Asianet Suvarna News Asianet Suvarna News

ತಿಮಿಂಗಿಲ ಬಾಯಲ್ಲಿ ಕಡಲ ಸಿಂಹ: ಬದುಕಿದ ಪರಿಯೇ ಅನನ್ಯ!

ದೈತ್ಯ ತಿಮಿಂಗಿಲ ಬಾಯಲ್ಲಿ ಸಿಕ್ಕ ಕಡಲ ಸಿಂಹ| ಅಪರೂಪದ ದೃಶ್ಯ ಸೆರೆಹಿಡಿದ ಸಮುದ್ರ ಜೀವಶಾಸ್ತ್ರಜ್ಞ ಚೇಸ್ ಡೆಕ್ಕರ್| ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯಲ್ಲಿ ನಡೆಯಿತು ಅಪರೂಪದ ಘಟನೆ| ತಿಮಿಂಗಿಲ ಬಾಯಿಂದ ತಪ್ಪಿಸಿಕೊಂಡ ಬಡಪಾಯಿ ಕಡಲ ಸಿಂಹ|

Rare Photo Captures Sea Lion In Whale Mouth
Author
Bengaluru, First Published Jul 31, 2019, 8:32 PM IST
  • Facebook
  • Twitter
  • Whatsapp

ಲಾಸ್ ಎಂಜಲೀಸ್(ಜು.31): ಕಡಲ ಸಿಂಹವೊಂದು ತಿಮಿಂಗಿಲ ಬಾಯಲ್ಲಿ ಸಿಕ್ಕು ಕೂಗಳತೆ ಅಂತರದಲ್ಲಿ ಪಾರಾದ ಅಪರೂದ ಘಟನೆ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯಲ್ಲಿ ನಡೆದಿದೆ.

ಚೇಸ್ ಡೆಕ್ಕರ್ ಎಂಬ ಸಮುದ್ರ ಜೀವಶಾಸ್ತ್ರಜ್ಞ ಈ ಅಪರೂಪದ ಘಳಿಗೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ತಮ್ಮ ಜೀವನದಲ್ಲಿ ಹಿಂದೆಂದೂ ಇಂತಹ ಘಟನೆಯನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ.

ಗುಂಪಿನಲ್ಲಿ ಆಹಾರ ಅರಸುತ್ತಾ ಹೊರಟಿದ್ದ ತಿಮಿಂಗಿಲದ ಎದುರಿಗೆ ಏಕಾಏಕಿ ಕಡಲ ಸಿಂಹ ಬಂದಿದೆ. ಈ ವೇಳೆ ಕಡಲ ಸಿಂಹವನ್ನು ಎಳೆದು ಬಾಯಿಗೆ ಹಾಕಿಕೊಂಡ ತಿಮಿಂಗಿಲ, ಅದನ್ನು ನುಂಗಬೇಕು ಎನ್ನುವಷ್ಟರಲ್ಲಿ ಕಡಲ ಸಿಂಹ ತಿಮಿಂಗಿಲದ ಬಾಯಿಂದ ತಪ್ಪಿಸಿಕೊಂಡು ಹೋಗಿದೆ.

ಚೇಸ್ ಡೆಕ್ಕರ್ ಅವರ ಈ ಫೋಟೋ ಇದೀಗ ಭಾರೀ ವೈರಲ್ ಆಗಿದ್ದು, ಅಪರೂಪದ ಫೋಟೋ ಕ್ಲಿಕ್ಕಿಸಿದ ಚೇಸ್ ಡೆಕ್ಕರ್ ಅವರಿಗೆ ಎಲ್ಲಡೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Follow Us:
Download App:
  • android
  • ios