೆದಾಟ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಚಿರತೆ ದಾಳಿ ಸಾಮಾನ್ಯ ಎನಿಸಿ ಬಿಟ್ಟಿದೆ. ಚಿರತೆಗಳು ಸಾಮಾನ್ಯವಾಗಿ ನಾಯಿ, ಕುರಿಗಳನ್ನು ಬೇಟೆಯಾಡುತ್ತವೆ. 2015 ರ ಸಂಶೋಧನೆಯ ಪ್ರಕಾರ, ಮಹಾರಾಷ್ಟ್ರವು ಮೂರನೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದ ರಾಜ್ಯವಾಗಿದೆ. ನಂತರ ಮಧ್ಯಪ್ರದೇಶವಿದೆ. ಚಿರತೆಯೊಂದು ಮನೆಗೆ ನುಗ್ಗಿ ಸಾಕಿದ ನಾಯಿಯ ಮೇಲೆ ದಾಳಿ ಮಾಡಿರುವ ಈ ಭಯಾನಕ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪ್ರವೀಣ್‌ ಕಾಸ್ವಾನ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದರು. ಆದರೆ ಇದು ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.